ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡವಳ ፡ ಅದನ್ನು ತಿದ್ದಿಕೊಳ್ಳಬೇಕು. ಕೆಲವು ವೇಳೆ ಅಕಸ್ಮಾತ್ತಾಗಿ ನಮ್ಮಿಂದ ತಪ್ಪಿತವು ನಡೆದುಹೋದರೂ ಕೂಡ ಶಿಕ್ಷೆಯನ್ನು ತಪ್ಪಿಸಿಕೊಳ್ಳುವುದಕ್ಕೆ ಸ್ಕರ ಸುಳ್ಳು ಹೇಳಬಾರದು. ಈ ವಿಷಯದಲ್ಲಿ ದೊರೆ ಮತ್ತು ಬಂದೀ ವಾನರು. ಎಂಬ ಕಥೆಯು (ಕನ್ನಡ | ನೆಯ ಪುಸ್ತಕದಲ್ಲಿದೆ) ಒಳ್ಳೆಯ ದೃಷ್ಟಾಂತವಾಗಿದೆ. ಸತ್ಯವನ್ನು ಹೇಳತಕ್ಕವರಿಗೆ ಚಿತ್ತಶುದ್ಧಿಯಿರುವುದ ರಿಂದ ಮನಸ್ಸಿನೊಳಗೆ ಅಳುಕು ಇರುವುದಿಲ್ಲ. ಮುಖವು ಹೆಚ್ಚು ಬೀಳುವ ಸಂಭವವಿಲ್ಲ. ಅವರನ್ನು ಸತ್ಯಸಂಧರೆಂದು ಎಲ್ಲರೂ ಹೊಗಳುವರು. ಮತ್ತು ದೇವರೂ ಮೆಚ್ಚುವನು. (13) ಪ್ರಾಮಾಣಿಕತೆ, ಮಾತಿನಲ್ಲಿ ಮಾತ್ರವಲ್ಲದೆ ಸಕಲ ವಿಷಯಗಳಲ್ಲೂ ದಿಟವಾಗಿ ನಡೆ ಯುವುದೇ ಪ್ರಾಮಾಣಿಕತೆ, ಕಳ್ಳತನ, ಮನಸ್ಸಿನಲ್ಲೊಂದಿದ್ದರೆ ಹೊರಗೆ ಬೇರೊಂದನ್ನು ನಟಿಸುವುದು ಸುಳ್ಳು ಅಳ ತತೂಕಗಳನ್ನೂ ನಾಣ್ಯಗಳನ್ನೂ ಉಪಯೋಗಿಸಿ ಅಥವಾ ಕಡಿಮೆ ಕ್ರಯಕ್ಕೆ ಕೊಂಡು ಕೊಂಡು ಇತರರಿಗೆ ಮೋಸ ಮಾಡುವುದು. ಇತರರ ಸ್ಪನ್ನು ಅಪಹರಿಸಿ ತಾವು ಸಾಧುಗಳಂದು ತೋರ್ಪಡಿಸಿ ಕೊಳ್ಳುವುದು. ಲೆಕ್ಕ ಪತ್ರಗಳನ್ನು ಸುಳ್ಳಾಗಿ ತಿದ್ದಿ ಮೊದ ಲು ಇದ್ದುದೇ ಹೀಗೆಂದು ಸಾಧಿಸುವುದು. ಇಂಥವುಗಳೆಲ್ಲಾ ಪವಾಣಿ ಕತೆಗೆ ವಿರುದ್ಧವಾದದುರ್ಗುಣಗಳು, ಯಾವದಾದರೊಂದು ಸ್ವತ್ತು ಅಕಸ್ಮಾತ್ತಾಗಿ ಸಿಕ್ಕಿದರೆ ಅದರ ಮಾಲೀಕರಿಗೆ ತಲಪಿಸಬೇಕು. ಹಾಗೆ ಅವರನ್ನು ಹುಡುಕುವುದಕ್ಕೆ ತನಗೆ ಸಾಧ್ಯವಿಲ್ಲದಿದ್ದರೆ ಹಾಗೆ ಮಾಡಲು ಸರಾರದಿಂದ ನಿಯಮಿತರಾಗಿರತಕ್ಕೆ ಪೋಲೀಸ್ ಅಧಿಕಾರಿಗಳ ವಶಕ್ಕಾದರೂ ಕೊಟ್ಟು ಅವರಿಂದ ಕ್ರಮವಾದ ರತೀತಿಯನ್ನು ಪಡೆಯಬೇಕು. ಮಾತು ಮಾತಿಗೂ ಆಣೆಭಾಷೆಯ ನುಡಿ ಗಳನ್ನಾಡುತ್ತ ತಾವು ಕೇವಲ ಸತ್ಯವಂತರೆಂದೆನಿಸಿ ಕೊಳ್ಳಬೇಕೆಂಬುವ