ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ೬೧ narannnnnnnnnnnnnnnnnnnnnnnnnnnnnnnnnn ೨ಾಗಿ ಬಂದುವೇಳೆ ತನ್ನಿಂದ ಇಂಥ ಅಚಾತುರವು ನಡೆದುಹೋದರೆ ಶಾನಾಗಿ ಒಪ್ಪಿಕೊಂಡು ತಕ್ಕಷ್ಟು ದಂಡವನ್ನಾದರೂ ತೆತ್ತು ಬಿಡುವುದು ಯೋಗ್ಯವಾದ ಮಾರ್ಗವು, ಪ್ರಾಮಾಣಿಕತೆಯು ಸತ್ಯಕ್ಕೂ ಮೂಲಭೂತವಾದುದಾದ್ದರಿಂದ ಇದೊಂದಿಲ್ಲದಿದ್ದರೆ ಇತರ ಯಾವ ಸುಗುಣಗಳೆಷ್ಟಿದ್ದರೂ ಫಲವಿಲ್ಲ. ಪಾಮಾಣಿಕನಾದವನು ಆಗ್ಗೆ ತಿನ್ನುವುದಕ್ಕೆ ಗತಿಯಿಲ್ಲದಷ್ಟು ಕಡುಬಡವ ನಾದರೂ ದೇವರು ಅವನನ್ನು ಚೆನ್ನಾಗಿಯೇ ಪ್ರೀತಿಸುವನು. ಇತರರ ಸ್ವತ್ತು ಚೆನ್ನಾಗಿರುವುದೆಂದು ಭಾವಿಸಿ ಆಸೆಪಡುವುದು, ಇತರರಿಗೆ ಮನಃ ಪೂರ್ವಕವಾಗಿ ಕೆಡಕನ್ನು ಮಾಡಬೇಕೆಂಬದುರುದ್ದೇಶ, ಇತರರ ಎಲ್ಲಾ ವಸ್ತುಗಳ ತನಗೇ ಆಗಬೇಕೆಂಬ ದುರಾಶೆ, ಇಂಥವುಗಳಿಂದ ಜನರು ಅಪಾಮಾಣಿತರಾಗುವ ಸಂಭವವುಂಟು. ಅಧಿಕಾರಿಗಳಲ್ಲಿ ಕೆಲವರು ತಮಗೆ ದೊರೆಯುವ ಸಂಬಳವು ಜೀವ ನಕ್ಕೆ ಸಾಲದೆಂಬ ನೆಪದಿಂದ ಲಂಚಕ್ಕೆ ಕೈಯೊಡ್ಡಿ ಅನ್ಯಾಯಮಾಡುವರು. ಆದರೂ ಮೇಲ್ಪಟ್ಟವರ ಕಣ್ಣಿಗೇನೋ ಗೋಮುಖ ವ್ಯಾಘುದಂತೆ ಸೌಮ್ಯ ವಾಗಿ ತೋರುವರು, ತಮಗೆ ಆಪ್ತರಾದವರಾದರೂ ಈ ವಿಷಯವಾಗಿ ಕೇಳಿದರೆ ಲಂಚಾಕೊಟ್ಟವರಿಗೆ ಪ್ರತಿಫಲವಾಗಿ ತಾವು ಪರಮೋಪಕಾರ ಮಾಡಿದಂತೆ ಜಂಭ ಬಡಿದುಕೊಳ್ಳುವರು. ನಿಜವಾಗಿ ನೋಡಿದರೆ ಇದು ಉಪಕಾರವಲ್ಲ. ದಣಿಗೆ ಮಾಡುವ ಪರಮದೈಹವು, ಲಂಚವನ್ನು ಪಡೆದ ವರು ಮಾತ್ರವಲ್ಲದೆ ಅದನ್ನು ಕೊಟ್ಟವರೂ ಅಪಾಮಾಣಿಕರೇ, ತನಗೆ ಆಗಬೇಕಾದ ಕಾರ್ಯವು ನ್ಯಾಯವಾದುದಾದರೇ ತಾನಾಗಿಯೇ ಆಗುವುದು, ಹೀಗಿರುವಲ್ಲಿ ಲಂಚವನ್ನು ಕೊಡಬೇಕಾದುದೇತಕ್ಕೆ ? ಅನ್ಯಾಯವೆಂದು ತಾನು, ತಿಳಿದಿರುವುದರಿಂದಲೇ ಅದನ್ನು ನ್ಯಾಯದಂತೆ ತೋರ್ಪಡಿಸಬೇಕೆಂದ ಇವೆ? ಹೀಗೆ ಮಾಡುವುದು ! ಅನುಭವವಿಲ್ಲದವರು ವೈದ್ಯ ಮಾಡಲೆಳಸು