ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೬ ಕರ್ಣಾಟಕ ಗ್ರಂಥಮಾಲೆ mammaman ಕೆಲಸಗಳಲ್ಲಿ ಸ್ವತಃ ಸಹಾಯ ಮಾಡಿಕೊಟ್ಟು ದಯೆಯನ್ನು ತೋರ್ಪಡಿಸುವುದಕ್ಕೆ ತಕ್ಕ ಚೈತನ್ಯವಿಲ್ಲದವರು ವಾಗ್ರೂಪದಿಂದಲಾದರೂ ಇದನ್ನು ತೋರಿಸಬಹುದು, ದಯೆಯು ಯಾವ ರೂಪದಲ್ಲಿ ತೋರಬೇಕಾ ದರೂ ಹೃದಯವು ಒಳ್ಳೆಯದಾಗಿರಬೇಕು. ನಾವು ಏಕೆ ದಯಾಳುಗಳಾ ಗಿರಬೇಕು ? ಈ ಪ್ರಶ್ನೆಗೆ ಉತ್ತರ ಹೇಳುವುದು ಅಷ್ಟೇನೂ ಕಷ್ಟವಲ್ಲ. ಲೋಕದಲ್ಲಿ ಪ್ರತಿಯೊಬ್ಬರಿಗೂ ರೋಗ, ಶೋಕ, ಭಯ ಮೊದಲಾದವುಗ ಳಲ್ಲಿ ಯಾವುದೆಂದು ತೊಂದರೆಯಾದರೂ ಇದ್ದೇ ಇರುವುದಷ್ಟೆ ಹೊರಗೆ ನೋಡಿದರೆ ಎಷ್ಟೋ ಸುಖಿಗಳಾಗಿ ನಮ್ಮ ಕಣ್ಣಿಗೆ ಕಾಣತಕ್ಕೆ ಎಂಥವ ರಿಗೂ ಯಾವುದಾದರೊಂದು ಬಗೆಯ ಮನೋವ್ಯಥೆಯಾದರೂ ಇಲ್ಲದೆ ಇರುವುದಿಲ್ಲ. ಅಂಥವರು ನಮಗೆ ಗೋಚರವಾದ ಬಳಿಕ ನಾವು ಅವರ ವಿಷಯದಲ್ಲಿ ಕಾವ್ಯ ದಿಂದ ನಡೆಯದೆ ಅನುತಾಪವನ್ನು ತೋರಿಸಬೇಕಾ ದುದು ನಮ್ಮ ಕರ್ತವ್ಯ. ಆದರೆ ಯಾರಾರಿಗೆ ಏನೇನು ವ್ಯಥೆಯಿರುವುದೆಂ ಬುದು ಎಷ್ಟೊವೇಳೆ ನಮಗೆ ಗೋಚರವಾಗದೆಯೇ ಇರುವುದೂ ಉಂಟು. ಆದುದರಿಂದ ನಾವು ನಮ್ಮ ಸ್ವಭಾವವನ್ನೆ ದಯಾಮಯವನ್ನಾಗಿ ಮಾಡಿ ಕೊಂಡಿದ್ದರೆ ಇತರರಿಗೆ ಸರದಾ ಹಿತವನ್ನೇ ಆಚರಿಸಲು ಅನುಕೂಲವಾಗು , ವುದು. ಹಾಗಿಲ್ಲದೆ ನಾವು ಕೊರಪ್ಪ ಭಾವವನ್ನು ಪಡೆದಿದ್ದು ಇತರರ ವ್ಯಥೆಯು ನಮಗೆ ಗೊತ್ತಾಗದೆ ಇದ್ದಾಗ ನಾವೇನಾದರೂ ದುಡುಕಿ ಮಾತಾಡಿದರೆ ಹನಿಯ ಹುಣ್ಣಿನಮೇಲೆ ಉಪ್ಪು ನೀರು ಚಿಮುಕಿಸಿದಂತೆ ಆಗಿ ಅವರ ಮನೋವ್ಯಥೆಯು ನಮ್ಮ ಕ್ರದಿಂದ ಮತ್ತಷ್ಟು ಹೆಚ್ಚುವ ಸಂಭ ವವುಂಟು. ದಯೆಯಿಂದ ನುಡಿಯುವ ನುಡಿಯ ಕೂಡ ಇತರರಿಗೆ ಮನ ಶ್ಯಾಂತಿಯನ್ನೂ ತೃಪ್ತಿಯನ್ನೂ ಉಂಟುಮಾಡಿ ಅವರ ಬೇದವನ್ನು ತಗ್ಗಿ ಸುವುದು. ಸಮಯದಲ್ಲಿ ಆಡಿದ ' ಅಯ್ಯೋ ಪಾಪ' ಎಂದು ಅನುತಾಪ ವನ್ನು ಸೂಚಿಸುವ ಒಂದು ಮೃದುವಾದ ಮಾತೂ ಇತರರಿಗೆ ಎಷ್ಟೋ