ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡವಳಿ ೬೯ mannnnnnnn ಆಗಲಿ ಕ್ಲ್ಯ ದಿಂದ ನಡೆಯುವುದಕ್ಕೆ ಸಾಮಾನ್ಯವಾಗಿ ತಿಳವಳಕ ಸಾಲ ದಿರುವುದೇ ಮುಖ್ಯವಾದ ಕಾರಣವು, ಅಸೂಯೆ, ಸಿಡುಕು, ಕೋಪ ತಾಪಗಳು, ಇಂಥವುಗಳಿಗೆ ಮನಸ್ಸಿನಲ್ಲಿ ಅವಕಾಶಕೊಡಬಾರದು. ಏಕೆಂದರೆ-ಇವು ಕ್ರೂರ ಬುದ್ಧಿಯನ್ನು ಹುಟ್ಟಿಸುವುವು ಇತರರು ಸಹಜವಾಗಿ ಮಾಡಿದುದನ್ನು ಕೂಡ ತಪ್ಪಾಗಿ ಎಣಿಸುವುದು, ಅಪ್ರಸನ್ನತೆ, ಚೇಷ್ಟೆ, ದೈಹಜೆಂತೆ, ಪರದೂಷಣೆ, ಜಗಳ ಇಂಥವುಗಳಲ್ಲಾ ಕ್ರದ ವರ್ಗಕ್ಕೆ ಸೇರಿದುವುಗಳು. ಇತರರು ತಮಗಿಂತಲೂ ದುರ್ಬಲರೆಂದು ತಿಳಿದು ತಿಳಿದೂ ಉದ್ದೇಶ ಪೂರಕವಾಗಿ ಅವರನ್ನು ಹೊಡೆದು, ಬೈದು, ಅಥವಾ ಕುಚೇಷ್ಟೆ ಮೊದಲಾದುವನ್ನು ಮಾಡಿ ನೋಯಿಸುವುದು ಬಹಳ ಪಾಪಕೃತ್ಯವು. ಒಬ್ಬ ಮನುಷ್ಯನು ಮತ್ತೊಬ್ಬನನ್ನು ಪ್ರತ್ಯಕ್ಷವಾಗಿ ಹೊಡೆ ಯದೆಯೇ ಇದ್ದರೂ ಇತರ ವಿಧಗಳಲ್ಲಿ ಅವನಿಗುಂಟುಮಾಡುವ ಯಾತ ನೆಯು ಅನಿರಚನೀಯವಾಗಿರಬಹುದು ದೇವರು ಇತರರಿಗಿಂತ ಮೇಲಾದ ಶಕ್ತಿಗಳನ್ನು ಕೊಟ್ಟಿರುವುದು ಆ ದುರ್ಬಲರನ್ನು ನೋಯಿಸುವುದಕ್ಕಲ್ಲ ನಮ್ಮ ಕೈಲಾದ ಮಟ್ಟಿಗೂ ಅವರಿಗೆ ಸಹಾಯಮಾಡುವುದಕ್ಕೆ ಎಂಬುದನ್ನ ರಿತು ನಡೆಯಬೇಕು. 16 ಮೈತ್ರಿ. ಲೋಕದಲ್ಲಿ ಸ್ನೇಹಕ್ಕೆ ಮಾರಿದ ಬಾಂಧವ್ಯವೇ ಇಲ್ಲವೆನ್ನುವರು. ಎಷ್ಟೋ ಸಂದರ್ಭಗಳಲ್ಲಿ ತಾಯ್ತಂದೆಗಳಿಗಿಂತಲೂ ಪತ್ನಿ ಪುತ್ರರಿಗಿಂತಲೂ ಮಿತ್ರರೇ, ಪರಮಾಪ್ತರು ಎಂದು ಭಾವಿಸಿರುವುದಕ್ಕೆ ಎಷ್ಟೋ ಉದಾಹರಣೆ ಗಳುಂಟು. ತತ್ರಾಪಿ ಕಷ್ಟ ಕಾಲದಲ್ಲಿ ಇತರರೆಲ್ಲರೂ ಕೈಬಿಟ್ಟಾಗ ನಿಜವಾದ ಸ್ನೇಹಿತರೇನೋ ಎಂದಿಗೂ ಕೈಬಿಡುವುದಿಲ್ಲ. ಮೈತ್ರಿಯೆಂಬ ಚಿನ್ನದ ಯೋಗ್ಯತೆಯನ್ನು ಬಡತನವಂಬ ಒರೆಗಲ್ಲಿನಿಂದ ಪರೀಕ್ಷಿಸಬೇಕೆಂಬ ಗಾದೆ ಯೇ ಉಂಟು,