ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

o' ಕರ್ಣಾಟಕ ಗ್ರಂಥಮಾಲೆ ಉತ್ತಮರ ಸ್ನೇಹವು ಶುಕ್ಲಪಕ್ಷದ ಚಂದ್ರನಂತೆಯ ಮಧ್ಯಾಹ್ಯ ತರದ ನೆರಳಿನಂತೆಯ ಕಾಲಕ್ರಮೇಣ ಬೆಳೆಯುತ್ತ ಬರುವುದಲ್ಲದೆ ಕನ್ನ ಡಿಯಂತೆ ಪ್ರಕಾಶವಾಗಿ ಸೌಜನ್ಯವನ್ನು ಪ್ರತಿಫಲಗೊಳಿಸುವುದು. ಅಧಮರ ಸ್ನೇಹವಾದರೋ ಕೃಷ್ಣಪಕ್ಷದ ಚಂದ್ರನಂತೆಯ ಪ್ರಾತಃಕಾಲದ ನರಳ ನಂತಳು ಕಾಲಕ್ರಮೇಣ ಕ್ಷೀಣಿಸುತ್ತಲೂ ಮಸಿಯ ಓಡಿನಂತೆ ಕೊಳಕು ತನದಿಂದ ಕೂಡಿದ ಇರುವುದು, ಪರಸ್ಪರ ಪ್ರೀತಿಸುವುದು ನಂಬುವುದು, ದಯೆಯಿಂದ ನಡೆದು ಕೊಳ್ಳುವುದು ಇಂಥವುಗಳೆಲ್ಲಾ ಮೈತ್ರಿ ಯ ಕಾಠ್ಯಗಳು, - ನಿಜವಾದ ಮೈತ್ರಿಯು ಸುಖಕಾಲದಲ್ಲಿ ಸಂತೋಷವನ್ನು ಹೆಜ್ಜೆ ಸುವುದು ಹೇಗೆಂದರೆ-ನಾವು ಸುಖಪಡುತ್ತಿರುವಾಗ ನಮ್ಮನ್ನು ನೋಡಿ ಮೆಚ್ಚತಕ್ಕವರಿದ್ದರೆ ನಮ್ಮ ಮನೋಲ್ಲಾಸವು ಇನ್ನೂ ಹೆಚ್ಚುವುದು. ಮತ್ತು ಮನುಷ್ಯರು ಇನ್ನು ಯಾವ ವಿಧಗಳಲ್ಲಿಯೂ ಅನುಭವಿಸಲಾರದಂಥ ಶುದ್ಧವಾದ ಸಂತೋಷವು ಸತ್ಪುರುಷರ ಮೈತ್ರಿಯಿಂದ ಲಭಿಸುವುದು, ಇತರ ವಿಧಗಳಿಂದ ಉಂಟಾಗುವ ಸಂತೋಷವಾದರೂ ಯಾವುದಾದರೂ ಒಂದು ಬಗೆಯ ಕಳಂಕದಿಂದ ಬೆರೆದೇ ಇರುವುದು. ಮೈತ್ರಿಯಿಂದ ಆಗುವ ಸಂತೋಷದಲ್ಲಿ ಅಂಥನತೆಯಿಲ್ಲದಿರುವುದರಿಂದಲೇ ಅದು ಶುದ್ಧವಾದುದೆನ್ನುವರು. ಅಲ್ಲದೆ ಮೈತ್ರಿಯು ಕಷ್ಟ ಕಾಲದಲ್ಲಿ ಉಂಟಾಗು ನ ದುಃಖವನ್ನು ತಗ್ಗಿಸುವುದು. ಹೇಗೆಂದರೆ:-ಮಿತ್ರರಾದವರು ನಮ್ಮ ದುಃಖದಲ್ಲಿ ಒಂದು ಭಾಗವನ್ನು ತಾವು ಹೊತ್ತುಕೊಂಡು, ಅದರ ಭಾರವು ನಮಗೆ ಕಡಮೆಯಾಗುವಂತೆ ಮಾಡುತ್ತಾರೆ. ಅಂಥ ಸಮಯಗಳಲ್ಲಿ ಮಿತ್ರರ ಸಮಾಧಾನೋಕ್ತಿಗಳಿಂದ ನಮಗೆ ಈ ಪ್ರಪಂಚದಲ್ಲಿ ಪುನಃ ಆಸೆಯು ಹುಟ್ಟುವುದು, ಸ್ನೇಹಿತರ ಬುದ್ದಿವಾದದಂತೆ ನಡೆಯುವುದರಿಂದ ಚಿತ್ರ ವಾದ ಅಥವಾ ಆಗಬಹುದಾದ ಎಷ್ಟೋ ಅಪಾಯಗಳನ್ನು ತಪ್ಪಿಸಿ