ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ , ಮಾತ್ರ ಪಡೆದಿರುವುದರಿಂದ ಕೆಲವು ತೊಂದರೆಗಳA ಉಂಟು. ಆದುದರಿಂದ ಕಾಲಾನುಸಾರವಾಗಿ ಸ್ನೇಹಿತರ ಸಂಖ್ಯೆಯು ಹೆಚ್ಚಲೂ ಬಹುದೆಂಬರು ಇನ್ನು ಕೆಲವರಮತವು. ಆದಳಿ ಹೀಗೆ ಹೊಸಹೊಸ ಸ್ನೇಹಿತರುಗಳನ್ನು ಪಡೆಯುತ್ತ ಬರುವುದರಿಂದ ಹಳಬರ ಮೈತ್ರಿಗೆ ಯಾವ ಕೊರತೆಯು ಉಂ ಟಾಗಬಾರದು. ಮತ್ತು ಹೊಸಸ್ನೇಹಿತರುಗಳನ್ನು ಪಡೆಯುವುದರಲ್ಲಿ ಹಳ ಬರಾದ ಮಿತ್ರರು ಯಾವ ಆಕ್ಷೇಪಣೆಯನ್ನೂ ಮಾಡಕೂಡದು. ಒಂದು ವೇಳೆ ಹಾಗೆ ಆಕ್ಷೇಪಿಸುವವರಾದರೆ ಅವರು ನಿಜವಾದ ಮಿತ್ರರೇ ಅಲ್ಲ, ಅಂಥವರನ್ನು ತೊರೆಯುವುದೇ ಮೇಲು. ನ್ಯಾಯವಾಗಿ ನೋಡುವಲ್ಲಿ ಮಿತ್ರರ ಸಂಖ್ಯೆಯು ಹೆಚ್ಚುವುದರಿಂದ ಹಿಂದಿನವರಿಗೆ ಯಾವ ತೊಂದರೆಯೂ ಇಲ್ಲ. ಒಂದು ದೀಪದಿಂದ ಮತ್ತೊಂದು ದೀಪವನ್ನೂ ಅದರಿಂದ ಇನ್ನೂ ದನ್ನೂ ಹೀಗೆ ಎಷ್ಟು ದೀಪಗಳನ್ನು ಹೊತ್ತಿಸಿದರೂ ಅವಕ್ಕೆ ಪರಸ್ಪರವಾಗಿ ಯಾವ ಉಪಹತಿಯಾದರೂ ಉಂಟೆ ? ಆದರೂ ಒಟ್ಟಿನಲ್ಲಿ ನೋಡಿದರೆ ಸ್ನೇಹಿ ತರ ಸಂಖ್ಯೆಯು ಮಿತಿಮೀರದಿರುವಂತೆ ನೋಡಿಕೊಳ್ಳುವುದೇ ಉಚಿತವು. 17. ಸ ರ್ಧೆ, * ನರನೋಡಿ ಬಾಳೋ ನಿರ್ಭಾಗ್ಯವುರುವ ' ಎಂದು ಲೋಕದಲ್ಲಿ ಉದಯ ಉಂಟು, ಇತರರು ಕೆಲಸಮಾಡುತ್ತಿರುವುದನ್ನು ಕಂಡು ತನೂ ಅವರನ್ನು ಮಾರಿಸಬೇಕಂದೋ ಅಥವಾ ಅವರಿಗಿಂತ ತಾನು ಕಡಮಯಾಗ ಕೂಡದೆಂದೋ ಹೊರಾಡತಕ್ಕುದೇ ಸ್ಪರ್ಧೆಯೆನಿಸುವುದು. ಒಬ್ಬರಂತ ತಾನೂ ಆಗಬೇಕೆಂಬ ಆಸೆಯಿರುವುದೇ ಇದಕ್ಕೆ ಕಾರಣವು ಇತರರನ್ನು ನೋಡಿ ಅವರಂತೆ ಆಚರಿಸುವುದರಲ್ಲಿ ಎರಡು ವಿಧಗಳುಂಟು ಅವರಂತ ನಾವೂ ಆಗಬೇಕೆಂದು ಮನಃಪೂರಕವಾಗಿ ಯತ್ನಿಸಿ ಶ್ರದ್ದೆಯಿಂದ ಆಚರಿ ಸತಕ್ಕದು ಮೊದಲನೆಯ ವಿಧ. ಈ ರೀತಿಯಾಗಿ ಮಾಡತಕ್ಕವರಿಗೆ ಮಾದರಿ ಯಾಗಿರುವವರಲ್ಲಿ ಗೌರವ ಬುದ್ಧಿಯಿರುವುದು. ದೊಡ್ಡವರಂತೆ ನಡೆಯಲು 10