ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ೭೫ ಸ್ಪರ್ಧೆಯು ಸಮಸ್ತ ವಿಷಯಗಳಲ್ಲೂ ಅತ್ಯಾವಶ್ಯಕವಾದ ಸುಧ ನವೇ ಆದರೂ ಇದರ ಮಹಿಮಯು ಈ ಮುಂದೆ ಹೇಳುವಂಥ ಕಲವು ಅಂಶಗಳಲ್ಲೇನೂ ಸ್ಪಷ್ಟವಾಗಿ ತೋರುವುದು. (1) ಗ್ರಂಥರಚನೆ-ಗ್ರಂಥ ಗಳನ್ನು ರಚಿಸುವುದರಲ್ಲಿ ಜನಗಳು ಬಹಳ ಮಟ್ಟಿಗೂ ಒಬ್ಬರನ್ನು ನೋಡಿ ಮತ್ತೊಬ್ಬಳು ಹೋರಾಡುತ್ತ ಬಂದುದರಿಂದ ಅನೇಕ ಗ್ರಂಥಗಳು ಹುಟ್ಟಿ ಲೋಕದಲ್ಲಿ ಎಷ್ಟೋ ವಿಧವಾದ ತಿಳಿವಳಿಕೆಯು ಹೆಚ್ಚುವುದಕ್ಕೆ ಅವಕಾಶ ವಾಯಿತು. ಮತ್ತು ಅನೇಕ ಗ್ರಂಥಕರ್ತರೂ ಒಳ್ಳೆಯ ಕವಿಗಳಾಗಿ ಶಾಶ್ವತವಾದ ಕೀರ್ತಿಯನ್ನು ಪಡೆದರು. 2. ವ್ಯಾಪಾರ. ವ್ಯಾಪಾರದಲ್ಲಿಯೂ ಸೃರ್ಧೆಯು ಬಲು ಮುಖ್ಯ. ಇದರಲ್ಲಿ ಸ್ಪರ್ಧೆ ಹುಟ್ಟಿದರೆ ಪದಾರ್ಥಗಳು ಕೇವಲ ಅಗ್ಗವಾಗಿ ಅಥವಾ ತಗಾಗಿ ಆಗದೆ ಕಾಲ ದೇಶ ಉತ್ರ ಇತ್ಯಾದಿಗಳಿಗೆ ತಕ್ಕ ಹಾಗೆ ಒಂದು ಸರಿಯಾದ ಬೆಲೆಗೆ ದೊರೆಯುವುವು. ಮತ್ತು ಪದಾರ್ಥಗಳ ಯೋಗ್ಯತೆಯ ಹೆಚ್ಚಬೇ ಕಾಗುವುದು. ಒಂದು ಬಡಕಲು ಕುದುರೆಯನ್ನೂ ಒಂದು ಒಡಕಲು ಬಂಡಿಯನ್ನೂ ಇಟ್ಟು ಕೊಂಡಿರತಕ್ಕವನೊಬ್ಬನು ಘಂಟೆಗೆ ಬಂದು ಬಾ ಯಂತೆ ಬಾಡಿಗೆಯನ್ನು ಕೊಡಬೇಕೆಂದು ಕೇಳುತ್ತಿರುವಾಗ ಬಲವಾದ ಕುದುರೆಯನ್ನೂ ಒಳ್ಳೆಯ ಬಂಡಿಯನ್ನೂ ಪಡೆದಿರತಕ್ಕವನೂ ಕೂಡ ಅದೇ ದರದಂತ ಬಾಡಿಗೆಗೆ ಬರುತ್ತೇನೆಂದರ ಜನಗಳು ಈ ಎರಡನೆಯವನ ಬಂ ಡಿಗೇ ಹೋಗುವರು ಆಗ ಮೊದಲನೆಯವನು ತನ್ನ ವ್ಯಾಪಾರವನ್ನುಳಿಸಿಕ ಳ್ಳುವುದಕ್ಕೂಸ್ಕರ ತಾನೂ ಒಳ್ಳೆಯಗಾರಿ ಕುದುರೆಗಳನ್ನಿರಲೇಬೇಕಾಗು ವುದು. ಇದರ ಪರಿಣಾಮವು ಪ್ರಯಾಣಿಕರಿಗೆ ಅನುಕೂಲವಾಗುವುದು, ಬ್ಯಾಬಿರದಲ್ಲಿ ಹೀಗೆ ಸ್ಪರ್ಧೆಯಿಲ್ಲದೆ ಸ್ಕೇಚ್ಛವನೆಯೇ ಇರುತ್ತಿದ್ದರೆ ಹೇಳಿದುದೇ ಕ್ರಯವಾಗಿ ವಸ್ತುಗಳನ್ನು ಕೊಳ್ಳುವವರಿಗೆ ಅಥವಾ ಉತ್ರ