ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೬ osow siromermanowania numraversomvännen o no se ಕರ್ಣಾಟಕ ಗ್ರಂಥಮಾಲೆ ಮಾಡುವವರಿಗೆ ತುಂಬನಷ್ಟವಾಗಬೇಕಾಗುತ್ತಿದ್ದಿತು. ಪೂರ್ವದಲ್ಲಿ ಇಂಡಿ ಯಾದೇಶದ ವ್ಯಾಪಾರವೆಲ್ಲಾ ಪೋರ್ಚುಗೀಸರ ಕೈಯಲ್ಲೇ ಇದ್ದಾ ಗಲೂ ಅಲ್ಲಿಂದೀಚೆಗೆ ನಮ್ಮ ಇಂಡಿಯಾ ದೇಶದ ರಾಜರುಗಳು ಹೊರದೇಶ ಗಳವರ ಕಂಪೆನಿಗೆ ವ್ಯಾಪಾರವನ್ನು ಒಟ್ಟು ಗುತ್ತಿಗೆಗೆ ಕೊಡುತ್ತಿದ್ದಾಗಲೂ ಹೀಗೆಯೆ-ಅಂದರೆ ಅವರು ಹೇಳಿದುದೇ ಕ್ರಯವಾಗುತ್ತಿದ್ದಿತು. ಮತ್ತು ಅವರು ಎಂಥ ಕಿಳ್ಳರದ ದಾರ್ಥಗಳನ್ನೇ ತಂದು ಒದಗಿಸಿದರೂ ಬೇರೆ ಮಾರ್ಗ ವಿಲ್ಲದುದರಿಂದ ಅವನ್ನೇ ಕೊಂಡುಕೊಳ್ಳಬೇಕಾಗಿರುತಿದ್ದಿತು. ಈಗ ಲಾದರೋ ಈ ನಮ್ಮ ಇಂಡಿಯಾದೇಶದ ಸಂಗಡ ಯಾರುಬೇಕಾದರೂ ವ್ಯಾಪಾ ರಮಾಡಬಹುದೆಂದು ಆಗಿರುವುದರಿಂದ ಎಲ್ಲಾ ದೇಶಗಳ ವ್ಯಾಪಾರಿಗಳೂ ಇತ ರರು ತಯಾರಿಸುವ ವಸ್ತುಗಳಿಗಿಂತ ತಮ್ಮ ವೇ ಮೇಲಾಗಿರಬೇಕೆಂದು ಇತರರಿ ಗಿಂತಲೂ ಅಗ್ಗವಾಗಿಮಾರಿ ಹೆಚ್ಚು ಗಿರಾಕಿಗಳನ್ನೂ ಸಂಪಾದಿಸಬೇಕೆಂದೂ ಟೋ ಖಿಂದ ಹೋರಾಡುತ್ತಿರವರು. ತಿ, ಕೈಗಾರಿಕೆಗಳು ಅಭಿವೃದ್ಧಿಗೆ ಬರುವುದಕ್ಕೂ ಸ್ಪರ್ಧೆಯು ಸಹಾಯಕಾರಿಯು ಹೇಗೆಂದರೆ-ಅನೇಕರು ನಿರಿಸಿದ ವಸ್ತುಗಳನ್ನೆಲ್ಲಾ ತರಿಸಿ ಒಂದು ಕಡೆಗೆಸೇರಿಸಿ ಪರಸ್ಪರ ಹೋಲಿಸಿ ಮೇಲಾದ ಪದಾರ್ಥಗಳನ್ನು ತಯಾರಿಸಿದವರಿಗೆ ಬಹುಮಾನ ಮೊದಲಾದುವುಗಳನ್ನು • ಕೊಡುವುದರ ಮೂಲಕ ಪ್ರೋತ್ಸಾಹವನ್ನುಂಟುಮಾಡುತ್ತ ಬಂದರೆ ಸ್ಪರ್ಧೆಯು ಹುಟ್ಟಿ ಕಸಬುದಾರರೆಲ್ಲು ಮೇಲಾದ ವಸ್ತುಗಳನ್ನೇ ಹೆಚ್ಚಾಗಿ ತಯಾರಿಸಲು ಅನು ಕೂಲವಾಗುವುದು. ಈ ವಿಧವಾದ ವಸ್ತುಪ್ರದರ್ಶನಕ್ಕೆ ಇಂಗ್ಲಿಷಿನಲ್ಲಿ ಎಕ್ಸಿಬಿರ್ಷ' ಎಂದು ಹೆಸರು. ಇದನ್ನು 1861 ನೆಯ ಇಸವಿಯಲ್ಲಿ ಶ್ರೀಮ ಹಾರಾಜ್ಯವರಾಗಿದ್ದ ವಿಕ್ಟೋರಿಯ ಚಕ್ರವರ್ತಿಯವರು ಹೊಸದಾಗಿ ಏರ್ಪಡಿಸಿದರು. ಅಲ್ಲಿಂದೀಚೆಗೆ ಅನೇಕರು ಹಲವು ಬಗೆಯ ಯಂತ್ರಗಳು ಮೊದಲಾದುವನ್ನು ಹೊಸಹೊಸದಾಗಿ ಕಂಡುಹಿಡಿಯುತಬಂದರು. ಇದರಿಂದ