ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೨ ಕರ್ಣಾಟಕನಂದಿನಿ. ಬಾ” ಎಂದು ಹೇಳಿ ಆತನನ್ನು ಕಳುಹಿಸಿದನು, ಮುರ್ಗಾ ದಾಸನು ಅತ್ಯಾತುರದಿಂದ ಗುಡಾರದೊಳಕ್ಕೆ ಹೋಗಿ ಸ್ವಲ್ಪ ಹೊತ್ತಿಗೆ ಹಿಂತಿರುಗಿ ಬಂದು ದುಗುಡದಿಂದ “ ನಯನಪಾಲಮಹಾರಾಚಾ ! ನಮಗಿನ್ನೇನು ಗತಿ ? ಕುಮಾರ ಅಜಿತಸಿಂಗನು ಪರಲೋಕಗತನಾದನು, ನಮ್ಮ ಅದೃಷ್ಟವು ಹೀಗಿರುವದೇ ?' ಎಂದು ಕಣ್ಣೀರು ಸುರಿಸಿದನು. ನಯನಪಾಲನು ತನ್ನ ಮನಸಿಗುಂಟಾದ ಆನಂದವನ್ನು ಹೊರಪಡಿಸದೆ ತಡೆದು ಕುಟಿಲಶೋಕದಿಂದ ಮುಖವನ್ನು ತಗಿಸಿ ಅಯಾ! ವಿವೇಕಿಗಳಾದ ನಿನಗೆ ನಾನು ಹೇಳುವದೇನಿದೆ ? ವಿಚಾರವೇನೋ ಶೋಚನೀಯವೇ ಸರಿ ; ಆದರೂ ದೈವೇಚ್ಛೆಯಲ್ಲಿದ್ದುದು ಆಗಿಹೋಯಿತು. ಇನ್ನು ಅತ್ತು, ಫಲವಿಲ್ಲ, ಎಲ್ಲರನ್ನೂ ಸಮಾಧಾನಪಡಿಸಿ -ಶವವನ್ನು ಸಾಗಿಸುವ ಪ್ರಯತ್ನ ಮಾಡು ” ಎಂದನು. ದುರ್ಗಾದಾಸನು – ನಿಟ್ಟುಸಿರಿಟ್ಟು – ಅದನ್ನು ಕೇಳಿ ಬಂದೆನು, ಚಂದ್ರಾವತಿದೇವಿಯು, ತನ್ನ ಮಗನನ್ನು ತನ್ನ ಹೊರತು ಮತ್ತಾರೂ ಮುಟ್ಟಲಾಗದೆಂದು ಹಟ ತೊಟ್ಟು ಕೂತಿರುವಳು ” ಎಂದು ಹೇಳಿದನು. ನಯನ ಪಾಲನು ಆಕೆಯ ಇಷ್ಟದಂತೆಯೇ ಇತ್ಯರ್ಥಮಾಡಿ ಬರು ವಂತೆ ಹೇಳಿ, ಅಜಿತಸಿಂಗನ ಮರಣವಾರ್ತೆಯಿಂದ ತನ್ನ ತಾನೇ ನಲಿದಾಡುತ್ತಿದ್ದನು.