ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

\ ಶ್ರೀ || ನ' ಡೆ ವಳಿ. P����, ಪೀರಿಕೆ. ಮನುಷ್ಯರು ಸಂಘದಲ್ಲಿ ಜೀವಿಸತಕ್ಕೆ ಪ್ರಾಣಿಗಳು, ಲೋಕ ದಲ್ಲಿ ಗುಂಪುಗುಂಪಾಗಿ ಬಾಳುವ ಪ್ರಾಣಿಗಳೆಲ್ಲಾ ಸಾಮಾನ್ಯವಾಗಿ ಬಕ್ಕ ಟ್ಟಾಗಿ ಕೆಲಸಮಾಡುತ್ತ, ತಮ್ಮ ಗುಂಪಿನಲ್ಲಿರುವ ಪ್ರತಿಯೊಂದು ವ್ಯಕ್ತಿಗೂ ಒಳ್ಳೆಯದಾಗತಕ್ಕೆ ಏರ್ಪಾಡುಗಳನ್ನು ಮಾಡಿಕೊಂಡಿರುತ್ತವೆ. ಇವುಗಳ ಪ್ರತಿಯೊ೦ದು ಗುಂಪಿಗೂ ಒಂದೊಂದು ಅಧಿಸತಿಯುಂಟು, ಉಳಿದವುಗಳೆಲ್ಲಾ ಅದರ ಅನುಜ್ಞೆಯಂತೆ ನಡೆವುವು. ಈ ಪ್ರಾಣಿಗಳಲ್ಲಿ ಪರಸ್ಪರಸಹಾಯ, ದೊಡ್ಡವರು ಚಿಕ್ಕವರು ಎಂಬ ತಾರತಮ್ಯ, ಸ್ನೇಹ, ಕರು೧, ಸರದಾಕೆಲಸ ಮಾಡುತ್ತಿರುವ ಸ್ವಭಾವ-ಇಂತಹ ನಡವಳಿಕೆಗಳು ಬಲುಮಟ್ಟಿಗೂ ಬೇರೂರಿರುತ್ತವೆ. ಇರುವೆ, ಜೇನುಹುಳು, ಆನೆ-ಇಂತಹ ಕೆಲವು ಪ್ರಾಣಿಗಳು ಮೇಲೆ ಕಂಡ ಅಂಶಗಳಿಗೆ ಒಳ್ಳೆಯ ಉದಾಹರಣೆಗಳಾಗಿವೆ. ಈ ಪ್ರಾಣಿಗಳಿಗೆ ಚಟುವಟಿಕೆಯ, ಬುದ್ಧಿ ವಿಕಾಸವೂ ಇತರ ಪ್ರಾಣಿಗಳ ಗಿಂತ ಸ್ವಲ್ಪಮಟ್ಟಿಗೆ ಹೆಚ್ಚಾಗಿಯೇ ಇರುವುವು. ಒ ಹೀಗೆ ತಿರmಂತುಗಳು ಕೂಡ ಸಂಘದಲ್ಲಿ ಜೀವಿಸುವುದಕ್ಕೆ ಅರ್ಹ ವಾದ ಸುಗುಣಗಳನ್ನು ಪಡೆದಿರುವಲ್ಲಿ ಸರೋತ್ತಮವಾದ ಬುದ್ಧಿಶಕ್ತಿಯುಳ್ಳ