ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

h೧೦ ಕರ್ಠಾಟಕ ಗ್ರಂಥಮಾಲೆ ಪ್ರಯತ್ನಗಳನ್ನು ಮಾಡಬಾರದು, ಏಕಂದರೆ-ಲೋಕದಲ್ಲಿ ತಪ್ಪು ಮಾಡದ ಮನುಷ್ಯರೇ ಇಲ್ಲ. ಉಡುಪುಗಳನ್ನು ಅಂದವಾಗಿ ಧರಿಸಬೇಕು, ಆದರೆ ಇದಕ್ಕಾಗಿ ಹೆಚ್ಚು ಕಾಲವನ್ನು ಕಳೆಯಬಾರದು, ಬಟ್ಟೆಗಳಿಗಾಗಿ ಹೆಚ್ಚು ಹಣವನ್ನು ವೆಚ್ಚ ಮಾಡಬಾರದು, ಅವು ಗುಣದಲ್ಲಿ ಮೇಲಾಗಿದ್ದರೆ ಸಾಕು. ಬಟ್ಟೆಗಳನ್ನು ಧರಿಸುವುದರಲ್ಲಿ ಅಕ್ರಮವಾಗಿ ನಡೆದರೆ ಇತರ ವಿಷಯ ಗಳಲ್ಲೂ ನಾವು ಅಕ್ರಮವೆಂದೇ ಜನಗಳು ತಿಳಿದುಕೊಳ್ಳುವರು. - ಹತ್ತು ಜನಗಳ ನಡುವೆಯಿದ್ದಾಗ ಯೋಗ್ಯರೂ ನಡತೆವಂತರೂ ಆದ ದೊಡ್ಡವರ ನಡೆನುಡಿಗಳನ್ನು ನೋಡಿ ಗ್ರಹಿಸುತ್ತಿರಬೇಕು, ನಾವು ಇತರರ ಸಂಗಡ ಮಾತಾಡುತ್ತಿರುವಾಗ ನಮ್ಮ ದೃಷ್ಟಿಯನ್ನೂ ಮುಖಭಾವವನ್ನೂ ಅವರ ಕಡೆಗೇ ಇಟ್ಟಿರಬೇಕು, ಮತ್ತು ಅವರ ಕಿವಿಗೆ ನನ್ನ ಮಾತುಗಳಿಂದ ಹಿತವನ್ನುಂಟುಮಾಡಬೇಕು. ಇಷ್ಟಾದರೆ ಅವರ ಹೃದಯವು ತಾನಾಗಿ ನನ್ನ ಧೀನವಾಗುವುದು. ಈ ಪ್ರಪಂಚವೇ ಒಂದು ನಾಟಕದ ರಂಗಸ್ಥಳವು, ನಾವುಗಳೆಲ್ಲರೂ ಪಾತ್ರಗಳು, ಹೇಗೆಹೇಗೆ ಆಡಿದರೆ ನಾಟಕವು ಚೆನ್ನಾಗಿ ಆದೀತೆಂಬುದನ್ನು ಪ್ರತಿಯೊಬ್ಬರೂ ಆಲೋಚಿಸಿ ಅದಕ್ಕೆ ತಕ್ಕಂತೆ ನಡೆಯಬೇಕು, ಎಲ್ಲರಿಗೂ ಒಳ್ಳೆಯವರಾಗಿ ಎಲ್ಲರಿಂದಲೂ ಒಳ್ಳೆಯವರೆನಿಸಿಕೊಳ್ಳುವುದಕ್ಕೆ ನಮ್ಮ ಕೈ ಯಲ್ಲಾಗುವ ಮಟ್ಟಿಗೂ ಪ್ರಯತ್ನ ಮಾಡಬೇಕು. ಜನಗಳು ಮೇಲೆ ಮಾತ್ರ ಒಳ್ಳೆಯವರೆಂದು ಹೇಳಿದರೆ ಸಾಲದು, ಅದು ದಿಟವಾಗಿಯೂ ಇರ ಬೇಕು, ಒಬ್ಬ ದೊಡ್ಡ ಮನುಷ್ಯನು ತನ್ನ ಮಗನನ್ನು ಎಲ್ಲರೂ ಪ್ರೀತಿಸುವ ರೆಂಬುದನ್ನು ಕೇಳಿ- ಅವನು ನನ್ನ ಮಗನೆಂಬುದನ್ನು ತಿಳಿಯದೆ ಜನಗಳು ಅವನನ್ನು ಪ್ರೀತಿಸಿದ್ದರೆ ನಾನು ಇನ್ನೂ ಹೆಚ್ಚಾಗಿ ಸಂತೋಷಿಸುತ್ತಿದ್ದನು.' ಎಂದನಂತೆ ! ನಾಲ್ಕು ಜನರ ನಡುವೆ ನಮ್ಮ ಬಾಳು ನಾಚಿಕೆಗೀಡಾದೀತು ಎಂದು ಹೆದರಿ ನರಯಬೇಕು, ಹೀಗೆ ಮನಕ್ಕೆ ಹೆದರುವವರು ಒಳ್ಳೆಯ