ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

MMwwwx ೧೨೦ ಕರ್ನಾಟಕ ಗ್ರಂಥಮಾಲೆ www.wamy ಪೂರ ದಂತ ಆಯಾ ಜಾತಿಯವರೇ ಆಯಾ ವೃತ್ತಿಗಳನ್ನು ನಡೆಯಿಸು ಪುದು ವಿನಿಗೆ ಈಜುವುದು ಹೇಗೋ ಹಾಗೆ ಸುಲಭವಾಗುವುದೆಂದೂ ಅಂಥ ನರು ಈಗಿನ ನವನಾಗರಿಕತೆಗೆ ತಕ್ಕಂತೆ ತಮ್ಮ ತಮ್ಮ ವೃತ್ತಿಗಳನ್ನೇ ಅಭಿ ಪೃದ್ಧಿ ಪಡಿಸಿಕೊಳ್ಳುವುದು ಬಹಳ ಅನುಕೂಲವಾದುದೆಂದೂ ಪ್ರಜ್ಞರಾದ ಕೆಲವರು ಅಭಿಪ್ರಾಯಪಡುವರು, ಇದೂ ಉತ್ತಮವಾದ ಮಾರ್ಗವೇ ಸರಿ. ಆದರೆ ಬಗೆಬಗೆಯಾದ ವೃತ್ತಿಗಳನ್ನು ಕೈಗೊಂಡಿರುವವರಲ್ಲಿ ಇವರು ಮೇಲು, ಇವರು ಕೀಳು ಎಂದು ಉಚ್ಚ ನೀಚತೆಗಳನ್ನು ಕಲ್ಪಿಸುವುದು ಅಷ್ಟು ಉಚಿತವಲ್ಲ, ಎಲ್ಲಾ ವೃತ್ತಿಗಳನ್ನೂ ಸಮವಾದ ಮರಾದೆಯಿಂದ ಗೌರವಿಸಬೇಕು, ಪ್ರತಿಯೊಬ್ಬರೂ ಸ್ವಪ್ರಯೋಜನಕ್ಕೆಂದೇ ಕೆಲಸ ಮಾಡುತ್ತಾರೆಯಾದರೂ ಆ ಕೆಲಸದಿಂದ ಇತರ ಎಷ್ಟೋ ಜನಗಳಿಗೂ ಫಲ ವಾಗಿಯೇ ಆಗುವುದು, ವರ್ತಕನು ತನ್ನ ಲಾಭಕ್ಕೆಂದೇ ವ್ಯಾಪಾರ ಮಾಡಿ ದರೂ ಪದಾರ್ಥಗಳನ್ನು ಉತ್ಪತ್ತಿ ಮಾಡಿದರಿಗೂ ಕೊಳ್ಳುವವರಿಗೂ ಎಷ್ಟು ಅನುಕೂಲವಾಗುವುದು ! ಕುಂಬಾರನಿಂದ ಎಷ್ಟು ಜನ ಒಡವರಿಗೆ ಪಾತ್ರೆಯು ಸಿಕ್ಕುವುದು 1 ಇತರ ಸಕಲವಿಷಯಗಳಲ್ಲೂ ಹೀಗೆಯೇ, ಇದು ಲೋಕ ಪಕರವಲ್ಲವೆ ? ಹೀಗೆ ನಾವು ನ್ಯಾ ಬರುವಾಗಿ ಕಷ್ಟಪಟ್ಟು ಮಾಡುವ ಪ್ರತಿ ಯೊಂದು ಕೆಲಸವೂ ದೇವರ ಆರಾಧನೆಯೆಂದು ತಿಳಿಯಬೇಕು. ನಮ್ಮ ಬಲದಿಂದ ನಮ್ಮ ಜೀವನವನ್ನು ಸಂಪಾದಿಸಿಕೊಳ್ಳುವುದು ಬಹಳ ಗೌರವವಾದುದು, ಈ ಕಾರಣದಿಂದಲೇ ಯಾರು ಕೆಲಸಕ್ಕೆ ಮೈಗಳ್ಳ ರೋ ಅಂಥವರು ಆಹಾರವನ್ನು ತಿನ್ನಕೂಡದು ಎಂದು ಹೇಳುವುದು ನ್ಯಾಯವಾದ ನುಡಿಯು. ಆದುದರಿಂದ ಕೆಲಸಮಾಡುವುದು ಹೀನಾಯವೆಂದು ತಿಳಿದುಕೊಂಡು ನಾಜೆಕಪಡಬಾರದು. ಲೋಕದಲ್ಲಿ ಪ್ರತಿಯೊಬ್ಬರೂ ಆತ ಕರ ಸೇವೆಗೋಸ್ಕರವೇ ಹುಟ್ಟಿರುವುದರಿಂದ ಎಲ್ಲರೂ ಪರಸ್ಪರ ಸೇವಕರೇ, ಇತರರು ಕೆಲಸಮಾಡುತ್ತಿರುವುದನ್ನು ಸುಮ್ಮನೆ ಮಿಟಗುಟ್ಟುತ್ತ ನೋಡಿ