ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ೧4 wamy ಗಮನ ಕೊಟ್ಟರೆ ಸಾಲದು ಮುಖ್ಯವಾಗಿ ಸ್ತ್ರೀಯರು ಮನೆಗೆ ತಂದ ವಸ್ತು ಗಳನ್ನು ಒಪ್ಪವಾಗಿ ಬಳಸುತ್ತ ಮಿತವಾಗಿರಬೇಕು, ಅನಾವಶ್ಯಕವಾಗಿ ಸೌದೆಯನ್ನು ಹೆಚ್ಚಾಗಿ ಉರಿಸುವುದು, ಅಜಾಗರೂಕತೆಯಿಂದ ದೀಪ ಗಳನ್ನು ದೊಡ್ಡವಾಗಿ ಉರಿಸಿ ಚಿಮ್ಮಿಗಳನ್ನು ಹಾಳುಮಾಡುವುದು, ತಂದ ದಿನಸುಗಳನ್ನು ಸರಿಯಾಗಿ ಮುದ್ದೆ ಡದೆ ಇಲಿ ಹೆಗ್ಗಣಗಳ ಪಾಲುಮಾಡು ವುದು, ಹೆಚ್ಚಾಗಿ ಅಡಿಗೆಯನ್ನು ಮಾಡಿ ವಿ ಗಿಸಿ ವ್ಯರ್ಥಪಡಿಸುವುದು, ಇಂಥ ಕೆಟ್ಟ ಚಾಳಿಗಳಿಗೆ ಅವಕಾಶ ಕೊಡದಂತೆ ನಡೆಯಬೇಕು, ಉಡುಪುಗಳು ಸ್ವಲ್ಪ ಹರಿದರೂ ಮನೆಬಾಗಿಲುಗಳು ಸ್ವಲ್ಪ ಕೆಟ್ಟರೂ ಆಗಾಗಲೇ ಸರಿ ಮಾಡಿಕೊಳ್ಳುತ್ಯ ಮುಂದೆ ಹೆಚ್ಚಿನ ನಷ್ಟಕ್ಕೆ ಅವಕಾಶವಿಲ್ಲದಂತೆ ನೋಡಿ ಕೊಳ್ಳಬೇಕು. ಒಟ್ಟು ನೋಡಿದರೆ ಈ ಮುಂದೆ ಹೇಳುವ ಅಂಶಗಳನ್ನು ಗ್ರಹಿಸಿ ಆಚರಣೆಗೆ ತರಬೇಕಾದುದು ಪ್ರತಿಯೊಬ್ಬರಿಗೂ ಆವಶ್ಯಕವಾದ ಕರ್ತವ್ಯ ವಾಗಿದೆ ಖರ್ಚು ವೆಚ್ಚಗಳ ವಿಷಯದಲ್ಲಿ ಲೆಕ್ಕಪತ್ರಗಳನ್ನು ಕ್ರಮ ವಾಗಿಟ್ಟುಕೊಂಡು ಪದೇ ಪದೇ ನೋಡುತ್ತಿರುವುದು. ಆದಾಯಕ್ಕೆ ತಕ್ಕಷ್ಟು ಮಾತ್ರ ವೆಚ್ಚ ಮಾಡುವುದು; ಏಕಂದರೆ--ಒಬ್ಬರಿಗೆ ಆಗುವ ಸಂಪಾ ದನೆಯ ಮೇಲೆ ಆತನ ಅಕ್ಕಿಯು ಇಷ್ಟೆಂದು ನಿರ್ಧರಿಸಲಾಗುವುದಿಲ್ಲ. ಅದನ್ನು ಆತನು ಯಾವರೀತಿಯಲ್ಲಿ ವಿನಿಯೋಗಿಸುವನು ಎಂಬುದರ ಮೇಲೆ ಅದು ನಿಷ್ಕರ್ಷೆಯಾಗಬೇಕು. ಸಾಧ್ಯವಾದ ಮಟ್ಟಿಗೂ ಸಾಲಮಾಡದಿರು ವುದು, ಪೋಸ್ಟಲ್‌ ಸೇವಿಂಗ್ಸ್ ಬ್ಯಾಂಕ್, ಕೋ ಆಪರೇಟಿವ್ ಸೊಸೈಟಿ ಇಂಥವುಗಳಿಂದ ಪ್ರಯೋಜನಗಳನ್ನು ಪಡೆವುದು ಹೀಗೆ ಮಿತವ್ಯಯವನ್ನು ಆಚರಿಸುತ್ತಾ ಏಳಿಗೆ ಬರುವುದಕ್ಕೆ ಪ್ರತಿಯೊಬ್ಬರೂ ಪ್ರಯತ್ನಪಡಬೇಕು. (30), ಕಾಲವನ್ನು ಸದುಪಯೋಗಪಡಿಸಿಕೊಳ್ಳುವಿಕೆ. ಭಗವತ್ಕೃಷ್ಟಿಗೆ ಒಳಪಟ್ಟಿರುವ ಪ್ರತಿಯೊಂದು ವಸ್ತುವೂ ಅದು ಪ್ರಾಣಿಯಾಗಿರಲಿ ಸಸ್ಯವಾಗಿರಲಿ ಅಥವಾ ಧಾತುವೇ ಆಗಿರಲಿ ಸದ್ಧ ದನಿ ಏನಾದರೊಂದು ಬಗೆಯ ಕೆಲಸವನ್ನು ಮಾಡುತ್ತಲೇ ಇರುವುದು, ಆದರೆ ಹೀಗೆ ಮಾಡತಕ್ಕ ಪ್ರತಿಯೊಂದು ಕೆಲಸಕ್ಕೂ ಒಂದು ವಿಧವಾದ ನಿಯಮ