ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒ o ಕರ್ನಾಟಕ ಗ್ರಂಥಮಾಲೆ ಮಾಡಬೇಕಾಗಿದ್ದುದನ್ನು ಮಾಡಿದುದಕ್ಕೆ ಬಹುಮಾನವನ್ನು ಕೊಡಬೇಳ ದುದೇತಕ್ಕೆ ? ಆದರೆ ತಾನು ಮಾಡಬೇಕಾದದ್ದಕ್ಕೂ ಮೀರಿ ಇನ್ನೇನು ದರ ಅಸಾಧಾರಣವಾದ ಸಾಹಸವನ್ನು ಮಾಡಿದ್ದರೆ ಒಂದು ವೇಳೆ ದೊಡ್ಡ ವರ ಮನಸ್ಸಿನಲ್ಲಿ ತಾನಾಗಿ ಹುಟ್ಟಿದ ಮಮತೆಯಿಂದ ಬಹುಮಾನಕ್ಕೆ ಪಾತ್ರನಾಗುವ ಸಂಭವವೂ ಉಂಟು. ನ್ಯಾಯವನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಬೇಕೆಂದಲ್ಲಿ ಬಲು ಮಟ್ಟಿಗೂ ಜಾಗರೂಕತೆಯು ಆವಶ್ಯಕ. ಏಕೆಂದರೆ-ಯಾವ ಕೆಲಸದಲ್ಲಿಯೇ ಆಗಲಿ ಮಾಡಿದವರ ಉದ್ದೇಶ, ಕಕ್ಷಿಪ್ರತಿಕಕ್ಷಿಗಳ ಪ್ರಭಾವ, ಯೋಗ್ಯತೆ, ಇಂಥವುಗಳನ್ನೆಲ್ಲಾ ತಿಳಿದ ಹೊರತು ಮೊಕದ್ದಮೆಯು ತೀರಾನವನ್ನು `ಹೇಳಲಾಗುವುದಿಲ್ಲ, ಹೇಗೆಂದರೆ-ನೀರಿನ ಮೇಲ್ಗಡೆ ಒಂದೇಸಮುವಾದ ಎತ್ತರವುಳ್ಳುದಾಗಿ ತೋರುವ ಗಿಡಗಳನ್ನು ನೋಡಿ ಅವೆಲ್ಲಾ ಒಂದೇ ಸದ್ದು ವಾದ ಎತ್ತರವುಳ್ಳವುಗಳು ಎನ್ನಲಾಗದು. ಏಕೆಂದರೆ ಅವುಗಳಲ್ಲಿ ಕಳವು ನೀರಿನೊಳಗೆ ಕೇವಲ ಹಳ್ಳದ ಪ್ರದೇಶಗಳಲ್ಲಿ ಹುಟ್ಟಿಗಬಹುದು, ಮತ್ತೆ ಕೆಲವು ನೀರಿನೊಳಗೆ ದಿಣ್ಯ ಪ್ರದೇಶಗಳಲ್ಲಿ ಹುಟ್ಟಿರಬಹುದು, ಆದುದ ರಿಂದ ನೀರಿನ ಮೇಲ್ಗಡೆಯ ಸ್ಥಿತಿಯನ್ನು ನೋಡಿದ ಮಾತ್ರಕ್ಕೆ ಆ ಗಿಡಗಳ ನಿಜವಾದ ಎತ್ತರದ ಪ್ರಮಾಣವು ಗೊತ್ತಾಗಲಾರದು - ಪ್ರಬಲರಿಂದ ದುರ್ಬಲರಿಗೆ ಬಾಧೆಯಾಗುತ್ತಿರುವುದನ್ನು ಕಣ್ಣಾರ ನೋಡುತ್ತಿದ್ದರೂ ತಟಸ್ಥರಾಗಿರತಕ್ಕವರೂ ಅಥವಾ ತಾವೇ ಪ್ರಬಲರಾಗಿದ್ದು ದುರ್ಬಲರನ್ನು ಬಾಧಿಸತಕ್ಕವರೂ ಎಂದಿಗೂ ನ್ಯಾಯಪರರಲ್ಲ. ಇವರು ಅನ್ಯಾಯಪ್ರವರ್ತಕರು, ಇತರರಿಗೆ ಕೈಲಾದ ಮಟ್ಟಿಗೂ ಸಹಾಯ ಮಾಡ ಬೇಕೆಂಬ ಸಂಕಲ್ಪದಿಂದ ದೇವರು ನಮಗೆ ಶಕ್ತಿಯನ್ನೂ ತಿಳಿವಳಿಕೆಯನ್ನಿ ಕೊಟ್ಟಿರುವನೇ ಹೊರತು ಅವರನ್ನು ತೊಂದರೆಪಡಿಸುವುದಕ್ಕಲ್ಲ. ಧನಿಕರು ಬಡವರನ್ನೂ ಗಟ್ಟಿಗರು ಕೈಲಾಗದವರನ್ನೂ, ದೊಡ್ಡವರು ಚಿಕ್ಕವರನ್ನೂ ಪುರುಷರು ಸ್ತ್ರೀಯರಿನ್ನೂ, ತುಂಟರು ಸಭ್ಯರನ್ನೂ, ಮನುಷ್ಯರು ತಿರಿ ಧ್ವಂತುಗಳನ್ನೂ ಬಾಧೆಪಡಿಸದಂತೆ ನೋಡಿಕೊಳ್ಳತಕ್ಕುದು ನ್ಯಾಪರನಾದ ಪ್ರತಿಯೊಬ್ಬ ಮನುಷ್ಯನಿಗೂ ಕರ್ತವ್ಯ. ಇಂಥ ಅನ್ಯಾಯಗಳನ್ನು ತನ್ನಿ ಸುವುದು ಒಂದು ವೇಳೆ ತನಗೆ ಅಸಾಧ್ಯವಾದರೆ ಮಾತುಗಳಿಂದಲಾದರೂ ಪ್ರ.