ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡವಳಿ ೧೫೫ Wಯ WMMMMwwwx ರಿಂದ ಏನೂ ಲಾಭವಿಲ್ಲವೆಂದೂ ಅದಕ್ಕೆ ಬದಲು ದನಕುರಿಗಳನ್ನು ಮೇಯಿ ಸುವುದು ಮೇಲೆಂದೂ ತಿಳಿದು ತನ್ನ ಮಕ್ಕಳನ್ನು ಒದಗೊಳಿಸುವುದಿಲ್ಲ. ಇದು ಮೌಡ್ಯ, ಆ ಮಕ್ಕಳು ವಿದ್ಯೆ ಯನ್ನು ಕಲಿತರ ಬುದ್ದಿವಂತಿಕೆಯಿಂದ ತಮ್ಮ ಕಸಬನ್ನೇ ವೃದ್ಧಿಗೊಳಿಸಿಕೊಂಡು ಹೆಚ್ಚಾಗಿ ಸಂಪಾದಿಸಬಲ್ಲರೆಂದೂ ತಮ್ಮ ವಂಶವು ಉತ್ತಮ ಸ್ಥಿತಿಗೆ ಬರುವುದೆಂದೂ ತಿಳಿಯಬೇಕು, ನೂರಾರು ಖಂಡಗ ದವಸಧಾನ್ಯಗಳನ್ನು ಬೆಳೆಯುತ್ತಿರುವ ರೈತರಲ್ಲಿ ಕೂಡ ಎಷ್ಟೋ ಮಂದಿಗೆ ಓದುಬರಹ ತಿಳಿಯದು. ಇಂಥವರಿಗೆ ಲೆಕ್ಕಾಚಾರದಲ್ಲಿ ಗಲಿಬಿಲಿ ಮಾಡಿ ಹೆಚ್ಚಾಗಿ ವಂಡತರಿಸುತ್ತಲೂ ಅದನ್ನು ತಾವು ಕಬಳಿಸುತ್ತಲೂ ಇರ ಬಹುದಾದ ದುರುಳರ ದುಪ್ಪ, ವರ್ತನೆಗೆ ವಿದ್ಯೆಯು ಎಂದಿಗೂ ಅವಕಾಶ ವನ್ನು ಕಾಡಲಾರದು, ಈ ವಿಷಯದಲ್ಲಿ ವರ್ತಕರು ರೈತರಿಗಿಂತಲೂ ಸ್ವಲ್ಪ ಮೇಲು. ಆದರೂ ಅವರು ತಮ್ಮ ಮಕ್ಕಳು ಒಂದೆರಡು ಪುಸ್ತಕಗ ಳನ್ನು ಓದಿದಕೂಡಲೇ ಅವರನ್ನು ಅಂಗಡಿಗುಮೇಲೆ ವ್ಯಾಪ:ಕ್ಕೆ ಕುಳ್ಳಿರಿ ಸುತ್ತಾರೆ. ಇದರಿಂದ ವಿನಾಯಿತು ? ತಮ್ಮ ಕಸಬನ್ನು ವೃದ್ಧಿಪಡಿಸಿಕೊಳ್ಳು ವುದಕ್ಕಾದರೂ ಅವಕಾಶವಾಯಿತೆ ? ಯಾವ ಯಾವ ವಸ್ತುವು ಎಲ್ಲೆಲ್ಲಿ ದೊರೆಯುವುದು, ಎಲ್ಲೆಲ್ಲಿಗೆ ಯಾವಯಾವುದನ್ನು ಕಳುಹಿಸಿದರೆ ಲಾಭ ಯಾವಯವ ಜನರಿಗೆ ಯಾವಯಾವ ವಸ್ತುಗಳು ಹೇಗೆ ಹೇಗಿದ್ದರೆ ಇಷ್ಟ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಸುಲಭವಾದ ವೆಚ್ಚ ವೂ ಕಡಿಮೆಯಾದಕಾಲವೂ ಆಗುವ ಮಾರ್ಗಗಳು ಯಾವುವು ಲೆಕ್ಕಪತ್ರಗಳನ್ನಿ ಹುವಬಗೆ ಹೇಗೆ? ಇವನ್ನೆಲ್ಲಾ ವರ್ತಕನು ತಿಳಿದಿರಬೇಕು, ಅದಕ್ಕಲ್ಲಾ ವಿದ್ಯ ಯು ಆವಶ್ಯಕ. ನಮ್ಮಲ್ಲಿ ಅಕ್ಕಸಾಳೆ, ಬೆಡಗಿ, ಗಾಣಿಗ, ಕುಂಟಾರ, ಅಗಸ ಹಚಾಮ, ಕಮ್ಮಾರ ಮೊದಲಾದ ಕೈಗಾರಿಕೆಯವರಲ್ಲಿ ಅನೇಕರಿಗೆ ವಿದ್ಯೆ ಯಬಾರದು. ಈಗ ಅವರು ನಡೆಯಿಸುತ್ತಿರುವುದೆಲ್ಲಾ ಕುರುಡುದಾರಿ ಯಲ್ಲೇ ಆಗಿದೆ. ಅವರು ವಿದ್ಯೆಯನ್ನು ಕಲಿತರೆ ಅಳತೆ, ತೂಕ, ಬಣ್ಣ ಅವುಗಳಲ್ಲಿ ಮಾತ್ರವಲ್ಲದೆ ನಾನಾ ಬಗೆಯ ಚಿತ್ರಗಳು, ಮಾದರಿಗಳು, ವಸ್ತುಗಳಬೆಲೆ, ಕೆಲಸಕ್ಕೆ ಬೇಕಾಗುವ ಹಲವು ತೆರನಾದ ಉಪಕರಣಗಳು, ಅವುಗಳು ದೊರೆಯುವ ಸ್ಥಳಗಳು ಇತ್ಯಾದಿಗಳನ್ನೆಲ್ಲಾ ತೊಡಕಿಲ್ಲದೆ ತಿಳ ಭುಕೊಂಡು ಕಡಿಮೆಯು ಕಷ್ಟದಿಂದ ಉತ್ತಮವಾದ ವಸ್ತುಗಳನ್ನು ಹೆಚ್ಚಾಗಿ