ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ (6) ಮನೆಯವರ ವಿಷಯದಲ್ಲಿ ಮರಾದ. ಹೊಳಗಿನವರ ವಿಷಯದಲ್ಲಿ ಮಾತ್ರ ಮಕ್ಕಾದೆಯಿಂದ ಇರಬೇ ಕಂದು ತಿಳಿಯಕೂಡದು, ನಾವು ಮನೆಯವರೆಲ್ಲರಲ್ಲೂ ಮೇಲಾದ ಮರಾದೆಯಿಂದ ನಡೆಯಬೇಕು ಕೆಲವರು ತಾವು ಮನೆ ಯಲ್ಲಿ ಹೇಗಿದ್ದರೂ ಬಾಧಕವಲ್ಲವೆಂದು ಭಾವಿಸಿ ಬಲುಒರಟುತನದಿಂದ ಹರಟು ತಲೂ ದುಡುಕು ಕೆಲಸಗಳನ್ನು ಮಾಡುತ್ತಲೂ ಇರುವರು. ಇದು ಬಲು ತಪ್ಪು ತಿಳಿವಳಿಕೆ, ತಮಗಿಂತ ದೊಡ್ಡವರಾದವರು ಹೇಗೆ ನಡೆಯು ವರೋ ತಾವೂ ಹಾಗೆಯೇ ನಡೆಯಬೇಕೆಂದು ಎಲ್ಲರೂ ಇಷ್ಟಪಡುವರಷ್ಟೆ. ತತ್ರಾಪಿ ಇಂತಹ ಸ್ವಭಾವವು ಮಕ್ಕಳಲ್ಲಿ ತುಂಬ ಪ್ರಬಲವಾಗಿರುತ್ತದೆ. ಆದುದರಿಂದ ನಾವು ದುಡುಕುವುದು ಮೊದಲಾದ ಕೆಟ್ಟ ಚಾಳಿಗಳಿಂದ ಕೂಡಿ ಮರಾದೆಯಿಲ್ಲದೆ ಕೆಟ್ಟ ನಡತೆಯಲ್ಲಿ ಪ್ರವರ್ತಿಸಿದರೆ ನಮ್ಮ ಮನೆಯಲ್ಲಿ ರುವ ಸಣ್ಣ ಪುಟ್ಟ ಮಕ್ಕಳೆಲ್ಲಾ ನಮ್ಮಂತೆಯೇ ನಡೆಯುವರಾದುದರಿಂದ ನಾವು ಅವರನ್ನು ಕೆಡಿಸಿದಂತಾಗುವುದು. ಆದುದರಿಂದ ಹೊರಗಿನರವ ಸಂಗಡ ಮಾತ್ರವೇ ಮತ್ಯಾದೆಯಿಂದ ನಡೆಯಬೇಕಾದುದು ಮುಖ್ಯವೆಂದು ಎಣಿಸಬಾರದು, ಇತರರನ್ನು ಸಂತೋಷಪಡಿಸಿ, ನಾವೂ ಸುಖಪಡುವದು ಹೇಗೆ ಎಂಬುದನ್ನು ಕಲಿಯುವುದಕ್ಕೆ, ಮನೆಗಿಂತಲೂ ಮೇಲಾದ ಸ್ಥಳವು ಮತ್ತಾವುದೂ ಇಲ್ಲ , ಮನೆಯಲ್ಲಿ ನಾವು ಮಾಡುವ ಸಣ್ಣ ಪುಟ್ಟ ಕೆಲಸ ಗಳಲ್ಲಿ ಎಷ್ಟೊಮಟ್ಟಿಗೆ ವಿನಯ, ಗೌರವ, ದಯೆ ಮೊದಲಾದುವನ್ನು ಆಯಾ ಸಂದರ್ಭಾನುಸಾರವಾಗಿ ತೋರಿಸಬಹುದು. ಮನೆಯಲ್ಲಿ ಹಿರಿಯರೂ ಸಮಾನರೂ ಮತ್ತು ಕಿರಿಯರೂ ಇರು ವರಷ್ಟೆ. ಈ ಮೂರು ವಿಧವಾದ ಜನಗಳಲ್ಕಿಯ N ಬಂದೇ ಬಗೆಯಾಗಿ ಪ್ರವ ರ್ತಿಸುವುದಕ್ಕಾಗುವುದಿಲ್ಲ ಆಯಾ ಜನಗಳೊಡನೆ ಉಚಿತವರಿತು ನಡೆಯ ಬೇಕಾಗುವುದು. ತಾಯ್ತಂದೆಗಳಿಗೂ ಇತರ ವೃದ್ಧರಿಗೂ ಕೈಲಾದಮಟ್ಟಿಗೆ