ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಕರ್ಣಾಟಕ ನಂದಿಸಿ ಬಿಟ್ಟು ತಾನು ಸೈಕ್ಷೆಯಿಂದ ನಡೆಯುತ್ತ ತನಗೆ ತಾನೇ “ವಾಹವ್ಯಾ ! ಇಷ್ಟು ದಿನಗಳಿಗೆ ನನ್ನ ಅದೃಷ್ಟವು ಫಲಿಸಿದಂತಾಯಿತು. ವಿಮಲಾದೇವಿಯ ಅನುಗ್ರಹದಿಂದ ರಾಜಸಿಂಹನ ಬಳಿಯಲ್ಲಿ ಬೇಕಾದಷ್ಟು ದ್ರವ್ಯವನ್ನು ಸಂಪಾ ದಿಸುವೆನು. ಆತನು ನನ್ನನ್ನು ನೋಡಿದ ಕೂಡಲೆ ನನ್ನನ್ನಾ ದರಿಸಿ ಕ್ಷೇಮ ಸಮಾಚಾರವನ್ನು ವಿಚಾರಿಸುವನು. ಆಗ ನನ್ನ ವಾಕ್ಚಾತುರ್ಯವನ್ನೆಲ್ಲ ತೋರಿಸಿ ವಿಮಲಾದೇವಿಯ ಸ್ಥಿತಿಯನ್ನು ವಿವರಿಸಿದೆನೆಂದರೆ, ರಾಜಸಿಂಹನು ಮೆಚ್ಚಿ ನನಗೆ ತಕ್ಕ ಬಹುಮಾನವನ್ನು ಮಾಡುವನು. ಅಷ್ಟೇ ಅಲ್ಲ ; ರಾಜಸಿಂಹರಾಜನ ಸನ್ನಿಧಿಯಲ್ಲಿ ನನಗೆ ಸುಭೋಜನವೂ ಯಥೇಚ್ಛೆ ವಾಗಿ ಲಭಿಸುವುದ.. ಆಗಳಲ್ಲವೇ, ಭೋಜನದಲ್ಲಿ ನನ್ನ ಪ್ರತಾಪವು ಎAರುವುದೆಂಬುದು ಗೊತ್ತಾಗುವುದು : ಅಹಹಾ ! ಈಗಲೇ ನಾಲಿಗೆಯಲ್ಲಿ ನೀರೂರುತ್ತಿರುವುದು.......” ಪಂಡಿತನ ಮಾತಿಗೆ ಎಲ್ಲರೂ ನಗುತ್ತಿದ್ದರು. ಸ್ವಲ್ಪ ದೂರ ನಡೆದ ಮೇಲೆ ಪಂಡಿತನು ಆಯಾಸದಿಂದ ನಡೆಯಲಾರದೆ ಹೋದನು. ಆಗ ಶಿವಸಿಂಗನು ಅವನನ್ನು ನೋಡಿ._'ಪಂಡಿತಜೀ ! ನೀವು ಆಯಾಸಪಟ್ಟಂತೆ ಕಾಣುವಿರಿ. ಇನ್ನು ನಡೆಯಲಾಗುವುದಿಲ್ಲವೋ ? ಇಲ್ಲಿಗೆ ಸಮೀಪದಲ್ಲಿಯೇ ಒಂದು ಸರೋವರವಿರುವುದು, ಅಲ್ಲಿ ಈ ದಿನ ವಿಶ್ರಮಿಸಿಕೊಳ್ಳುವ, ಈಗ ನೀವು ಈ ಫಿಲ್ಲರಲ್ಲಿ ಯಾರ ಭುಜದ ಮೇಲಾದರೂ ಕುಳಿತುಕೊಳ್ಳಿ. ಆಯಾಸವು ಕಡಿಮೆಯಾದೀತು ” ಎಂದು ಹೇಳಲು ಬ್ರಾಹ್ಮಣನು:... 'ಏನಯ್ಯಾ ! ನನ್ನ ಮೇಲಿನ ಕೋಪವನ್ನು ತೀರಿ ಸಿಕೊಳ್ಳಲು ನನ್ನನ್ನು ಹೊತ್ತು ಕೊಂಡು ಹೋಗಿ ಸರೋವರದಲ್ಲಿ ಎತ್ತಿಹಾ ಕಬೇಕೆಂದೋ-ಇಷ್ಟೆಲ್ಲಾ ಪ್ರಯತ್ನ ವು ? ಹಾಗೆ ಮಾತ್ರ ಮಾಡಬೇಡ ಕಂಡೆಯಾ ? ನನ್ನ ತಾಯಿಗೆ ನಾನು ಒಬ್ಬನೇ ಮಗನು, ನನ್ನ ಪತ್ನಿ ಯು ಮೊನ್ನೆ ತಾನೇ ಮನೆಗೆ ಬಂದಳು. ಇವರೆಲ್ಲರನ್ನೂ ಬಿಟ್ಟು ನಾನು ಹೇಗೆ