ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೨ ಕರ್ಣಾಟಕ ನಂದಿಸಿ ಸೂರ್ಯೋದಯವಾಯಿತು. ಬ್ರಾಹ್ಮಣನು ಪ್ರಾತಃಕೃತ್ಯಗಳನ್ನು ನಡೆಯಿ ಸಿಕೊಂಡು ತಾನು ತಂದಿದ್ದ ಬುತ್ತಿಯನ್ನು ಬಿಚ್ಚಿ, ಸ್ವಲ್ಪ ಆಹಾರವನ್ನು ಸ್ವೀಕರಿಸಿ, ಉಳಿದುದನ್ನು ಶಿವಸಿಂಗಸಿಗೂ ಕೊಟ್ಟನು. ಅಷ್ಟರಲ್ಲಿ ಭಿಲ್ಲ ರೂ ತಮ್ಮ ತಮ್ಮ ಬುತ್ತಿಯನ್ನು ಬಿಚ್ಚಿ ಊಟಮಾಡಿ ಎಲ್ಲರೂ ಮರದ ನೆರಳಿನಲ್ಲಿ ಸ್ವಲ್ಪ ಹೊತ್ತು ಮಲಗಿದ್ದು ಆಬಳಿಕ ಪುನಃ ಪ್ರಯಾಣಮಾಡಿ ದರು. ಇವರೆಲ್ಲರೂ ದಾರಿನಡೆಯುತ್ತಿರುವಾಗ ಮಾರ್ಗಮಧ್ಯದಲ್ಲಿ ಒಬ್ಬ ಪುರುಷನು ಮಲುಗುತ್ತ ' ಕೈಕಾಲುಗಳನ್ನು ಮುದುರಿಕೊಂಡು ಮಲಗಿ ಧ್ವನು, ಶಿವಸಿಂಗನು ಆತನನ್ನು ನೋಡಿ ಕನಿಕರದಿಂದ- ಅಯ್ಯಾ ! ನೀನಾರು ? ಈ ಮರದ ಕೆಳಗೆ ಮಲಗಿರುವುದೇಕೆ ?” ಎಂದು ಕೇಳಲು, ಆತನು-ಅಯ್ಯಾ ! ನೀವೇ ನನ್ನ ಪಾಲಿಗೆ ದೈವಸ್ವರೂಪವಾಗಿ ಬಂದಿರಿ ! ನಾನು ಪಕ್ಕದಲ್ಲಿರುವ ಹಳ್ಳಿಗೆ ಹೋಗಿ ಪುನಃ ನನ್ನ ಗ್ರಾಮಕ್ಕೆ ಬರುತ್ತೆ ದಾರಿಯಲ್ಲಿ ಒಂದು ಕಲ್ಲನ್ನೆಡವಿ ಕೆಳಕ್ಕೆ ಬಿದ್ದೆನು. ಮೊಣಕಾಲಿಗೆ ತುಂಬ ಏಟು ಬಿದ್ದಿದೆ. ನಡೆಯಲಾರೆ. ರಾತ್ರಿಯಿಂದಲೂ ಆಹಾರವಿಲ್ಲದೆ ನರ ಳುತ್ತ ಬಿದ್ದಿರುವೆನು. ಸ್ವಲ್ಪ ಆಹಾರವನ್ನಿತ್ತು ಸ್ವಲ್ಪ ದೂರ ಕರೆದು ಕೊಂಡು ಹೋದರೆ ನಿಮ್ಮ ಉಪಕಾರವನ್ನು ಎಂದಿಗೂ ಮರೆಯಲಾರೆನು.” ಎಂದು ಪ್ರಾರ್ಥಿಸಲು, ಶಿವಸಿಂಗಸು ಆತನ ಮೇಲೆ ಪೂರ್ಣಾನುಗ್ರಹವನ್ನು ತೋರಿಸಿ, ತನ್ನ ಬಳಿಯಲ್ಲಿದ್ದ ಭಿಲ್ಲರಲ್ಲೊಬ್ಬನನ್ನು ಕರೆದು ಆತನನ್ನು ಹೊತ್ತು ಕೊಂಡು ಬರುವಂತೆ ಆಜ್ಞಾಪಿಸಿದನು. ತಕ್ಷಣವೇ ಒಬ್ಬ ಭಿಲ್ಲನು ಆತನನ್ನು ಭುಜದಮೇಲೆ ಹೊತ್ತು ಕೊಂಡು ಹೊರಟನು. ಆ ಪುರುಷನು ಎಷ್ಟು ಬಾಧೆಯನ್ನು ಅನುಭವಿಸುತ್ತಿದ್ದನೋ ನಮಗೆ ತಿಳಿಯದಾದರೂ ಆತನ ಮುಲುಗುವಶಬ್ಬವು ಮಾತ್ರ ಕ್ಷಣಕ್ಷಣಕ್ಕೂ ಹೆಚ್ಚು ತಿದ್ದಿತು, ಆದರೆ ಶಿವಸಿಂಗ ಮೊದಲಾದವರು ಯಾರಾದರೂ ಮಾತನಾಡು