ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೧೮ ತಿರುವಾಗ ಮಾತ್ರ ಆತನು ಮುಲುಗುವಿಕೆಯನ್ನು ನಿಲ್ಲಿಸುತ್ತಿದ್ದನು. ಅವ ಸುಮ್ಮನಿರುವಾಗ ಹೆಚ್ಚು ಮುಲುಗುತ್ತಿದ್ದನು. ಆದರೆ, ಈ ರಹಸ್ಯವನ ಭಿಲ್ಲರಲ್ಲೊಬ್ಬನೂ ತಿಳಿದುಕೊಳ್ಳಲಿಲ್ಲ. ಶಿವಸಿಂಗನು ಮೊದಲಾದವ ಯಾವ ವಿಷಯವನ್ನು ಮಾತನಾಡುತ್ತಿರುವಿರೋ ತಿಳಿಯಬೇಕೆಂದೇ ಆತ; ತನ್ನ ಶಬ್ದವನ್ನು ಆಗಾಗ ಕಡಿಮೆ ಮಾಡುತ್ತಿದ್ದನು. ಆದರೆ ಶ್ಯಾಮ ಪಂಡಿತನ ಪ್ರಲಾಪಗಳಿಂದ ಆತನಿಗೆ ಯಾವ ಸಂಗತಿಯೂ ಸರಿಯಾಗಿ ತಿಳಿ೦ ಲಿ, ಮಾತನಾಡದೆ ಒಂದು ಕ್ಷಣವಿರಬೇಕೆಂದರೆ ನಮ್ಮ ಶ್ಯಾಮಲಪಂ ತನಿಗೆ ಒಂದು ಯುಗವನ್ನು ಕಳೆಯುವಷ್ಟು ಕಷ್ಟವಾಗುತ್ತಿದ್ದಿತು. ರೋ ಯು, ಬ್ರಾಹ್ಮಣನನ್ನು ಮಾತನಾಡದೆ ಅರುವಂತೆ ಹೇಳಬೇಕೆಂಬುದಾಗಿಯ ತನಗೆ ತಲೆಶೂಲೆ ಹೆಚ್ಚುತ್ತಿರುವುದೆಂಬುದಾಗಿಯೂ ಶಿವಸಿಂಗನನ್ನು ಪ್ರಾರ್ಥಿ ದನು, ಶಿವಸಿಂಗನು ಅದನ್ನೆ ಬ್ರಾಹ್ಮಣನಿಗೆ ಹೇಳಲು, ಅದಕ್ಕಾ ಬ್ರಾತ ಣನು ತನ್ನಿಂದ ಸುಮ್ಮನಿರಲಾಗುವುದಿಲ್ಲ ವೆಂದೂ ಮಾತನಾಡದಿದ್ದ ತನಗೂ ಸಹ ತಲೆ ನೋಯುವದೆಂದೂ ಹೇಳಿ ತನ್ನ ಇಷ್ಟಬಂದಂತೆ ಮಾ ನಾಡುತ್ತಿದ್ದನು. ಹೀಗೆಯೇ ನಡೆದ ಮೇಲೆ ರಾತ್ರಿಯಾಗಲು ಆ ಅರಣ ದಲ್ಲಿ ಒಂದು ಮರದ ಕೆಳಗೆ ಸ್ವಲ್ಪ ವಿಶ್ರಮಿಸಿಕೊಂಡರು. ಬಿಲ್ಲನು ತ ಭುಜದಮೇಲಿದ್ದ ರೋಗಿಯನ್ನು ಇಳಿಸಿ, ಆತನನ್ನು ಒಂದು ಕಡೆ ಮಲಗಿ ದನು. ಅನಂತರ ಶಿವಸಿಂಗನೂ ಛಲ್ಲರೂ ನಮ್ಮ ಪಂಡಿತನೂ ಕಲೆತು ತಃ ಉಪಾಯಗಳನ್ನು ಮಾಡಿಕೊಂಡು ಅಲ್ಲಿಯೇ ನಿದ್ರೆ ಹೋದರು. ಸೂರ್ಯೋದಯವಾಗುತ್ತಲೆ ರೋಗಿಯು ಎಲ್ಲರಿಗಿಂತಲೂ ಮೊದ ಎದ್ದು ಕುಂಟುತ್ತ ಅತ್ತಿತ್ತ ನಡೆಯುತ್ತಿದ್ದನು. ಆಗ ಎಚ್ಚರದಲ್ಲಿ ಕೆಲವರು ಭಿಲ್ಲರು ಆತನನ್ನು ನೋಡಿ ಈತನಾರೆಂದು ತಮ್ಮೊಳಗೆ ತಾ। ಮಾತನಾಡಿಕೊಳ್ಳುತ್ತಿದ್ದರು. ಇಷ್ಟರಲ್ಲಿ ಶಿವಸಿಂಗನೂ ಎದ್ದು ನಯಣಕೆ ಸಿದ್ಧನಾದನು, ಆತನನ್ನು ನೋಡಿ ರೋಗಿಯು-ಅಯ್ಯಾ ! ನನ್ನ ದೇಹ