ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೮ ಕರ್ಣಾಟಕ ನಂದಿನಿ ದನು. ಶ್ಯಾಮಲಪಂಡಿತನು ಸಮಾಚಾರವೆಲ್ಲವನ್ನೂ ಆತನಿಗೆ ತಿಳುಹಿ ತನ್ನಲ್ಲಿದ್ದ ವಿಮಲಾದೇವಿಯ ಪತ್ರವನ್ನು ತೆಗೆದುಕೊಟ್ಟನು. ರಾಜಸಿಂ ಹನು ಆ ಪತ್ರವನ್ನು ಆಮೂಲಾಗ್ರವಾಗಿ ಸಾವಧಾನದಿಂದ ನೋಡಿಕೊಂಡು ಗಂಭೀರಭಾವದಿಂದ... “ ಆಗಲಿ, ಅಷ್ಟು ಸಾರಸವಿದ್ದರೆ ಪ್ರಯತ್ನ ಮಾಡಿ ನೋಡಲಿ ! ರಾಜಪುತ್ರರು ತಟಸ್ಥವೃತ್ತಿಯಲ್ಲಿರುವುದರಿಂದಲ್ಲ ವೆ, ತ್ಯಾಚಾರವನ್ನು ತಡೆಯುವರೇ ರಜಪ್ರಸ್ಥಾನದಲ್ಲಿವೆಂಬ ಅಹಂಕಾರವು ಬಾದಶಹನಿ ಗುಂಟಾಗಿದೆ ? ಆಗಲಿ, ಔರಂಗಜೇಬನ ಸಾಹಸವನ್ನು ಈ ಸಲ ಚೆನ್ನಾಗಿ ನೋಡುವೆನು ; ರಜಪುತ್ರಸ್ನಾನ ಇನ್ನೂ ದುರ್ಬಲವಾಗಿಲ್ಲವೆಂಬುದನ್ನೂ ರಾಜಪುತ್ರರು ಬಳೆತೊಟ್ಟು, ಹೆಂಡಿರುಮಕ್ಕಳನ್ನು ಯವನರ ಪಾಲುಮಾಡಿ ನೋಡುವಷ್ಟು ಹೇಡಿಗಳಾಗಿಲ್ಲ ವೆಂಬುದನ್ನೂ ಔರಂಗಜೇಬನಿಗೆ ಗೊತ್ತು ಮಾಡುವೆನು.” ಎಂದು ಹೇಳಿ, ಮತ್ತೆ ಪತ್ರವನ್ನು ಸಮಗ್ರವಾಗಿ ಸಮಾ ಲೋಚಿಸಿ, ನಕ್ಕು, “ಎಲೆ ಭೀರು, ರಾಜಪುತ್ರಿ ! ಈ ರಾಜಸಿಂಹನು ಜೀವಿ ಸಿರುವ ವರೆಗೂ ನಿನ್ನ ಮಾನ ಪ್ರಾಣಗಳಿಗೆ ಸಾಧಕವಾಗದು. ಔರಂಗ ಜೆ ಬನಿಗೆ ಈ ಬಾರಿ ಚೆನ್ನಾಗಿ ಬುದ್ದಿ ಗಲಿಸಿ ಮತ್ತೊಮ್ಮೆ ನಿನ್ನ ಮಾತೆ ದಂತೆ ಮಾಡಿ ಕಳುಹುವೆನು.” ಎಂದು ಹೇಳಿಕೊಳ್ಳುತ್ತಿದ್ದನು. ಶ್ಯಾಮಲ ಪಂಡಿತನು ರಾಜಸಿಂಹನನ್ನು ನೋಡಿ....... ಮಹಾರಾಜ ! ರಾಒಪುತ್ರಿಯನ್ನು ಉದ್ದಾರ ಮಾಡುವ ಮನಸ್ಸಿದ್ದರೆ ಸಾವಕಾಶಮಾಡಲಾಗದು, ಜಾಗ್ರತೆ ಯಾಗಿ ಸೈನ್ಯವನ್ನು ಸಿದ್ಧಗೊಳಿಸುವ ಪ್ರಯತ್ನ ಮಾಡಬೇಕು” ಎಂದನು. ರಾಜಸಿಂಹನು ಮಂಡಿ ನಿಗೆ ಧೈರ್ಯವನ್ನು ಹೇಳಿ, ಯುದ್ಧ ಸನ್ನಾ ಹಮಾ ಡಲು ಗಮನಿಸಿದನು.