ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೧೮೯ ಇಪ್ಪತ್ತೊಂದನೆ ಪ್ರಕರಣ. - ** --- (ಮೋಹಪ್ರಭಾವವು) ಮರುದಿನ ಛೋಟಸಿಂಗನು ಬರುವನೇನೋ ಎಂದು ಇಂದಿರೆಯು ಮಾರ್ಗನಿರೀಕ್ಷೆ ಮಾಡಿ ಮಾಡಿ ಬೇಸತ್ತಳು. ಆದರೂ ಆತನು ಒರಲೇ ಇಲ್ಲ, ಕಾರಣವೇನೆಂಬುದನ್ನು ತಿಳಿಯಲು ಎಷ್ಟು ಪ್ರಯಾಸಪಟ್ಟರೂ ಫಲವಾಗಲ್ಲ, ಇಂದಿರೆಗೆ ಛೋಟಸಿಂಗನ ವಿಷಯವಾಗಿ ಅನುಮಾನವೂ ಭಯವೂ ಉಂಟಾಯಿತು. ನಿದ್ರಾಹಾರಗಳನ್ನು ಒಟ್ಟು ಆತನ ಗುಣ ಕೌಶಲ. ಮುಂದಾಲೋಚನೆ ಮೊದಲಾದುವುಗಳನ್ನು ನೆನೆನೆನೆದು ದುಃಖಿಸುತ್ತಿದ್ದಳು. ಎಷ್ಟು ವಿಧವಾಗಿ ಚಿಂತಿಸಿದರೂ ಇ೦ದಿರೆಗೆ ಸಮಾಧಾನವಾಗಲಿಲ್ಲ. ಕಡೆಗೆ ಮಸ್ತಾವದನಿಂದಲೇ ತನ್ನ ಸಂಶಯನಿರಸನಮಾಡಿಕೊಳ್ಳಬೇಕೆಂದು ನಿರ್ಧರಿಸಿದಳು, ಮಸಾನದನು ಮೊದಲೇ ಉದಯಪುರಿಯ ಪ್ರೇರಣೆ ಯಿಂದ ಮೋಹಪಾತ ಬದ್ಧನಾಗಿ ಇಂದಿರೆಯ ದಾಸಾನುದಾಸನಾಗಿ ದನು. ಇಂದಿರೆಯು ಸಮ್ಮತಿಸದೆ ಅವಳನ್ನು ಬಲವಂತದಿಂದ ಮದುವೆ ಮಾಡಿಕೊಳ್ಳು ವವನು ಜ್ಯೋತಿಷ ಶಾಸ್ತ್ರ ಪ್ರಕಾರವಾಗಿ ಹತ್ತು ದಿನಗಳೊಳಗಾಗಿ ಸತ್ತು ಹೋಗುವನೆಂದು ಅಂದು ಛೋಟ ಸಿಂಗನು ಹೇಳಿದ್ದುದರಿಂದ ಮಸಾ ವದನು ಹೇಗಾದರೂ ಇಂದಿರೆಯ ಅನುಗ್ರಹವನ್ನು ಪಡೆದು ಅವಳನ್ನು ಮದುವೆಯಾಗಬೇಕೆಂದು ಅವಳು ಹೇಳಿದ ಕೆಲಸವನ್ನು ಎಷ್ಟು ಕಷ್ಟ ಪಟ್ಟಾದರೂ ಮಾಡುತ್ತಿದ್ದನು. ಕಾರ್ಯೋಪಾಯಜ್ಞಳಾದ Cಂದರೆಯು, ಮಸಾವದನ ಮೂರ್ಖತೆಯೇ ತನ್ನ ಕಾರ್ಯಸಾಧನೆಗೆ ಉಪಾಯವೆಂದು ಭಾವಿಸಿ ಸಮಯವನ್ನು ಸಾಧಿಸಿ, ತನ್ನ ಸಂದರ್ಶನಕ್ಕಾಗಿ ಬಂದ ಮಸಾವ ದನನ್ನು ನೋಡಿ ನಗುತ್ತ-“ಯಾರು, ಮಸಾವದ್ ! ನಿನ್ನ ದಾರಿಯನ್ನೇ ನೋಡುತ್ತಿದ್ದೆನು ; ಮಸಾವದ್.....” ಎಂದಳು.