ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.೦ ಕರ್ಣಾಟಕ ಗ್ರಂಥಮಾಲೆ ನಾಚಿಕೊಳ್ಳಬಾರದು, ನಾವು ಇತರರಿಗೆ ಮತ್ಯಾದೆ ಮಾಡಿದರೆ ಅವರೂ ನಮಗೆ ಮರಾದಮಾಡುವರು. ಯಾರ ಸಂಗಡ ಯಾವ ಮಾತನ್ನು ಆಡಬೇಕಾದಾಗಲೂ “ ದಯೆ ಯಿಟ್ಟು ' ಎಂದು ಹೇಳುವ ವಾಡಿಕೆಯನ್ನಿಟ್ಟುಕೊಂಡಿರುವುದು ಒಳ್ಳೆಯದು. ನಮಗೆ ಯಾರು ಯಾವ ಸಣ್ಣ ಕೆಲಸವನ್ನು ಮಾಡಿಕೊಟ್ಟರೂ * ನಿಮ್ಮಿಂದ ತುಂಬ ಸಹಾಯವಾಯಿತು ” ಎಂಬ ಉಪಚಾರೋಕ್ಕಿಯನ್ನಾದರೂ ಹೇಳ ಬೇಕು, ಇವೇನೋ ಎರಡು ಸಣ್ಣ ಮಾತುಗಳು. ಆದರೂ ನಾವು ಯಾರಲ್ಲಿ ಇವನ್ನು ಉಪಯೋಗಿಸುವೆವೋ ಅವರಿಗೆ ಬಹಳವಾಗಿ ಸಂತೋಷವಾಗು ವುದು, ಇವನ್ನು ಆಡದಿದ್ದರೆ ನಮ್ಮನ್ನು ಒರಟರೆಂದೋ ಅಥವಾ ಕೃತಷ್ಟು ರಂದೋ ಆಡಿಕೊಂಡಾರು. ಈ ಮಾತುಗಳನ್ನಾಡುವುದಕ್ಕೆ ನಮಗೇನೂ ವೆಚ್ಚವಾಗುವುದಿಲ್ಲ. ಆದರೆ ಇವಕ್ಕೆ ಬೆಲೆಯೇನೋ ಹೆಚ್ಚು. ಮರಾದೆಯನ್ನು ಕಾಪಾಡಿಕೊಳ್ಳಬೇಕಾದರೆ ಕೆಲವು ಕೆಟ್ಟ ಚೇಷ್ಟೆಗೆ ೪ಗೆ ಅವಕಾಶ ಕೊಡದಂತೆ ನಡೆದುಕೊಳ್ಳಬೇಕಾಗುವುದು, ಪಾಠಶಾಲೆ ಯಲ್ಲಿ ಜೊತೆಯವರ ಅಥವಾ ನಮ್ಮ ಸೊಂತವಾದ ಪ್ರಸ್ತಕಗಳ ಮೇಲೆ ಸಿಕ್ಕಿ ದಂತೆ ಗೀಚುವುದು ಅಥವಾ ಬರೆಯುವುದು ಇಂತಹುದು ಕೂಡದು . ಪಾಠ ಶಾಲೆಯ ಗೋಡೆಗಳ ಅಥವಾ ಮರದ ಸಾಮಾನುಗಳ ಮೇಲೆ ಬರೆಯು ವುದು ಇಲ್ಲವೆ ಯಾವ ವಿಧಗಳಿಂದಲಾದರೂ ಅವನ್ನು ವಿಕಾರಮಾಡಿ ಕೆಡಿಸು ವುದು, ನೆಲದಮೇಲೆ ಶಾಯನ್ನು ಚೆಲ್ಲುವುದು, ಅಲ್ಲಲ್ಸಿ ಸಿಂಬಳವನ್ನು ನೀದುವುದು, ಮತ್ತು ಉಗುಳುವುದು ಇಂತಹವುಗಳೆಲ್ಲಾ ಬಲು ಕೆಟ್ಟಚಾಳಿ ಗಳು, ಪುಸ್ತಕಗಳನ್ನು ಓದುತ್ತಿರುವಾಗ ನಡುವೆ ಎಲ್ಲಿಯಾದರೂ ನಿಲ್ಲಿಸಿ ಗುರುತಿಡಬೇಕಾದರೆ ಆ ಹಾಳೆಯನ್ನೇ ಮಡಿಸಬಾರದು, ತೆಳುವಾದೊಂದು ಕಾಗದವನ್ನು ಅಥವಾ ದಾರವನ್ನು ಗುರುತಿಡಬೇಕು, ಅಂಗಿಯ ಎಡಗಡೆ ಯ ಮೇಲಿನ ಜೇಬಿನಲ್ಲಿ ಮುಚ್ಚಳವಿಲ್ಲದ ಬರೆಯುವ ಕಡ್ಡಿಗಳು ಸೀಸದ