ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಮಲಾದೇವಿ ೧೯೩ ಬಂದು ನಿರಾಶರಾಗಿ ಹಿಂತಿರುಗುತ್ತಿದ್ದರು. ಪಾಪ ! ಪಟ್ಟ ಮಹಿಷಿಯಾದ ಉದಯಪುರಿಗೆ ಕೂಡ ಆಸ್ಪದವಿಲ್ಲದೆ ಹೋಯಿತು, ಪತಿಯ ಅವಸ್ಥೆ ಹೇಗಿರುವುದೋ ಎಂದು ಯೋಚಿಸುತ್ತ ಅವಳು ದಿನದಿನಕ್ಕೂ ಕ್ಷೀಣವಾ ಗುತ್ತ ಬಂದಳು. ರೋಗಪೀಡಿತನಾದ ಬಾದಶಹನನ್ನು ನೋಡಬೇ ಕೆಂದು ಪಟ್ಟ ಪ್ರಯಾಸವು ಸಫಲವಾಗಲಿಲ್ಲ. ಬಾದಶಹನ ರೋಗವು ವೈದ್ಯರ ಚಿಕಿತ್ಸೆಗಳಿಗೂ ಔಷಧಕ್ಕೂ ಜಗ್ಗದೆ ಮೀರುತ್ತಿದ್ದಿತು. ಆತನ ದೇಹಸ್ಥಿತಿಯು ರೋಷನಾರೆಯೊಬ್ಬಳಿಗೆ ಹೊರತು ಮತ್ತಾರಿಗೂ ತಿಳಿಯು ತಿರಲಿಲ್ಲ. ಇವಳು ಒಂದೊಂದು ಬಾರಿ ಒಂದೊಂದು ಒಗೆಯಾಗಿ ಹೇಳುತ್ತ ಸಂದೇಹವನ್ನು ಹೆಚ್ಚಿಸುತ್ತಿದ್ದಳು. ಉದಯಪುರಿಯ ಮನಃ ಸ್ಥಿತಿಯು ಹೇಳುವಂತೆಯೇ ಇರಲಿಲ್ಲ. - ಸ್ವಲ್ಪ ದಿನಗಳಲ್ಲಿಯೇ ಬಾದಶಹನು ಒದುಕುವುದು ದುರ್ಲಭವೆಂದು ತೋರಿತು, ರೋಷನಾರೆಗೆ ಅಣ್ಣನು ಸಾಯುವನೆಂದು ದುಃಖವಾಗುತ್ತಿ ದ್ದರೂ ರಾಜ್ಯ ಲೋಭವು ಇವಳನ್ನಾ ಕ್ರಮಿಸಿದುದರಿಂದ ರಾಜ್ಯವನ್ನು ತನ್ನ ಸ್ವಾಧೀನ ಮಾಡಿಕೊಳ್ಳಬೇಕೆಂಬ ದುರಾಶೆಯುಂಟಾಗಿ ಅದಕ್ಕಿದೇ ಕಾಲವೆಂ ದೆಣಿಸಿ ಸೇವಕರನ್ನೆಲ್ಲ ತನ್ನ ವಶಮಾಡಿಕೊಂಡಳು ಔರಂಗಜೇಬನು ಸತ್ಯ ಮೇಲೆ ರಾಜ್ಯವು ತನಗೆ ಸುಸಾಧ್ಯವಾಗಬೇಕೆಂದು ಸಾಮಂತರಾಜರೆಲ್ಲ ರನ್ನೂ ತನ್ನ ವಶದಲ್ಲಿರಿಸಿಕೊಳ್ಳಲು ಪ್ರಯತ್ನಿಸಿದಳು. ಜಯಪುರದ ಜಯ ಸಿಂಗನು ಈ ಕಾರ್ಯದಲ್ಲಿ ತನಗೆ ಸಹಾಯವಾದರೆ ತನ್ನ ಕೋರಿಕೆಯು ಸುಲಭವಾಗಿ ನೆರವೇರುವುದೆಂದು ತಿಳಿದು ಆತನಿಗೆ ಕಾಗದವನ್ನು ಬರೆದಳು. ಆದರೆ ಜಯಸಿಂಗನು ಬಾದಶಹನ ಮರಣವಾರ್ತೆಯನ್ನು ನಂಬದೆ ಅದ ಕ್ಯಾವ ಪ್ರತ್ಯುತ್ತರವನ್ನೂ ಕೊಡದೆ ಸುಮ್ಮನಿದ್ದನು. ಪಾಪ ! ಬಾದ ಹನು ಇಹಶೋಕ ವ್ಯಾಪಾರ ಜ್ಞಾನವಿಲ್ಲದೆ ತನ್ನ ಮಂಚದ ಮೇಲೆ ಮಲ ಗಿರಲು ಇವಳು ಆತನ ಮುದ್ರೆಯುಂಗುರವನ್ನು ಅಪಹರಿಸಿ ಕೊರಂಗಜೇಬನೇ। ಒರೆದಂತೆ ರಾಜಪುತ್ರರೆಲ್ಲರಿಗೂ ಹೀಗೆ ಪತ್ರಗಳನ್ನು ಬರೆದಳು.