ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯ ಕರ್ಣಾಟಕ ನಂದಿನಿ ಷದಿಂದ ಇಬ್ಬರನ್ನೂ ಕರೆದುಕೊಂಡು ಹೋಗಿ ಬಾದಶಹನು ಮಲಗಿದ್ದ ಸ್ಥಳ ದಲ್ಲಿ ಬಿಟ್ಟದು, ಉದಯಪುರಿಯು ಔರಂಗಜೇಬನ ಬಳಿಗೆ ಹೋಗಿ ಆತನ ಶರೀರವನ್ನು ಮುಟ್ಟಿ ನೋಡಿದಳು. ಆಹಾರವಿಲ್ಲದಿದ್ದುದರಿಂದ ಆತನ ಶರೀ ರವು ಶುಷ್ಕ ವಾಗಿ ನವಗಳು ಕಾಣುತ್ತಿದ್ದುವು. ಅವಳು ಸ್ವಲ್ಪ ಹೊತ್ತು ಅವನ ಪಾದಗಳ ಸಮಿಾಪದಲ್ಲಿ ಕುಳಿತು ತನ್ನ ವಸ್ತ್ರದಿಂದ ಪಾದಗಳನ್ನು ಮೆತ್ತಗೆ ಒತ್ತುತ್ತಿಲಿರಲು ಸ್ವಲ್ಪ ಹೊತ್ತಿಗೆ ಬಾದಶಹನು ಕಣ್ಣೆರಡು ಉದ ಯುರಿಯನ್ನು ನೋಡಿ ಕಣ್ಣೀರನ್ನು ಸುರಿಸುತ್ತ “ ಈವರೆಗೆ ಏಕೆ ಬರ ಲಿಲ್ಲ ?” ಎಂದು ಸಂಜ್ಞೆಯಿಂದ ಕೇಳಿದನು. ಅದಕ್ಕೆ ಉದಯವರಿಯು “ ಮಹಾರಾಜ ! ನಾನೇನು ಮಾಡಲಿ ? ರೋಷನಾರೆಯು ನಿಮ್ಮ ದರ್ಶನ ಕೈ ಅಡ್ಡಿ ಮಾಡಿರುವಳು, ” ಎಂದು ದೈನ್ಯದಿಂದ ಹೇಳುತ್ತಿರುವಷ್ರ ಲ್ಲಿಯೇ ಪಕ್ಕದ ಕಿರುಮನೆಯಲ್ಲಿಯೇ ಮಲಗಿದ್ದ ರೋಷನಾರೆಗೆ ಅಕಸ್ಮಾತ್‌ ಉದಯಪುರಿಯ ಕಂಠಸ್ವರವು ಕೇಳಿ ಬರಲು, ಅಗಾಧ ಕಾರ್ಯಚಿಂತೆಯ ಲ್ಲಿದ್ದ ರೋಷನಾರೆಯು ಕೆಲಸ ಕೆಟ್ಟಿತೆಂದು ಕೆರಳೆ, ಥಟ್ಟನೆದ್ದು ಬಂದು ಉದ ಯಪುರಿಯ ಸೆರಗನ್ನು ಹಿಡಿದೆಳೆದು ಮಂಚದಿಂದ ಕೆಳಕ್ಕೆ ಕೆಡಹಿದಳು. ತತ್‌ಕ್ಷಣವೇ ಭೀತಿಚಿತ್ತಳಾಗಿದ್ದ ಉದಯಪುರಿಯು ರೋಷದಿಂದ ತಾನೂ ರೋಷನಾರೆಯ ಸೆರಗನ್ನು ಹಿಡಿದು ಸ್ವಲ್ಪ ದೂರ ಎಳದುಕೊಂಡುಹೋದಳು. ಸ್ಪಲ್ಪ ಹೊತ್ತಿನೊಳಗೆ ಇಬ್ಬರೂ ದುರಾಗ್ರಹಪರವಶರಾಗಿ ಮುಷ್ಟಿಯುದ್ಧಕ್ಕೂ ಮೊದಲುಮಾಡಿದರು. ಈ ವಿಷಯವನ್ನು ತಿಳಿದು ರೋಷನಾರೆಯು ಏನು ಮಾಡುವಳೋ ಎಂಬ ಭೀತಿಯಿಂದ ಸೇವಕರೆಲ್ಲರೂ ಅತ್ತಿತ್ತ ಓಡಿಹೋ ದರು, ಸುಕುಮಾರಿಯಾದ ಉದಯಪುರಿಯು ಅವಳ ಮುಟ್ಟಿ ಪ್ರಹಾರಗಳ ನ್ನು ತಡೆಯಲಾರದೆ ಸ್ವಲ್ಪ ಹೊತ್ತಿನ ಒಳಗಾಗಿ ಕೆಳಗೆ ಬಿದ್ದು ಮೂರ್ಛಿತ ಮಾದಳು, ಬಿದ್ದವಳನ್ನು ಆಗಲೇ ರೋಷನಾರೆಯು ಎಳೆದು ದ್ವಾರ ದಿಂದಾಚೆ ಹಾಕಿದಳು. ಪಾಪ ! ಸ್ಮತಿಯಿಲ್ಲದೆ ಬಿದ್ದಿದ್ದ ಔರಂಗಜೇಬ ನಿಗೆ ಇದಾವುದೂ ತಿಳಿಯುವಂತಿರಲಿಲ್ಲ. ಇದೆಲ್ಲವನ್ನೂ ನೋಡಿದ ಇಂದಿ