ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಮಹಾದೇವಿ ೧೯೭ ತೆಯು ಕನಿಕರಪಟ್ಟು ತತ್‌ಕ್ಷಣವೇ ಬಂದು ಉದಯಪುರಿಯನ್ನು ಉಪಚರಿಸಿ ಮೆಲ್ಲನೆ ಅಂತಃಪುರಕ್ಕೆ ಕರೆದೊಯ್ದಳು. ಧನಲೋಭದಿಂದ ಉದಯಪುರಿಯನ್ನು ಒಳಗೆ ಬರಲು ಅವಕಾಶ ಕೊಟ್ಟ ಸೇವಕರು ರೋಷನಾರೆಯ ಘಾತುಕತನವನ್ನು ತಿಳಿದುದ್ದದರಿಂದ ತಮಗಾವದಂಡನೆಯಾಗುವುದೋ ಎಂದು ನಡುಗುತ್ತಿದ್ದರು. ಆದರೆ, ಆವ ಕಾರಣದಿಂದಲೋ ರೋಷನಾರೆಯು ಆವ ಮಾತನ್ನೂ ಆಡದೆ ತಲೆ ಬಗ್ಗಿಸಿ ಕೊಂಡು ಪುನಃ ತನ್ನ ಕಿರುಮನೆಗೆ ಹೋಗಿ ಮಲಗಿಕೊಂಡಳು. ಅಂದಿನಿಂದಲೂ ದೈವಾನುಗ್ರಹದಿಂದ ಬಾದಶಹನಿಗೆ ಗುಣವಾಗುತ್ತ ಬಂದಿತು. ಕ್ರಮಕ್ರಮವಾಗಿ ಆಹಾರ ನಿದ್ರೆಗಳಲ್ಲಿ ಅಭಿರುಚಿಯುಂಟಾಗಿ ಎರಡು ವಾರಗಳೊಳಗಾಗಿ ಅವನು ಹಾಸಿಗೆಯಿಂದೆದ್ದು ಅತ್ತಿತ್ತ ತಿರುಗಾಡ ಲಾರಂಭಿಸಿದನು. ಈ ಶುಭ ಸಮಾಚಾರವನ್ನು ತಿಳಿದ ಉದಯಪುರಿಯು ಆತ್ಮಾನಂದದಿಂದ ರೋಷನಾರೆಯು ತನಗೆ ಮಾಡಿದ ತೊಂದರೆಗಳಿಗಾಗಿ ಮುಳ್ಳನ್ನು ತೀರಿಸಿಕೊಳ್ಳುವೆನೆಂದು ಹಿಗ್ಗುತ್ತಿದ್ದಳು ; ಮತ್ತು ಅಂದು ರಾತ್ರಿ ತನಗೆ ಮಾಡಿದ ಸಹಾಯಕ್ಕಾಗಿ ಇಂದಿರೆಯ ವಿಷಯದಲ್ಲಿ ಅತ್ಯಂತ ವಿಶ್ವಾಸವಿರಿಸಿ ಅಂದಿನಿಂದ ಅವಳನ್ನು ವಿಶೇಷವಾಗಿ ಗೌರವಿಸುತ್ತಿದ್ದಳು. ಕೆಲವು ದಿನಗಳಲ್ಲಿಯೇ ಇಂದಿರೆಯನ್ನು ಸವಿಾಪಕ್ಕೆ ಕರೆದು “ ಇಂದಿರಾ ! ರಾಜಪುತ್ರಿಯಾದ ನೀನು ಸುಕುಮಾರಿಯು ; ಕಷ್ಟಗಳನ್ನು ಸಹಿಸಲಾರೆಯಾ ದುದರಿಂದ ಇನ್ನು ಮುಂದೆ ನೀನಾವ ಕೆಲಸಗಳನ್ನೂ ಮಾಡದೆ ನನ್ನಲ್ಲಿ ಪೂರ್ಣ ವಿಶ್ವಾಸವಿರಿಸಿ, ನನ್ನ ಬಳಿಯಲ್ಲಿಯೇ ಇರು. ಇನ್ನು ನಿನಗೆ ಯಾವ ಲೋಪವನ್ನೂ ಉಂಟುಮಾಡುವುದಿಲ್ಲ. ಬಾದಶಹುರಿಂದ ಇನ್ನು ನಿನಗಾವ ಭಯವೂ ಇಲ್ಲ” ಎಂದು ಅನೇಕ ವಿಧವಾಗಿ ಹೇಳಿ ತನಗಿರುವ ವಿಶ್ವಾಸ ವನ್ನು ಪ್ರಕಟಪಡಿಸಿದಳು, ಔರಂಗಜೇಬನಿಗೆ ರೋಗವು ಸಂಪೂರ್ಣವಾಗಿ ಗುಣವಾಗಿ ಎಂದಿನಂತೆ ರಾಜ್ಯ ಕಾರ್ಯಗಳನ್ನೂ ಸ್ವತಃ ವಿಚಾರಿಸುವಷ್ಟರ ಶಕ್ತಿಯುಂಟಾಯಿತು,