ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೮ ಕರ್ನಾಟಕ ನಂದಿನಿ ಕ್ರಮವಾಗಿ ಎಲ್ಲವನ್ನೂ ವಿಚಾರಿಸುತ್ತ ಬಂದನು, ರೋಷ ನಾರೆಯ ದುರಾ ಲೋಚನೆಗಳನ್ನೂ ಅವಳು ರಾಜವರಿಗೆ ಬರೆದಿದ್ದ ಕಾಗದಗಳನ್ನೂ ಇನ್ನೂ ಅದಕ್ಕೆ ಸಂಬಂಧಪಟ್ಟ ಕುಹಕಗಳನ್ನೂ ಉದಯಪುರಿ ಮೊದಲಾದವರಿಂದ ತಿಳಿದು ಅವಳ ಮೇಲೆ ಮಹದಾಗ್ರಹವನ್ನು ಹೊಂದಿದನು, ಆದರೆ ತನ್ನ ತಂಗಿಯಾಗಿದ್ದು ದರಿಂದಲೂ ಮೊದಲು ಅವಳಿಂದ ತನಗೆ ತುಂಬ ಸಹಾಯ ವಾಗಿದ್ದುದರಿಂದಲೂ ತನ್ನ ಕೋಪವನ್ನು ಅವಳ ಮುಂದೆ ತೋರ್ಪಡಿಸಲಿಲ್ಲ ವಾದರೂ ಅಂದಿನಿಂದ ಅವಳ ಮಹಲಿಗೆ ಹೋಗಿ ಅವಳನ್ನು ನೋಡಿ ಸಂಭಾ ಪಿಸುವುದನ್ನು ಮಾತ್ರ ಬಿಟ್ಟನು. ಈ ವೃತ್ತಾಂತವೆಲ್ಲವನ್ನೂ ಗೂಢಚಾರ ರರಿಂದ ತಿಳಿದು ರೋಷನಾರೆಯು ಅಗಾಧವಾದ ಚಿಂತೆಯಲ್ಲಿ ಮುಳುಗುವಂ ತಾದಳು. ತನ್ನ ಪ್ರಯತ್ನಗಳೆಲ್ಲವೂ ಭಂಗವಾದುದರಿಂದ ಅವಳಿಗೆ ದುಃಖ ವೂ ಆಗ್ರಹವೂ ಒಟ್ಟಾಗಿ ಉಂಟಾಯಿತು. ಉದಯಪುರಿಯೂ ಅವಳ ಮೇಲೆ ಕತ್ತಿಯನ್ನು ಕಟ್ಟಿ, ಅವಳ ಕ್ರೂರ ಕೃತ್ಯಗಳಿಗೆ ಭಯಪಡುತ್ತಿದ್ದರೂ ಕಾರ್ಲೋಪಾಯ ಚತುರೆಯಾದ ಇಂದಿರೆಯು ತನಗೆ ಸಹಾಯಕಳಾಗಿರುವ ಳೆಂದು ಧೈರ್ಯಹೊಂದಿ ರೋಷನಾರೆಗೆ ಪ್ರತೀಕಾರ ಮಾಡುವ ಯೋಚನೆ ಯನ್ನು ಮಾಡುತ್ತಿದ್ದಳು. ಇಪ್ಪತ್ತಮೂರನೆಯ ಪ್ರಕರಣ, (ಛೋಟುಸಿಂಗ್) ಹಿಂದೆ ಛೋಟುಸಿಂಗನನ್ನು ಮಸಾದವನು ಜನಾನಾ ಮಹಲಿನ ಒಂದು ಕಿರುಮನೆಯಲ್ಲಿ ಕೂಡಿದ್ದನೆಂದೂ ಆ ಮೇಲೆ ಅವನು ಬಂದು ನೋಡಲು ಇರ ಲಿಲ್ಲವೆಂದೂ ಹೇಳಿದ್ರೆ ನಷ್ಟೆ : ಲೋಟುಸಿಂಗನು ಉದಯಪುರಿಯ ಜನಾನೆ ಯನ್ನು ಪ್ರವೇಶಿಸುತ್ತಿರುವಾಗ ರೋಷನಾರೆಯ ಮುಖ್ಯ ಸೇವಕನಾದ ಪರು ಆಫೈರನು ತನ್ನ ಕೈಯಲ್ಲಿ ವೀಣೆಯನ್ನು ಹಿಡಿದುಕೊಂಡು ಬಂದು ಆತನ ಬಳಿ