ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೧೯೯ ಯನ್ನು ಸೇರಿ ಆತನು ಬರೆದ ಚಿತ್ರ ಪ್ರತಿಮೆಗಳನ್ನು ನೋಡಿ ಸಂತೋಷ ಪಟ್ಟು ತನ್ನಲ್ಲಿದ್ದ ವೀಣೆಯನ್ನು ಆತನಿಂದ ಸರಿಮಾಡಿಸಿ ಈಗಲೇ ಬರುವೆನೆಂದು ಹೋದನಲ್ಲವೆ ? ಫರುಕ್ ಫೈರನು ವೀಣೆಯನ್ನು ತೆಗೆದುಕೊಂಡು ಜನಾನೆ ಯನ್ನು ಪ್ರವೇಶಿಸಿದ ಕೂಡಲೇ ರೋಷನಾರೆಯು ನೋಡಿ ಆಶ್ಚರ್ಯದಿಂದ “ ಇಷ್ಟು ಬೇಗ ಸುಮಾಡಿಸಿದೆಯಾ ? ಇಷ್ಟು ಚಾತೆಯಾಗಿ ಈ ವೀಣೆ ಯನ್ನು ಇಷ್ಟು ಚೆನ್ನಾಗಿ ಸರಿಮಾಡಿರುವರಾರು?” ಎಂದು ಕೇಳಲು, ಅದಕ್ಕೆ ಫರುಕ್ ಫೈರನು, “ ಬೇಗಮ್ ಸಾಹೇಬಾ ! ಛೋಟುಸಿಂಗನೆಂಬ ಚಿತ್ರಕಾರ ನೊಬ್ಬನು ಉದಯಪುರಿ ಬೇಗಮರ ಮಹಲಿಗೆ ಹೋಗುತ್ತಿದ್ದನು ; ಆತನ ಸಮಾಚಾರವನ್ನು ವಿಚಾರಮಾಡಿದರೆ ಅವನೊಬ್ಬ ಅವತಾರಪುರುಷಸಿರಬಹು ದೆಂದು ತೋರುವುದು, ಚಿತ್ರ ಪ್ರತಿಮೆಗಳನ್ನು ಬರೆಯುವುದರಲ್ಲಿ ಆತನಿಗೆ ಸಮಾನರಾರೂ ಈವರೆಗೆ ಹುಟ್ಟಿರಲಾರರು ! ಆತನು ಒಂದು ದಂತದ ಬೀಸಣಿ ಗೆಯನ್ನು ಕೆತ್ತಿ ಅದರ ಮೇಲೆ ಉದಯಪುರಿಯನ್ನೂ ಬಾದಶಹರನ್ನೂ ಕೆತ್ತಿ ರುವನು, ಆತನಿಗೆ ಸಂಗೀತಶಾಸ್ತ್ರದಲ್ಲಿಯೂ ಪುಶ್ರಮ ವಿರುವಂತೆ ತೋರು ವುದು. ಆತನೇ ಈ ವೀಣೆಯನ್ನು ಸರಿಮಾಡಿಕೊಟ್ಟನು. ಅವನು ಉದಯ ಪುರೀ ಬೇಗಮರವರಿಗೆ ಆ ದಂತದ ಬೀಸಣಿಗೆಯನ್ನೊಪ್ಪಿಸಿ, ಅವರಿಂದ ಏನಾ ದರೂ ಬಹುಮಾನವನ್ನು ಪಡೆಯಬೇಕೆಂದಿರುವನು.” ಎಂದನು. ಅದಕ್ಕಾ ರೋಷನಾರೆ... ಏನು ! ಆ ಛೋಟುಸಿಂಗನಿಗೆ ಕಣ್ಣುಗಳು ನೆತ್ತಿಗೆ ಹತ್ತಿ ರುವುವೊ ಇಲ್ಲವೊ ? ಮೊದಲು ನನ್ನ ದರ್ಶನವನ್ನು ಮಾಡಿ ನನ್ನಿಂದ ಬಹ ಮಾನವನ್ನು ಹೊಂದದೆ ಅವಳ ಮಹಲಿಗೇಕೆ ಹೋದನು ? ನನಗೆ ಇದು ಎಷ್ಟು ಅಪಮಾನಕರವು !” ಎಂದು ಆಗ್ರಹಮಾಡಿದಳು. ಫರುಕ್‌ಫೈರನು ಬೋಟುಸಿಂಗನಮೇಲಿನ ಅಭಿಮಾನದಿಂದ ತೋಷ ನಾರೆಯನ್ನು ಕುರಿತು, “ಬೇಗಮ'ಸಾಹೇಬಾ ! ತಾವು ಇಷ್ಟು ಆಗ್ರಹಮಾಡುವ ಕಾರಣವಿಲ್ಲ. ಅವನು ತಮ್ಮ ದರ್ಶನದಲ್ಲಿ ಅತ್ಯಂತ ಕುತೂಹಲವುಳ್ಳವನಾಗಿರುವನಲ್ಲದೆ, ನನ್ನನ್ನು ಇಲ್ಲಿಗೆ ಕರೆದುಕೊಂಡು ಹೋಗಬೇಕೆಂದು ಪ್ರಾರ್ಥಿಸಿದನು. ನಾನು