ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ರೋಗವು ಹಿಂದುಗಳ ದೃಷ್ಟಿದೋಷದಿಂದಲೇ ಪ್ರಾಪ್ತವಾಯಿ ತೆಂದೂ ತಾನು ಈವರೆಗೆ ವ್ಯಯಮಾಡಿರುವ ದ್ರವ್ಯವನ್ನೆಲ್ಲ ಹಿಂದುಗಳಿಂದ ಕಿತ್ತುಕೊಳ್ಳಬೇಕೆಂದೂ ಯೋಚಿಸಿ, “ ಜಿಜಿಯಾ” ಎಂಬ ತಲೆಗಂದಾಯ ವನ್ನು ಏರ್ಪಡಿಸಿದನು. ಪ್ರತಿಯೊಬ್ಬ ಹಿಂದುವೂ ಬಡವನಾಗಳಿ, ಹಣಗಾರ ನಾಗಲಿ, ತನಗೆ ಸ್ವಲ್ಪ ಹಣವನ್ನು ಈ ಕಂದಾಯದ ಮೂಲಕ ಕೊಡಬೇ ಕೆಂದು ಬಾದಶಹನು ಕಠಿಣವಾಗಿ ವಿಧಿಸಿದನು. ಕೆಲವರು ಬಡಹಿಂದುಗಳು ಕಂದಾಯವನ್ನು ಕೊಡಲು ಗತಿಯಲ್ಲದೆ ತಮ್ಮ ಮನೆ ಮಠಗಳನ್ನು ಮಾರಿ ಬಾದಶಹನನ್ನು ತೃಪ್ತಿ ಪಡಿಸಿದರು. ತನ್ನ ಅಪ್ಪಣೆಯನ್ನು ಮಾರಿ ಕಂದಾಯ ವನ್ನು ಕೊಡದಿದ್ದವರ ಮನೆಗೆ ನುಗ್ಗಿ ಎಲ್ಲವನ್ನೂ ಸುಲಿದುಕೊಂಡು ಬರು ವಂತೆ ತನ್ನ ಭಟರಿಗೆ ಆಜ್ಞಾಪಿಸಿ, ಹಿಂದುಗಳಿಗೆ ಅನೇಕ ವಿಧವಾಗಿ ಹಿಂಸೆಯ ನ್ನುಂಟುಮಾಡುತ್ತಿದ್ದನು. ಇಷ್ಟೇ ಅಲ್ಲದೆ, ಪ್ರತಿಗ್ರಾಮಗಳಿಗೂ ತನ್ನ ಭಟ ರನ್ನು ಕಳುಹಿಸಿ, ಹಿಂದುಗಳಿಂದ ತಲೆಗಂದಾಯವನ್ನು ತೆಗೆದುಕೊಳ್ಳುತ್ರಿ ದೈನು, ಡಿಲೀನಗರದಲ್ಲಿ ಲಕ್ಷಾಂತರ ಹಿಂದುಗಳು ಇದು ಅನ್ಯಾಯವೆಂದು ಬಾದಶಹನಲ್ಲಿ ಮೊರೆಯಿಟ್ಟರು. ಪ್ರತಿಶುಕ್ರವಾರವೂ ಔರಂಗಜೇಬನು ಜುಮ್ಮಾ ಮಸೀದಿಗೆ ಹೋಗುವ ವಾಡಿಕೆಯಿದ್ದುದರಿಂದ ಆದಿನ ಹಿಂದುಗಳಲ್ಲಿ ಬ್ರಾಹ್ಮಣರು ಪಂಚಾಗದ ಕಟ್ಟುಗಳನ್ನು ಕಂಕುಳಲ್ಲಿಟ್ಟು ಕೊಂಡು ಮಾರ್ಗ ದಲ್ಲಿ ಕಾದಿದ್ದು ಬಾದವನು ಒಂದಕೂಡಲೆ ' ದುರ್ಭರವಾದ ತಲೆಗಂದಾ ಯವನ್ನು ತೆಗೆದುಹಾಕಿ ಒಡಕುಟುಂಬಗಳನ್ನು ಹೇಗಾದರೂ ಮಾಡಿ ಕಾಪಾಡ ಬೇಕೆಂದು ಆತನನ್ನು ಕುರಿತು ಮೊರೆಯಿಟ್ಟರು ಬಾದಶಹನು ಅವರ ಮಾತುಗಳಿಂದ ಆಗ್ರಹವ್ಯಗ್ರನಾಗಿ ಅವರೆಲ್ಲರನ್ನೂ ಆನೆಯ ಕಾಲ ಳಿಂದ ತುಳಿಸಿ ನಿರ್ಮೂಲ ಮಾಡಿಸಿದನು. ಈ ಕಾರಣದಿಂದ ಹಿಂದುಗಳಿಗೆಲ್ಲ ಅವನ ಮೇಲೆ ಮಹತ್ತರವಾದ ದ್ವೇಷವು ಅಂಕುರಿಸಿತು ಜಿಟಿಯಾ ಕಂದಾಯವನ್ನು ಕೊಡದೆ ಔರಂಗಜೇಬನೊಡನೆ ಅಕಾರಣ ವಾದ ಕಲಹವನ್ನು ಮಾಡಬಾರದೆಂದು ತಿಳಿದು ಅಲ್ವಾರ್‌, ಭರತ ಪ್ರರ್