ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೪ ಕರ್ಣಾಟಕ ನಂದಿನಿ ಬುಂದಿ, ಜಯಪುರ ಮೊದಲಾದ ಸಂಸ್ಥಾನಾಧಿಪರು ಬಾದಶಹನಿಗೆ ಕಾಣಿಕೆ ಗಳನ್ನು ತಂದೊಪ್ಪಿಸಿದರು. ಆದರೆ, ಉದಯಪ್ರರಾಧೀಶನಾದ ರಾಜಸಿಂ ಹನು ಮಾತ್ರ ಕಂದಾಯವನ್ನು ಕೇಳಲುಬಂದ ತುರಷ್ಕರನ್ನು ಹೆದರಿಸಿ ಓಡಿ ಸಿದನು. ಈ ಸಮಾಚಾರವನ್ನು ಕೇಳಿ ಔರಂಗಜೇಬನು ಕೌಧವನ್ನು ಹೊಂದಿದನಾದರೂ ರಾಜಸಿಂಹನಿಗೆ ಸ್ವಲ್ಪ ಹೆದರಿದವನಾಗಿ ಸುಮ್ಮನಿದ್ದನು. ಆನೆಗಳಿಂದ ಬ್ರಾಹ್ಮಣರನ್ನು ತುಳಿಸಿದುದನ್ನೂ ಬಡ ಕುಟುಂಬಗಳಿಂದ ಕಂದಾಯವನ್ನು ತೆಗೆದುಕೊಂಡುದನ್ನೂ ಇನ್ನೂ ಅನೇಕ ವಿಧವಾದ ಕೂರ ಕೃತ್ಯಗಳನ್ನೂ ಕೇಳಿ ರಾಜಸಿಂಹನು ಮಹದಾಗ್ರಹದಿಂದ ಹಿಂದುಗಳ ದುರವ ಸೈಗೆ ವ್ಯದೆಪಟ್ಟು ಔರಂಗಬೇಬನಿಗೆ ಧರ್ಮಮಾರ್ಗವನ್ನು ಬೋಧಿಸುವ ಒಂದು ಸವಿಸ್ತರ ಪತ್ರವನ್ನು ಬರೆದರೆ, ಆದನ್ನು ನೋಡಿಯಾದರೂ ಅವನು ಸನ್ಮಾರ್ಗವರ್ತಿಯಾಗುವನೆಂದು ನಂಬಿ ಈ ರೀತಿಯಾಗಿ ಬರೆದು ಕಳುಹಿ ದನು;-. ........................ ನಾನು ನಿಮ್ಮ ರಾಜಸಭೆಗೆ ಬರದಿದ್ದರೂ ರಾಜ ಭಕ್ತಿಯುಳ್ಳವನಾಗಿ ನಿಮಗೆ ಸಹಾಯಕರನಾಗಿರಬೇಕೆಂದಿರುವೆನು. ನಾನು ಮಾಡುವ ಸಹಾಯವು ಹಿಂದೂದೇಶದಲ್ಲಿರುವ ರಾಜಾಧಿರಾಜರಿಗೂ ಸರದಾ ರರಿಗೂ ಸಂಸ್ಥಾನಾಧಿಪತಿಗಳಿಗೂ ನರ್ವಾಲರಿಗೂ ಉಪಯೋಗಕರವಾಗಿ, ಊರ್ಜಿತಾವಸ್ಥೆಗೆ ಕಾರಣವಾಗಿರುವುದು ಇಷ್ಟೇ ಅಲ್ಲ ; ಈರ್ರಾ, ತುರ್ರಾ, ರೋಮ್, ಟರ್ಕಿ ಮೊದಲಾದ ಸಪ್ತದೀಪಗಳಿಗೂ ಜಲಸ್ಥಲಮಾರ್ಗಗಳಲ್ಲಿ ಪ್ರಯಾಣಮಾಡುವ ಮಾರ್ಗಸ್ಪರಿಗೂ ಉಪಯೋಗಕರವಾಗಬೇಕೆಂಬುದು ನನ್ನ ಆಶೆ, ನಿಮ್ಮ ಪೂರ್ವಜನಾದ ಮಹಮ್ಮದ ಜಲಾಲುದ್ದೀನನ ಕೀರ್ತಿ ಲೋಕದಲ್ಲೆಲ್ಲಾ ಪ್ರಖ್ಯಾತಿ ಹೊಂದಿರುವುದಕ್ಕೆ ಕಾರಣವೇನೆಂದರೆ, ಆತನು ಸರ್ವಜನರಲ್ಲಿಯೂ ಸಮದೃಷ್ಟಿಯನ್ನಿರಿಸಿ ಐವತ್ತೆರಡು ವರ್ಷಗಳಕಾಲ ರಾಜ್ಯಭಾರಮಾಡಿ ಅಕ್ಷಯವಾದ ಕೀರ್ತಿ ಸುಖಗಳಿಗೆ ಅಧಿಕಾರಿಯಾದನು. ಈತನು ಹಿಂದು, ಈತನು ಮಹಮ್ಮದೀಯನು, ಈತನು ಕ್ರಿಸ್ತ ಎಂಬೀ