ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಶಾದೇವಿ ೨೦೫ ೦೦೦೦೦ ಭೇದವನ್ನಿಡದೆ ಸಕಲ ಮರ್ತರಿಗೂ ಸೌಖ್ಯವನ್ನಿ ಯುತ್ತ ರಾಜ್ಯವನ್ನಾಳಿ ದನು. ಆತನಿಗೆ ಈ ಪಕ್ಷಪಾತಬುದ್ದಿ ಯಿಲ್ಲ ದಿದ್ದು ದರಿಂದಲೇ “ ಜಗ ದುರು” ಎಂಬ ಪದವಿಯು ಆತನಿಗೆ ಲಭಿಸಿತು.. - ನಿಮ್ಮ ರಾಜ್ಯವನ್ನು ನೋಡಿದರೆ, ನಿಮ್ಮ ಕ್ರೂರತನದಿಂದಲೇ ನಿಮ್ಮ ಪ್ರಜೆಗಳೂ ಮಿತ್ರರೂ ನಿಮಗೆ ಪ್ರತಿಕೂಲರಾಗಿರುವರು. ಎಲ್ಲಿ ನೋಡಿ ದರೂ ಕೊಳ್ಳೆ.. ಕೊಲೆ ಇವೇ ಮೊದಲಾದವುಗಳು ಕಾಣಬರುತ್ತಿವೆ ; ದಾರಿ ದ್ರಲಕ್ಷ್ಮಿ ತಾಂಡವಾಡುತ್ತಿರುವಳು ; ಪರಾಕ್ರಮವು ಶೂನ್ಯವಾಗಿರುವುದು, ಕಲಾಕೌಶಲ, ವ್ಯಾಪಾರ ಮೊದಲಾದವುಗಳನ್ನು ಕುರಿತು ಹೇಳಬೇಕಾದುದೇ ಇಲ್ಲ, ನೀವು ಯಾರ ವಿಷಯದಲ್ಲಿ ಅಭಿಮಾನದಿಂದಿರುವಿರೋ ಅಂತಹ ಮರಮ್ಮ ದೀಯರೇ ನಿಮಗೆ ಪ್ರತಿಕೂಲರಾಗಿರುವರು....... . .ನಿಮ್ಮ ರಾಜ್ಯದ ಪ್ರಜೆಗಳಾದ ಹಿಂದುಗಳಿಗೆ ನಿಮ್ಮಲ್ಲಿ ಪ್ರೀತಿಯೇ ಇಲ್ಲ, ಪ್ರಜಾ ಪೀಡನವಾದ ಇಂತಹ ಸೈರವರ್ಶನದಿಂದ ನಿಮ್ಮ ರಾಜವೂ ಸಾರ್ವಭ? ಮಪದವಿಯೂ ಹೇಗೆತಾನೆ ನಿಲ್ಲುವುದು ? ಒಡತನದಿಂದ ಹಲುಬುತ್ತಿರುವ ನಿಮ್ಮ ಪ್ರಜೆಗಳಿಂದಲೂ ಸನ್ಯಾಸಿಗಳು ಬೈರಾಗಿಗಳು ಇವೆರಲ್ಲರಿಂದಲೂ ಕಂದಾಯವನ್ನು ಸುಲಿದು ನಿಮ್ಮ ಕೋಶವನ್ನು ತುಂಬಿಕೊಳ್ಳುವುದಲ್ಲದೆ, ಅವರನ್ನು ನಾನಾವಿಧವಾದ ದುಃಖಗಳಿಗೆ ಗುರಿಮಾಡುತ್ತಿರುವಿರಿ..... ನೀವು ಯಾವ ಗ್ರಂಥವನ್ನು ಈಶ್ವರದತ್ತವಾದ ಧರ್ಮಗ್ರಂಥವೆಂದು ತಿಳಿದಿರುವಿರೋ ಅಂತಹ ಪುಸ್ತಕದಲ್ಲಿ ಕೂಡ ಈಶ್ವರನು ಮಹಮ್ಮದೀಯರಿಗೆ ಮಾತ್ರವೇ ದೇವರಲ್ಲ, ಸಮಸ್ತ ಮಾನವಕೋಟಿಗೂ ಒಡೆಯನೆಂದೇ ಹೇಳಿದೆ. ಈಶ್ವರನಿಗೆ ಮಹಮ್ಮದೀಯರೂ ಇತರರೂ ಸಮಾನರಾಗಿಯೇ ಇರುವರು. ಮಾನವ ಶರೀರದ ವರ್ಣದಲ್ಲಿಯೂ : ರೂಪದಲ್ಲಿಯೂ ಭೇದ ವಿರುವುದು ಈಶ್ವರನ ಸೃ ನಿಯಮವು, ನಿಮ್ಮ ಶೂನ್ಯ ಮಂದಿರದಲ್ಲಿ ನೀವು ಮಾಡುವ ಪ್ರಾರ್ಥನೆಯನ್ನೂ ಆತನು ಕೇಳುವನು, ವಿಗ್ರಹಗಳುಳ್ಳ ದೇವಸ್ಥಾನಗಳಲ್ಲಿ ಘಂಟಾನಾದಯುಕ್ತಗಳಾದ ಪೂಜೆಗಳನ್ನೂ ಗ್ರಹಿಸುವನು, •••••,•