ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೬ ಕರ್ಣಾಟಕ ನಂದಿನಿ ಇತರರ ಧರ್ಮ, ಆಚಾರ, ವ್ಯವಹಾರಗಳನ್ನು ಕುರಿತು ದುರಾಗ್ರಹವನ್ನು ಹೊಂದಿ ಅವರನ್ನು ಬಾಧಿಸುವದು ಈಶ್ವರನಿಗೆ ಎಂದಿಗೂ ಸಮ್ಮತವಿಲ್ಲ ವ. ಚಿತ್ರನಗಳನ್ನು ಬರೆದ ಚಿತ್ರಕಾರನ ಮುಂದೆ ಪಠಗಳನ್ನು ತುಳಿದು ಹರಿದು ಹಾಕಿದರೆ ಅವನಿಗೆ ಹೀಗೆ ಕೋಪವ್ರಂಟಾಗುವದೋ ಹಾಗೆಯೇ ಇತರ ಮತಗಳನ್ನು ದ್ವೇಷಿಸುವುದರಿಂದ ಈಶ್ವರನ ಮನದಾಗ್ರಹಕ್ಕೆ ಕಾರಣವಾಗ ಬೇಕಾದೀತು ! ಈಶ್ವರನು ಅದ್ವಿತೀಯನೂ ಅಪ್ರತಿಮನೂ ಅಪ್ರಮೇಯನೂ ಆದ ಒಬ್ಬ ಚಿತ್ರಗಾರನು, ಆತನು ಈ ಪ್ರಪಂಚವೆಂಬ ಎರ್ಣ ಪಠದ ಮೇಲೆ, ನಾನಾ ಮತಾಚಾರಗಳನ್ನೂ ವಿವಿಧ ಮನುಷ್ಯ ಜಾತಿಗಳನ್ನೂ ಚಿತ್ರಿ ಸಿರುವನು. ಹೀಗಿರುವಾಗ ನೀವು ಹಿಂದೂ ಮತವನ್ನು ದ್ವೇಷಿಸುವುದು ಆ ಸೃಕರ್ತನನ್ನು ದ್ವೇಷಿಸಿದಂತಾಗುವುದೆಂದು ಸ್ಪಷ್ಟವಾಗಿ ತಿಳಿದಿರು ಪುದು. ನ್ಯಾಯದೃಷ್ಟಿಯಿಂದ ನೋಡಿದರೆ, ನೀವು ಹಿಂದುಗಳ ಮೇಲೆ ಹಾಕಿರುವ ತಲೆಗಂದಾಯವು ಕೇವಲ ಅನ್ಯಾಯವೂ ಹೇಯವೂ ಆದುದೆಂದು ತಿಳಿಯುವುದು, ನಿಜವಾದ ರಾಜ್ಯ ಕರ್ತೃತ್ವವೂ ನೀತಿಯೂ ನಿಮ್ಮಲ್ಲಿಲ್ಲ ದಿರುವದಕ್ಕೆ ಇದು ನಿದರ್ಶನವಾಗಿರುವುದು.... ... ... ...... ಸತ್ರಸ್ಟ ವಿಚಾರಗಳನ್ನು ಅಮೂಲಾಗ್ರವಾಗಿ ಓದಿ ತಿಳಿದುಕೊಂಡ ಬಾದಷಹನು ರೋಷ ದಿಂದ ಹಳ್ಳಿಗಳನ್ನು ಕಡಿಯುತ್ತ ತನ್ನ ಎಡಗಾಲಿನಿಂದ ಭೂಮಿಯನ್ನು ದಟ್ಟಿಸು ಕೋಧವನ್ನು ಪ್ರಕಟಿಸಿದನು. ರಾಜಸಿಂಹನು ಚಂದ್ರಾವ: ರಾಣಿಯ ಸಂರಕ್ಷಣಾರ್ಥವಾಗಿ ಸೈನ್ಯವನ್ನು ಕಳುಹಿದುದೂ ವಿಜಯಸಿಂಹನ ಸಹಾಯಕ್ಕಾಗಿ ರೂಪನಗರಕ್ಕೆ ಬರಬೇಕೆಂದಿದ್ದು ದೂ ಕಂದಾ ಯವನ್ನು ಕೊಡದೆ ತನ್ನ ದೂತರನ್ನು ಪರಾಭವಿಸಿದುದೂ ಇವೇ ಮೊದಲಾದ ವ್ಯಾಪಾರಗಳು ಇಂಧನಗಳಾಗಿ ಪರಿಣಮಿಸಿ, ಔರಂಗಜೇಬನ ರೋಷಾಗ್ನಿ ಯನ್ನು ನಾಲ್ಕು ಕಡೆಯಲ್ಲಿಯೂ ಪ್ರಜ್ವಲಿಸುವಂತೆ ಮಾಡಿದುವು. ರಾಜ ಸಿಂಹನ ಶೌರ್ಯವನ್ನು ಮುರಿಯದಿದ್ದರೆ ಮುಂದೆ ತಾನು ಮಾಡುವ ಕಾರ್ಯ ಗಳಿಗೆಲ್ಲ ವಿಘ್ನ ವನ್ನುಂಟುಮಾಡುವನೆಂದು ತಿಳಿದು ಬಾದಶಹನು ಅಂದಿನಿಂದ