ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೨೧೧ ಅತ್ಯವಸರದಿಂದ ಹೋಗುತ್ತಿದ್ದ ನಮ್ಮ ಪ್ರೋತ್ರಿಯ ಬ್ರಾಹ್ಮಣನು ಆ ಭವ್ಯ ಮಂದಿರವನ್ನಾಗಲಿ ಆ ಯಮಭಟರಂತಿರುವ ಕಾವಲಿನವರನ್ನಾ ಗತಿ ನೋಡದೆ ತನ್ನ ದಾರಿಯನ್ನೇ ನೋಡುತ್ತ ಹೋಗುತ್ತಿದ್ದನು. ಆಗ ಆ ಮಂದಿರದೊಳ ಗಿನಿಂದ ಹೀಗೆ ಗಾನವ ಕೇಳಬಂದಿತು; ಎಲ್ಲಾ ರಾಮಮಯಂ... ಜಗವೆಲ್ಲಾ ರಾಮಮಯಂ !ಪ! ಆಂತರಂಗದೊಳಗಾತ್ಮಾರಾಮನ ನಂತರೂಪದೊಳಗಂದವತೋರಲು ||ಎಲ್ಲಾ! ||೨|| ಸೋಮಸೂರ್ಯರುಂ ಸುರರುಭಂಗಳು | ಆಮಹಾಂಬುದಿಯವನೀಜಂಬುಗಳ |೨|| ಅಂಡಾಂಡಂಗಳು-ಪಿಂಡಾಂತಂಗಳು | ಬ್ರಹ್ಮಾಂಡಂಗಳು ಬ್ರಹ್ಮನಾದಿಯಿಂದೆಲ್ಲಾ ||೩|| ನಹೀ-ವನಂಗಳ ನಾನಾಮೃಗಂಗಳ | ವಿಹಿತ ಕರ್ಮಗಳ...ವೇದಶಾಸ್ತ್ರಂಗಳ ||೪|| ಅಷ್ಟದಿಕ್ಕು ಗಳಾದಿಶೇಷನುಂ ಅಷ್ಟವಸುಗಳುಂ ಅರಿಷಡ್ವರ್ಗ ಮುಂ ||೫|| ಮೃದು ಮಧುರವಾಗಿಯ ಭಕ್ತಿರಸಭರಿತವಾಗಿಯೂ ಇರುವ ಈ ರಾಮನಾಮಸಂಕೀರ್ತನವು ಪಥಿಕನಾಗಿದ್ದ ಬ್ರಾಹ್ಮಣನ ಕಿವಿಯಲ್ಲಿ ಬಿದ್ದಿ ತು, ಬ್ರಾಹ್ಮಣನು ಕನ್ನಡದಲ್ಲಿ ಪರಿಶ್ರಮವಿಲ್ಲದವನಾದರೂ ಅದರಲ್ಲಿ ಸಂಸ್ಕೃತ ಬಾಹುಳ್ಯವಿದ್ದುದರಿಂದ ಅದರ ತಾತ್ಪರ್ಯವನ್ನು ಗ್ರಹಿಸಿ, ಭಕ್ತಾ ಗ್ರೇಸರನಾವನೋ ಒಳಗೆ ಕೀರ್ತಿಸುತ್ತಿರುವನೆಂದು ತಿಳಿದು ಭವನವನ್ನು ಸುತ್ತಲೂ ಚೆನ್ನಾಗಿ ನೋಡಿದನು ; ಭವನದ ಲಕ್ಷಣಗಳಿಂದ ಅದೊಂದು ಕಾರಾಗ್ರಹವಿರಬಹುದೆಂದು ಊಹೆಯುಂಟಾಯಿತು, ಆವನೋ ಓರ್ವ ವಿಷ್ಣು ಭಕ್ತನು ಅಲ್ಲಿ ಸಿಕ್ಕು ಬಿದ್ದಿರುವನೆಂದೆಣಿಸಿ, ಸಮಾಚಾರವನ್ನು ಪೂರ್ಣ ವಾಗಿ ತಿಳಿಯಲು ಕಾವಲಿದ್ದ ಭಟರ ಬಳಿಗೆ ಬಂದು ಕಾರಾಗ್ರಹದೊಳಗಿರುವ