ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪ ಕರ್ಣಾಟಕ ನಂದಿನಿ. ನ್ನು ತಿಳಿಸಿರಿ” ಎಂದು ಕೇಳಲು ಅಕ್ಕಣ್ಣನವರು “ಅಯ್ಯಾ ನಾನು ದೊಡ್ಡ ಮ್ಮನ ಮಗನು; ನೀನು ಚಿಕ್ಕಮ್ಮನ ಮಗನು, ಅಕ್ಕ ತಂಗಿಯರ ಮಕ್ಕ ಕಾದುದರಿಂದ ಅಣ್ಣ ತಮ್ಮಂದಿರು. ಈ ರಹಸ್ಯವನ್ನು ಮನಸ್ಸಿನಲ್ಲಿಟ್ಟು ಕೋ. ನಾವು ಎಂದಿನಂತೆ ಅಣ್ಣತಮ್ಮಂದಿರಂತೆಯೇ ಇರೋಣ ” ಎಂದರಂತೆ ! ಅಕ್ಕಣ್ಣನವರ ಬುದ್ದಿ ಚಾತುರ್ಯಕ್ಕೆ ಮೆಚ್ಚಿ ಅಂದಿನಿಂದಲೂ ಮಾದನ್ನ ನ ವರು ಆತನಲ್ಲಿ ಅಣ್ಣನಂತೆಯೆ ವಿಶ್ವಾಸದಿಂದಿದ್ದರಂತೆ ! ಈ ಕಥೆಯ ಸತ್ಯಾ ಸತ್ಯಗಳನ್ನು ನಿರ್ಣಯಿಸಲಾಗದಿದ್ದರೂ ಈ ಕಥೆಯು ಕೇಳುವವರಿಗೆ ಇಂಪಾ ಗಿರುವುದು, ಇರಲಿ ! ಇನ್ನು ನಮ್ಮ ಬ್ರಾಹ್ಮಣನ ವಿಚಾರವೇನಾಯಿತೆಂದು ನೋಡುವ. ಬ್ರಾಹ್ಮಣನು ಮಾದನ್ನ ನವರ ಮಂದಿರಕ್ಕೆ ದಾರಿಯನ್ನು ಕೇಳು ಹೋಗಿ ಸೂರ್ಯೋದಯವಾದ ಎರಡು ಗಳಿಗೆಯೊಳಗಾಗಿ ಮಂದಿರದ ಹೊರತಾಗಿಲಿನ ಬಳಿಗೆ ಬಂದನು. ಮಂದಿರದ ಸುತ್ತಲೂ ಕೋಟೆಯು ಕಟ್ಟಲ್ಪಟ್ಟಿತು. ಕೋಟೆಯೊಂದೇ ಆದರೂ ಮಂದಿರಕ್ಕೆ ಸೇರಬೇಕಾ ದಲ್ಲಿ ನಾಲ್ಕು ಬಾಗಿಲುಗಳನ್ನು ದಾಟಿ ಹೋಗಬೇಕು, ಪ್ರತಿಯೊಂದು ಬಾಗಿಲಿನಲ್ಲಿಯೂ ಆಯುಧಪಾಣಿಗಳಾಗಿದ್ದ ನಾಲ್ಕು ಮಂದಿ ಭಟರು ಕಾವ ಅದ್ದರು, ಇತರ ಸಮಯಗಳಲ್ಲಿ ಯಾರಿಗೂ ಪ್ರವೇಶವಿಲ್ಲದಿದ್ದರೂ ಪ್ರಾ ರ್ತಕಾಲದಲ್ಲಿ ಶಿವಪೂಜಾ ಸಮಯದಲ್ಲಿ ಮಾತ್ರ ಪಂಡಿತರಾದ ಬ್ರಾಹ್ಮ ಗೋತ್ತಮರಿಗೆ ಪ್ರವೇಶವಿತ್ತು, ಈ ಕಾರಣದಿಂದ ನಮ್ಮ ಶ್ರೀತಿಯ ಬ್ರಾಹ್ಮಣನೂ ಒಳಗೆ ಹೋಗಲು ಶ್ರಮವಾಗಲಿಲ್ಲ. ಬ್ರಾಹ್ಮಣವೇಷ ಬಂದ ಮೋಸಗಾರರಾದ ಶತ್ರುಗಳು ಯಾರಾದರೂ ಒಳಗೆ ಪ್ರವೇಶಿಸುವ ರೇನೆಂಬ ಶಂಕೆಯಿಂದ ಅಲ್ಲಿಗೆ ಬಂದ ಬ್ರಾಹ್ಮಣರಿಗೆಲ್ಲಾ ಸಂಧ್ಯಾವಂದ ನಾದಿಗಳಲ್ಲಿ ಪಕ್ಷೆಯು ನಡೆಯುತ್ತಿದ್ದಿತು. ಇದಕ್ಕಾಗಿ ಮಂದಿರದ ನಾಲ್ಕು ದ್ವಾರಗಳಲ್ಲಿಯೂ ನಾಲ್ವರೂ ಬ್ರಾಹ್ಮಣರು ಪರೀಕ್ಷಕರಾಗಿ ನೇಮಿಸಲ್ಪಟ್ಟಿದ್ದರು. ನಮ್ಮ ಪ್ರೋತ್ರಿಯ ಬ್ರಾಹ್ಮಣನೂ ಅವನ ಶಿಷ್ಯನೂ