ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೨೧೫ ಮೊದಲನೆಯ ದ್ವಾರದಲ್ಲಿ ಸಂಧ್ಯಾವಂದನವನ್ನೂ ಎರಡನೆಯ ದ್ವಾರದಲ್ಲಿ ನಮಕ ಲಕಮಕಗಳನ್ನೂ ಮೂರನೆಯ ದ್ವಾರದಲ್ಲಿ ಬ್ರಹ್ಮಯಜ್ಞವನ್ನೂ ನಾಲ್ಕನೆಯ ದ್ವಾರದಲ್ಲಿ ಪಿತೃತರ್ಪಣ ಮಂತ್ರಗಳನ್ನೂ ನಿಸ್ವರವಾಗಿಯೂ ಘಂಟಾನಾದದಂತೆಯೂ ಹೇಳಿ ಒಳಗೆ ಪ್ರವೇಶಿಸಿದರು. ಬ್ರಾಹ್ಮಣನು ಪೂಜಾಗೃಹವನ್ನು ಪ್ರವೇಶಿಸಿ, ಮರಕತಲಿಂಗವನ್ನು ಅಂಗೈಯಲ್ಲಿರಿಸಿಕೊಂಡು ಭಕ್ತಿ ಭಾವದಿಂದ ಪೂಜೆ, ಮಾಡುತ್ತಿದ್ದ ಮಾದನ್ನ ಪಂತುಲುಯವರನ್ನೂ ಅವರ ಸುತ್ತಲೂ ಉಚಿತಾಸನಾಸೀನರಾಗಿದ್ದ ವಿಧ ವಿದ್ಯಾಸಾಠಿಯರಾದ ಪಂಡಿತೋತ್ತಮರನ್ನೂ ನೋಡಿದನು. ಆ ಮಂತ್ರಿ ವರ್ಯನ ಒಲಭಾಗದಲ್ಲಿ ಒಟಾಪಾತಿಗಳೂ ಸಾಮಗಾಯಕರೂ ಭಾಗ ದಲ್ಲಿ ವೈಣಿಕರೂ ಸಂಗೀತ ಪಾಠಕರೂ ಮುಂಭಾಗದಲ್ಲಿ ಮೂವೊ ತ್ತರ ಮಿಮಾಂಸಕರೂ ಮಂಡಿಸಿದ್ದರು, ಮಂತ್ರಿವರ್ಯರ ಶಿವ ಪೂಜಾ ಧಿಯು ಮುಗಿಯುತ್ತ ಬಂದಾಗ ಅಲ್ಲಿದ್ದ ವೇದಪಾಠಕರು ಪರಸ್ಪರ “ನೀವು ಉಪಕ್ರಮಿಸಿ ನೀವು ಉಪಕ್ರಮಿಸಿ ” ಎಂದು ಹೇಳಲಾರಂಭಿಸಿದರು. - ಮೇ ಸುಸಮಯವೆಂದು ನಮ್ಮ ಪ್ರೋತ್ರಿಯ ಬ್ರಾಹ್ಮಣನು ವೇದಪಾಠಕರ ಸಮೂಹವನ್ನು ಸೇರಿ, “ ಸ್ವಾಮಿ, ನೀವೂ ಯಾರೂ ಉಪಕ್ರಮಿಸಬೇಡಿ. ನಾನು ಉಪಕ್ರಮಿಸುವೆನು. ” ಎಂದು ಸಂಸ್ಕೃತ ಭಾಷೆಯಲ್ಲಿ ಹೇಳಿ ಆಶೀರ್ವ ಚನಪೂರ್ವಕವಾದ ಒಂದು ಮಂತ್ರವನ್ನು ಸುಸ್ತರವಾದ ಗಂಭೀರ ಧ್ವನಿ ಯಿಂದ ಹೇಳಿ, ಆ ಮಂತ್ರಕ್ಕೆ ಒಲೆಯನ್ನೂ ಘನವನ್ನೂ ಹೇಳಿ ಅದಕ್ಕೆ ವಿದ್ಯಾರಣ್ಯ ಭಾಷ್ಯವನ್ನು ಅನುಸರಿಸಿ ಒಂದು ಅರ್ಥವನ್ನೂ ಮಹೀಧರನ ಭಾಷ್ಯವನ್ನು ಅನುಸರಿಸಿ ಒಂದು ಅರ್ಥವನ್ನೂ ಭಟ್ಟ ಭಾಸ್ಕರನ ಭಾಷ್ಯ ವನ್ನು ಅನುಸರಿಸಿ ಮೂರನೆಯ ಅರ್ಧವನ್ನೂ ಹೇಳಿ ಈ ಮೂರಕ್ಕೂ ಸಮ ದ್ವಯವನ್ನೂ ಹೇಳಿದನು. ಸಭಾಸದರೂ ಮಾದನ ಪಂತುಲುಯವರೂ ಆತ ಪಾಂಡಿಕ್ಕೆ ಅತ್ಯಂತ ಸಂತೋಷ ಪಟ್ಟರು. ಆನಂತರ " ತರ ಪಂಡಿ ತರೂ ತಮ್ಮ ತಮ್ಮ ವಿದ್ಯೆಗಳನ್ನು ತೋರ್ಪಡಿಸಿದರು. ಇಷ್ಟರಲ್ಲಿ ನಮ್ಮ