ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೨೨೧ ಕರೆತರಲು ಔರಂಗಜೇಬನು ನನ್ನನ್ನೆ ಕೆ ಕಳುಹಿದನು ? ನಾನೇಕೆ ಅದಕ್ಕೆ ಏದೆನು ? ಸಾಧೀಮಣಿಯೂ ರಜಪೂತಕುಲಾಭಿಮಾನ ದೇವತೆಯೂ ಆದ ಆ ದೇವಿಯಲ್ಲಿ ದ್ರೋಹವನ್ನು ಚಿಂತಿಸಿದ ನನಗೆ ಇದು ತಕ್ಕ ಪ್ರಾಯ ತ್ರವಲ್ಲವೆ ? ಆಯಾ ! ದುರ್ಗಾ ದಾಸನನ್ನು ವಂಚಿಸಲೆಣಿಸಿದ ನನ್ನ ಬುದ್ದಿಗೇನೆನ್ನ ಬೇಕು ? ಆತನ ರಾಜಭಕ್ತಿಯನ್ನೂ ಪರಾಕ್ರಮವನ್ನೂ ಸ್ಮರಿ ಸಿದರೆ, ತೇಜಸ್ವಿಯಾದ ಆತನೇ ಪ್ರತ್ಯಕ್ಷನಾದಂತೆ ಕಾಣುತ್ತಿರುವುದು ! ಪುಣ್ಯ ಪುರುಷನಾದ ಸ್ವಾಮಿಕಾರ್ಯಧುರಂಧರನಾದ ದುರ್ಗಾದಾಸ ! ನಿನಗೆ ನಮಸ್ಕಾರವು, ಕ್ಷಮಿಸು, ನಿನ್ನ ಸಮಾನ ರಜಪೂತನಾಗಿದ್ದು ಈಗ ನಿನ್ನ ಉಗುರಿಗೂ ಸರಿಬಾರದ ಅಧಮಾಧಮನಾದ ನನ್ನನ್ನು ನೀನು ಕ್ಷಮಿಸು, ಉದ್ದರಿಸು ! ಜಗನ್ನೋಹಿನೀ, ಇಂದಿರಾದೇವಿ ! ಅಸಮಾನವಾದ ನಿನ್ನ ಬುದ್ದಿ ಚಾತುರ್ಯ, ರಾಜಭಕ್ತಿ, ಸಕುಲಾಭಿಮಾನಗಳಲ್ಲಿ ಅಣ್ಣ ನಾದ ದುರ್ಗಾದಾಸನನ್ನೇ ಮೀರಿಸುತ್ತಿರುವೆಯಲ್ಲವೇ ! ನಿನ್ನಿ ದರ್ಪವನ್ನೂ ಅಭಿಮಾನವನ್ನೂ ನೋಡಿ ನನಗೇ ನಾಚಿಕೆಯಾಗುವುದಲ್ಲಾ ! ತಾಯಿ ! ಅನುಗ್ರಹಿಸು; ಈ ಅಧಮನಿಗೆ ನಿನ್ನಲ್ಲಿರುವ ಸದ್ದು ಣಾತಿಶಯಂಗಳ ಲವಲೇ ಶವನ್ನಾದರೂ ಅನುಗ್ರಹಿಸಿ, ಇನ್ನು ಮುಂದೆಯಾದರೂ ಇವನು ತನ್ನ ಕರ್ತವ್ಯವನ್ನು ನೆರವೇರಿಸಿ ಕೃತಾರ್ಥನಾಗುವಂತೆ ಮಾಡು. ಆ ! ಯಾವ ಮೋಹಿನೀದೇವಿ, ಶತ್ರುಗಳು ಕಾವಲಿದ್ದರೂ ಲೀಲಾಜಾಲವಾಗಿ ಚಂದ್ರಾವತೀರಾಣಿಯನ್ನೂ ಅಜಿತಕುಮಾರನನ್ನೂ ಬಿಡಿಸಿದಳೋ ಅಂತಹ ಉಬ್ಬಲಕ್ಷಾತ್ರತೇಜೋಮಯಮೂರ್ತಿಯನ್ನು ದುರಭಿಮಾನದಿಂದ ಕರೆ ತಂದು ಕೂರನಾದ ಔರಂಗಜೇಬನಿಗೆ ಒಪ್ಪಿಸಿದ ನನ್ನ ಪಾತಕಕ್ಕೆ ಎಣೆ ಯುಂಟೆ ? ನನ್ನ೦ತಹ ಅಧಮನು ಪ್ರಪಂಚದಲ್ಲಿ ಹುಟ್ಟುವನೆ ? ರಾಜಪುತ್ರ ಸ್ತ್ರೀಯರನ್ನು ಕರೆತಂದು ಮಹಮ್ಮದೀಯರಿಗೆ ಒಪ್ಪಿಸಿದ ಚಂಡಾಲನೆಂದು ಚರಿತ್ರಕಾರರು ನನ್ನನ್ನು ಎಷ್ಟು ತಿರಸ್ಕರಿಸಬಹುದು ? ಅಯ್ಯೋ ! ಆ ಸಾ ಧೈಗೆ ಆ ಕಾಮುಕನಾದ ಬಾದಷಹನು ಯಾವ ತೊಂದರೆಯನ್ನುಂಟುಮ.