ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿಮಲಾದೇವಿ ೨೨೩ ಬಿಡಲಾರದೆಯೂ ಉಭಯಸಂಕಟಕ್ಕೆ ಗುರಿಯಾಗಿ ತೊಡಕಾಡುತ್ತಿದ್ದು, ಕೆಲವು ದಿನಗಳ ಮೇಲೆ, ನಯನಪಾಲನನ್ನು ಕಾರಾಗ್ರಹದಲ್ಲಿರಿಸಿ ಆರು ತಿಂಗಳಾಗಿರುವುದರಿಂದ ಬಾದಶಹನಿಗೆ ಇವನ ಜ್ಞಾಪಕ ವಿರಲಾರದೆಂದೂ ಇವ ನನ್ನು ಬಿಟ್ಟ ಬಿಟ್ಟರೆ ತನಗೆ ಯಾವ ತೊಂದರೆಯೂ ಉಂಟಾಗಲಾರದೆಂದೂ ಯಾವಚ್ಚವವೂ ಸುಖವಾಗಿರಬಹುದಾಹ ಜೀವನವನ್ನು ಬಿಡುವುದೇಕೆಂದೂ ಯೋಚಿಸಿ, ನಯನಪಾಲನನ್ನು ಬಿಡುವಂತೆ ನಿಶ್ಚಯಿಸಿದನು. ಇಷ್ಟೇ ಅಲ್ಲ ; ಬೈಲಲೆಕ್ಕದಲ್ಲಿ ನಯನಪಾಲನು ಸತ್ತು ಹೋಗಿರುವನೆಂದು ಬರೆದರೆ ತನಗಾನ ತೊಂದರೆಯೂ ಇಲ್ಲವೆಂದೂ ನೆನೆದು ತನ್ನ ಮನೋಗತವನ್ನು ನಯನಪಾಲ ನಿಗೆ ತಿಳಿಸಿದನು. ನಯನಪಾಲನು ಅದಕ್ಕೆ ಸಮ್ಮತಿಸಿ ನಗರದಲ್ಲಿದ್ದ ತನ್ನ ಆಪ್ತರಿಂದ ಕಾರಾಗೃಹಾಧಿಕಾರಿಗೆ ಸ್ವಲ್ಪ ದ್ರವ್ಯವನ್ನು ಕೊಡಿಸಿ, ಉಳಿದು ದನ್ನು ತಾನು ಮುಕ್ತನಾದ ಮೇಲೆ ಕೊಡುವೆನೆಂದು ಹೇಳಿದನು. ಅಧಿಕಾರಿಯು ಅತ್ಯಂತ ಸಂತೋಷದಿಂದ ಆತನನ್ನು ಜಾಗ್ರತೆಯಾಗಿ ಬಿಡುಗಡೆ ಮಾಡುವೆನೆಂದು ಹೇಳಿ ಸಮಯವನ್ನು ನಿರೀಕ್ಷಿಸುತ್ತಿದ್ದನು. ಒಂದು ದಿನರಾತ್ರಿ ವಿಶೇಷವಾಗಿ ಬಿರುಗಾಳಿ ಬೀಸುತ್ತ ಕೋಟೆಯೊಳಗಿದ್ದ ದೀಪವೆಲ್ಲವನ್ನೂ ಆರಿಸಲು, ಕಾರಾಗಾರದ ಕಾವಲುಗಾರರು ಗಾಢನಿದ್ರೆ ಯಲ್ಲಾ ಸಮಯವನ್ನು ನೋಡಿ, ನಯನಪಾಲನನ್ನು ಬಿಡುಗಡೆಮಾಡಿ ದನು. ಅಷ್ಟರಲ್ಲಿಯೇ ನಯನಪಾಲನ ಅದೃಷ್ಟದೇವತೆಯ ಸಹಾನುಭೂ ತಿಯ ಫಲವೆಂಬಂತೆ ಜಡಿಮಳೆಯೂ ಸುರಿಯತೊಡಗಿತು. ನಯನಪಾಲನು ಬಹುಕಾಲ ಕೋಟೆಯಲ್ಲಿದ್ದು ಚೆನ್ನಾಗಿ ತಿಳಿದವನಾಗಿದ್ದುದರಿಂದ ಮಳೆ ಗಾಳಿ.೨ಂಧಕಾರಗಳಾವುದನ್ನೂ ಲೆಕ್ಕಿಸದೆ, ಕರ್ತವ್ಯ ತತ್ಪರನಾಗಿ ತರೆ ಯಿಂದ ಹೊರಟು ತನ್ನ ಮನೆಗೆ ಬಂದುಸೇರಿ, ತನ್ನ ಹಿಂದೆಯೇ ಬಂದ ಅಧಿಕಾರಿಗೆ ವಾಗ್ದಾನಮಾಡಿದ್ದಂತೆ ದ್ರವ್ಯವನ್ನಿ ತು ಕಳುಹಿದನು. ಇನ್ನು ನಯನಪಾಲನು ಪೂರ್ವದ ನಯನಪಾಲನಲ್ಲ ! ಕಾರಾಗ್ರ ಹದಿಂದ ಬಂದುದು ಮೊದಲು ಸ್ವಧರ್ಮಾಭಿಮಾನಿಯಾಗಿ ತಿರುಗಿದನು.