ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೪ ಕರ್ಣಾಟಕ ನಂದಿನಿ ಇಂದಿರೆಯ ಬಿಡುಗಡೆಯ ಯೋಚನೆಯೇ ಯೋಜನೆಯಾಗಿದ್ದು ದರಿಂದ ಅದು ಮೊದಲು ಆತನು ವೇಷಧಾರಿಯಾಗಿ ಔರಂಗಬೇಬನ ರಾಣಿವಾಸವನ್ನು ಪ್ರವೇಶಿಸಿ, ಅಲ್ಲಿಯ ಸಮಾಚಾರಗಳನ್ನು ತಿಳಿದುಕೊಳ್ಳುತ್ತ ಒಂದನು. ವೇಷ ಧಾರಿಯಾಗಿ ತಿರುಗುತ್ತಿದ್ದುದರಿಂದ ಆತನನ್ನು ನಗರದವರಾರೂ ಗುರ್ತಿಸಲಾ ರದೇ ಹೋದರು. ಇಹತೇಳನೆಯ ಪ್ರಕರಣ. (ಕನಟ ನಾಟಕವು.) ಔರಂಗಜೇಬನು ಹೇಳಿ ಕಳುಹಿಸಿದ ಉತ್ತರದಿಂದ ರೋಷನಾರೆಯ ಮಟ್ಟು ಮಾರಿತು, ಬರಹೇಳಿದುದೇ ತಡೆಯಾಗಿ ತನ್ನಡೆಗೆ ಓಡಿಬರುತ್ತಿದ್ದ ಬಾದಶಹನು, ಇ೦ದು ಹೀಗೆ ಹೇಳಿಕಳುಹಲು ಉದಯಪುರಿಯ ದುರ್ಬೋಧ ನೆಯೇ ಕಾರಣವೆಂದೆಣಿಸಿದಳು. ಉದಯಪುರಿಯ ಮೋಹಪಾಶಒದ್ಧನಾಗಿ ರುವುದರಿಂದಲೇ ತನ್ನ ಅಣ್ಣನು ತನ್ನನ್ನು ಉಪೇಕ್ಷಿಸಿದನೆಂದೂ ಅವನ ಮನ ಸೃನ್ನು ಕೆಡಿಸಿದ ಉದಯಪುರಿಯ ಹೆಮ್ಮೆಯನ್ನು, ಬಾದಶಹನು ತನ್ನ ಆಜ್ಞಾ ಧಾರಕನೆಂದು ಬೀಗಿಹೋಗಿರುವ ಅವಳ ಕಮ್ಮೆಯನ್ನು, ಅವನಿಂ ದಲೇ ಮುರಿಸಬೇಕೆಂದೂ ಆಲೋಚಿಸಿದಳು. ತನ್ನ ಕಾರ್ಯ ಸಾಧನೆ ಗಾಗಿ ಬಾದಶಹನಿಗೆ ಉದಯಪುರಿಯ ಮೇಲೆ ಆಗ್ರಹವನ್ನುಂಟುಮಾಡಲು ಛೋಟುಸಿಂಗನನ್ನೇ ಆಧಾರವಾಗಿಟ್ಟು ಕಾರ್ಯಕ್ಕೆ ಪ್ರಯತ್ನಿಸಬೇಕೆಂದು ನಿರ್ಧರಿಸಿದಳು. ಇಷ್ಟೆಲ್ಲಕ್ಕೂ ತನ್ನೆಡೆಗೆ ತನ್ನ ಅಣ್ಣನು ಬರಬೇಕು. ಆದರೆ ಅವನನ್ನು ಬರಮಾಡಿಕೊಳ್ಳುವುದೆಂತು ?