ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಕರ್ಣಾಟಕ ನಂದಿನಿ ಔರಂಗ:-ಇಷ್ಟು ಮಾತುಗಳೇಕೆ, ತಂಗಿ, ನಡೆದ ಸಮಾಚಾರ ವನ್ನು ವಿವರಿಸಿ ಹೇಳು. ರೋಷ:-ಅಣ್ಣಾ, ಹೇಳಿದರೆ ನಮ್ಮ ಮಹಮ್ಮದೀಯ ವಂಶಕ್ಕೆ ಅಪಕೀರ್ತಿ ಬರುವುದೆಂಬ ಚಿಂತೆ. ಔರಂಗ್-ಏನು ! ಪವಿತ್ರವಾದ ನಮ್ಮ ಮಹಮ್ಮದೀಯವಂಶಕ್ಕೆ ಅಪಕೀರ್ತಿ ತರುವಂತಹ ಕೃತ್ಯವಾರಿಂದಾಯಿತು ? ರೋಷ:-ಅದೆಲ್ಲಾ ನನಗೇಕೆ, ಬಿಡು, ಅಂತಃಪುರಕ್ಕೆ............ ......ಹೋಗು, ನಾನು ಹೇಳಲಾರೆನು. ಔರಂಗ:ಸುಮ್ಮನೆ ಸಂಶಯದಲ್ಲಿ ನರಳಿಸಬೇಹ, ತಂಗಿ, ವೃತ್ಯಾಂ ತವೇನು, ಬೇಗ ಹೇಳು. ರೋಷ:-ಸಮಯವು ಸರಿಯಾಗಿಲ್ಲ, ರಾಜಪುತ್ರರು ವೇಷಾಂ ತರದಿಂದ ಅರಮನೆಯನ್ನು ಪ್ರವೇಶಿಸುತ್ತಿರುವರು. ಔರಂಗ:- ಏನು ? ರಾಜಪುತ್ರರು ಅಂತಃಪುರಕ್ಕೆ ಪ್ರವೇಶಿಸುವರೆ ? ಅವರಿಗೆ ಅಂತ್ಯ ಕಾಲವೊದಗಿರಬೇಕು ? ತಿಳಿದೂ ನೀನೇಕೆ ಸುಮ್ಮನಿದ್ದೆ ? ರೋಷ.-ಒಬ್ಬರಿಗೆ ಸಮ್ಮತವಾದ ಕಾರ್ಯವನ್ನು ಮತ್ತೊಬ್ಬರು ಹೋಗಲಾಡಿಸಲಾದೀತೇ ? ಔರಂಗ:ಹಾಗಾದರೆ ಈ ಕೆಲಸವಾರಿಗೆ ಸಮ್ಮತವು ? ರೋಷ:ಅಣ್ಣ ! ನಿನಗೆ ಕೋಪವಂಟಾದರೂ ಚಿಂತೆಯಿಲ್ಲ. ಉದಯಪುರಿಗೇ ಸಮ್ಮತ. ಔರಂಗ:-ಉದಯಪುರಿಗೂ ರಾಜಪುತ್ರರಿಗೂ ಸಂಬಂಧವೇಸಿರು ವುದು ? ರೋಷ:-ಯಾವ ಸಂಬಂಧವಿರುವುದೋ ನೀನೇ ಗ್ರಹಿಸಬೇಕ ಲ್ಲದೆ ಹೆಂಗಸಾದ ನಾನು ಹೇಳಲಾಗದು. ಇದಕ್ಕೆ ನೀನೇ ಕಾರಣನಲ್ಲದೆ