ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ඒ. ಕರ್ಣಾಟಕ ನಂದಿನಿ. ಸಂಭಾವಿಸಲಿಲ್ಲ, ಸಂಶಯ ಕೋಧಗಳಿ೦ದ ಪರವಶನಾಗಿದ್ದ ಬಾದ ಶಹನು ಉದಯ ಫುರಿಯ ಉಪಚಾರಗಳನ್ನು ಅಪಚಾರದಂತೆ ತಿಳಿದು ಕ್ರೋಧದಿಂದ “ಎಲೆ, ನಿನ್ನಿ ಶುಷೋಪಚಾರಗಳನ್ನು ನಿಲ್ಲಿಸಿ, ಮೊದಲು ನನಗೆ ಸರಿಯಾದ ಉತ್ತರವನ್ನು ಕೊಡು.” ಇವನಾರೆಂಬುದನ್ನು ಮೊದಲು ಹೇಳು ? ಶ ಉದಯ:- ಯಾವನೋ ದಾರಿಹೋಕನನ್ನು ಕರೆದುಕೊಂಡು ಬಂದು, ಈತನಾರೆಂದರೆ ನಾನು ಏನು ಹೇಳಲಿ ? ಜಾದ:-ನೀನು ಜಾಣೆಯೆಂದು ಬಲ್ಲೆನು. ಮಹಮ್ಮದೀಯ ವಂ ಶಕ್ಕೆ ಶನಿಗ್ರಹವಾಗಿ ನೀನು ಕೇಡುಂಟುಮಾಡಲು ಇಲ್ಲಿಗೆ ಬಂದೆಯಲ್ಲವೆ ? ಉದಯ:-ಮಹಾರಾಜಾ ! ಈ ದಾಸಿಯು ಆವ ತಪ್ಪನ್ನೂ ಮಾಡಿಲ್ಲ, ಕಾರಣವಿಲ್ಲದೆ ಆಗ್ರಹಮಾಡಿದರೆ ನನಗಿನ್ನಾರು ದಿಕ್ಕು ? ಬಾದ:ಈ ಛೋಟುಸಿಂಗನು ನಿನ್ನ ಅಂತಃಪುರಕ್ಕೆ ಬರಲು ಕಾರಣವೇನು ? ಉದಯ;-ಛೋಟುಸಿಂಗನೆಂಬುದರಿಂದ ಈಗ ಹೇಳಲಾಗುವುದು, ಕೇಳಬೇಕು. ಈತನು ತಾನೊಬ್ಬ ಚಿತ್ರಗಾರನೆಂದು ಹೇಳಿ ಒಂದು ದಂತದ ಬೀಸಣಿಗೆಯನ್ನು ಮಾಡಿ ನನಗೆ ತಂದುಕೊಟ್ಟಿರುವನು. ಮಾರನೆಯ ದಿನ ಬಂದರೆ ಬಹುಮಾನವನ್ನು ಕೊಡಿಸುವೆನೆಂದು ಹೇಳಿದೆನು, ಆದರೆ ಈತನು ಈ ವರೆಗೂ ಬಂದಿಲ್ಲ ನಮಗೆ ಆ ಬೀಸಣಿಗೆಯನ್ನು ತೋರಿಸಲು ಮತ ತುಹೋದೆನು ; ಕ್ಷಮಿಸಬೇಕು ಎಂದು ಹೇಳಿ ಎದ್ದು ಕೂಗಿ ಬೀಸಣಿ ಗೆಯನ್ನು ತಂದು ಆತನಿಗೆ ತೋರಿಸಿದಳು ಅದರ ರಚನಾ ಕೌಶಲ್ಯಕ್ಕೂ ಚಿತ್ರಗಳ ಸೌಂದರ್ಯಕ್ಕೂ ಮೆಚ್ಚಿ ಬಾದಶಹನು ಆಶ್ಚರ್ಯಪಟ್ಟಿ ನಾದರೂ ಉತ್ತರಕ್ಷಣದಲ್ಲಿಯೇ ಬೀಸಣಿಗೆಯನ್ನು ಮಂಚದಮೇಲೆ ಹಾಕಿ, ಉದ ಯಪರಿಯನ್ನು ಕುರಿತು,--ಎಲೆ ದುಷ್ಟೆ ! ರಾಜಪುತ್ರರನ್ನು ವೇಷಧಾ