ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಕರ್ಣಾಟಕ ಗ್ರಂಥಮಾಲೆ ಒ ಯ ಅತಿಯಾಗಿರುವುದಿಲ್ಲವೋ ಆ ಪಕ್ಕದಲ್ಲಿ ನಾವು ನಡೆಯಬೇಕು. ಬೀದಿಯಲ್ಲಿ ಹೋಗುತ್ತಿರುವಾಗ ಉಪಾಧ್ಯಾಯರು, ಮತ್ಯಾದೆಗೆ ಅರ್ಹರಾದ ಇತರರು ಇದಿರಿಗೆ ಬಂದರೆ ಅವರನ್ನು ವಂದಿಸಬೇಕು, ಬೀದಿಯಲ್ಲಿ ದೇವರ ಉತ್ಸವ ಅಥವಾ ಮಹಾರಾಜರವರ ಸವಾರಿ ದಯಮಾಡಿಸುತ್ತಿರುವಾಗ ನಾವು ಕುಳಿತಿರಬಾರದು. ಎದ್ದು ನಿಂತು ಕೈಮುಗಿಯಬೇಕು, ದೊಡ್ಡ ವರನ್ನು ವಂದಿಸಬೇಕಾದಾಗ ನಮ್ಮ ಬಲಗೈಯಲ್ಲಿ ಏನಾದರೂ ವಸ್ತುಗ ಆದ್ದರೆ ತಲೆಯನ್ನಾದರೂ ಸ್ವಲ್ಪಮಟ್ಟಿಗೆ ಬಾಗಿಸಬೇಕು ಜೊತೆಯಲ್ಲಿ ಬಾಯಿಂದ ವಂದನೆಯ ಮಾತುಗಳನ್ನು ಹೇಳುವುದೂ ಮೇಲು. ಆದರೆ ಯಾವ ಸಂದರ್ಭದಲ್ಲೂ ದೊಡ್ಡವರಿಗೆ ಎಡಗೈಯಿಂದ ವಂದಿಸುವುದು ನಮ್ಮ ಜನಗಳಲ್ಲಿ ಅಷ್ಟು ಚೆನ್ನಾಗಿ ತೋರುವುದಿಲ್ಲ. ಬಾಳೆಯಹಣ್ಣು ಮಾವಿನಹಣ್ಣ ವೆ.೧ದಲಾದುವುಗಳ ಸಿಪ್ಪೆಯನ್ನು ತೊಟ್ಟಗಳೊಳಕ್ಕಾಗಲಿ ಚರಂಡಿಗಳೆಳಕ್ಕಾಗಲಿ ಹಾಕದೆ, ಎಲ್ಲರೂ ತಿರು ಗಾಡುವ ರಸ್ತೆಯಲ್ಲಿ ಹಾಕುವುದು ಬಲು ಕೆಟ್ಟ ಪದ್ಧತಿ, ಹೀಗೆಯೇ ಬೀದಿಯಲ್ಲಿ ಕಾಗದದ ಚೂರುಗಳನ್ನೆಸೆ:ುವುದು, ಬೂದಿ ಎಂಜಲೆಲೆ ಕಸ ಮೊದಲಾದುವುಗಳನ್ನು ಬಿಸುಡುವುದು, ಮಕ್ಕಳನ್ನು ಮಲವಿಸರ್ಜನೆಗೆ ಕುಳ್ಳರಿಸುವುದು ಇಂತಹವುಗಳೆಲ್ಲ ಅಸಹ್ಯಕರವಾದ ಕೆಲಸಗಳು. - ಗೀಚಿದ ಬೆಂಕಿಯ ಕಡ್ಡಿಯ ನ್ನು ಬೀದಿಗೆಸೆಯು ಇದಾದರೆ ಅದರಲ್ಲಿ ದ್ದ ಕಿಡಿಯು ಚೆನ್ನಾಗಿ ಆರಿದೆಯೆ ಇಲ್ಲವೆ ಎಂಬುದನ್ನು ನೋಡಬೇಕಾ ದುದು ಮುಖ್ಯ. ಯಾಕೆಂದರೆ, ಅದು ಹೊತ್ತಿಕೊಂಡು ಏನಾದರೂ ದೊಡ್ಡ ಅಪಾಯಗಳು ಸಂಭವಿಸಿಯಾವು ನಾವು ಇಂತಹ ಕೆಲಸಗಳನ್ನು ಮುಂದಾಲೋಚನೆಯೇ ಇಲ್ಲದೆ ಅಲಕ್ಷ್ಯದಿಂದ ಮಾಡಿದರೂ, ಉದ್ದೇಶ ಪೂರ್ವಕವಾಗಿಯೇ ಕೆಡಕು ಮಾಡಿದೆವೆಂದು ಜನಗಳ ಮನಸ್ಸಿಗೆ ತೋರೀ ತಾದುದರಿಂದ ಕೆಲವುವೇಳೆ ಸತ್ಕಾರದ ದಂಡನೆಗೂ ಗುರಿಯಾದೇವು. ಹತ್ತು