ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೦ ಕರ್ಣಾಟಕ ನಂದಿನಿ m ಸಿಂಹನ ವಂಶ ವೃಕ್ಷವನ್ನು ಕಾಪಾಡುವೆನೆಂದು ಕಂಕಣವನ್ನು ಕಟ್ಟಿ ಕೊಂ ಡಿರುವನೋ, ಯಾವ ಧೀರನು ಕಾಬೂಲ್ ದೇಶದಲ್ಲಿ ಸಮಸ್ತ ಶತ್ರುವರ್ಗ ವನ್ನೂ ನಿವಾರಿಸಿ ದುರ್ಭರವಾದ ಪ್ರಜಾಕಲಹವನ್ನು ನಿಲ್ಲಿಸಿದನೋ, ಯಾವ ರಾಜಪುತ್ರನು ತನ್ನನ್ನು ಮೋಸಪಡಿಸಲು ಬಂದ ನಯನಪಾಲನಿಗೆ ಪ್ರತಿಕ್ರಿಯೆಯನ್ನು ಮಾಡಿದನೋ, ಯಾವ ಪುರುಷಸಿಂಹನು ಆಬೂ ಪರ್ವತ ಪ್ರಾಂತ್ಯದಲ್ಲಿ ತನ್ನ ಸೈನ್ಯವನ್ನೆಲ್ಲಾ ಯಮಾಲಯಕ್ಕೆ ಕಳುಹಿದನೋ ಆ ಜಗದೇಕವೀರನಾದ ದುರ್ಗಾ ದಾನನೇ ಈಗ ನಿಮ್ಮೆದುರಿಗಿರುವವನು ! ಇನ್ನು ಮರ್ಮವೇಕೆ ? ಇಲ್ಲಿಂದ ನನ್ನನ್ನು ಹೇಗಾದರೂ ಮಾಡಿ ತಪ್ಪಿಸಬೇ ಕೆಂದೇ ನಮ್ಮ ಅಣ್ಣನು ಮಾರುವೇಷ ದಿಂದ ಛೋಟುಸಿಂಗನೆಂಬ ಹೆಸರನ್ನಿ ಟ್ಟು ಕೊಂಡು ಬಂದಿರುವನು. ಉದಯಪುರಿಯು ನಿರ್ದೋಷಿ ! ಅನ್ಯಾ ಯವಾಗಿ ಅವಳು ಮರಣಹೊಂದುವಳೆಂದು ವ್ಯಥೆಪಟ್ಟು ನಮ್ಮ ರಹಸ್ಯ ವನ್ನೆಲ್ಲ ಹೇಳಿರುವೆನು. ನಾವು ಎಂತಹ ಕಷ್ಟಗಳನ್ನಾ ದರೂ ಸಹಿಸಬ ಲೈವು ; ಆದರೆ ಅವರಿಗಾಗುವ ತೊಂದರೆಗಳನ್ನು ಮಾತ್ರ ನೋಡಿ ನಪಿಸಿ ಲಾರೆವು. ಇನ್ನು ಉದಯಪುರಿಯನ್ನು ಶಿಕ್ಷಿಸಬಾರದು. ನಾವಿಬ್ಬರೂ ಈಗ ನಿಮ್ಮ ಕೈಸೇರಿರುವೆವು, ಸೂಕ್ತ ತೋರಿದಂತೆ ಮಾಡಬಹುದು ? ಎಂದು ಹೇಳಿದಳು. ಬಾದಶಹನು ಇ೦ದಿರೆಯ ಧೈರ್ಯ, ಗಂಭೀರಯುಕ್ತವಾದ ವಾಕ್ಯ ಗಳಿಂದ ಸ್ತಬ್ಬನಾಗಿ ಸ್ವಲ್ಪ ಹೊತ್ತು ಅವಳನ್ನೇ ನೋಡಿ ಅವಳ ಅನಿಂದಿತ ವಾದ ತೇಜಸ್ಸಿನಿಂದ ಉದಯಪುರಿಯು ನಿಜವಾಗಿಯೂ ನಿರ್ದೊ ಸಿಯೆಂದು ನಿರ್ಧರಿಸಿ ಅವಳ ವಿಷಯದಲ್ಲಿ ತನಗಿದ್ದ ಅನುಮಾನವೆಲ್ಲ ವನ್ನೂ ಬಿಟ್ಟು ಬಿಟ್ಟನು. ತನ್ನ ಎದುರಿಗಿದ್ದ ಛೋಟುಸಿಂಗನು ಮಾಯಾ ವೇಷಧಾರಿ ಯಾದ ದುರ್ಗಾದಾಸನೆಂದು ತಿಳಿದ ಕೂಡಲೆ, ಆತನ ಪರಾಕ್ರಮ ಶೌರ್ಯ ಧೈರ್ಯಾದಿಗಳನ್ನು ಹಿಂದೆ ತಾನು ಎಷ್ಟೋ ಬಾರಿ ಕೇಳಿದ್ದು ದರಿಂದಲೂ ಅನೇಕ ಯುದ್ಧಗಳಲ್ಲಿ ಎಂದರೆ ಮುಣ್ಯವಾಗಿ ಕಾಬೂಲ್ ದೇಶದಲ್ಲಿ ಈತನು