ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೨೩೧. ತೋರಿಸಿದ ಪರಾಕ್ರಮದಿಂದಲೂ ಬಾದಶಹನ ಶರೀರವು ಭಯದಿಂದ ನಡುಗಿತು ; ಇಷ್ಟೇ ಅಲ್ಲ, ವೇಷಧಾರಿಯಾಗಿ ಜನಾನಾವನ್ನು ಪ್ರವೇಶಿಸಿ ತೋರಿಸಿದ ಪ್ರತ್ಯಕ್ಷ ಸಾಹಸ ಕೃತ್ಯವನ್ನು ನೋಡಿ ಆತನಿಗೆ ಶಂಕೆಯುಂಟಾ ಯಿತು. ಬಾದಶಹನು ಸೂಕ್ಷ್ಮ ಬುದ್ಧಿಯುಳ್ಳವನಾದುದರಿಂದಲೂ ಕಾರ್ಯಾ ಕಾರ್ಯ ಚತುರೋಪಾಯ ಎಚಕ್ಷಣನಾದುದರಿಂದಲೂ ದುರ್ಗಾದಾಸ ಸಿಗೆ ಯಾವ ಶಿಕ್ಷೆಯನ್ನೂ ವಿಧಿಸದ, ಅಂತಹ ಅಪ್ರತಿಮ ವೀರನು ತನ್ನ ಹತ್ತಿರದಲ್ಲಿದ್ದರೆ ತನ್ನ ಕೋರಿಕೆಗಳೆಲ್ಲವೂ ನಿಸಂದೇಹವಾಗಿ ನೆರವೇರು ವುದೆಂದು ಯೋಚಿಸಿ ದುರ್ಗಾದಾಸನನ್ನು ಕುರಿತು ಮೃದುವಾಕ್ಯಗಳಿ೦ದ “ಅಯ್ಯಾ, ದುರ್ಗಾದಾಸ ! ನಿನ್ನ ಅನಮಾನ ಪರಾಕ್ರಮವನ್ನೂ ಚಾತು ರ್ಯವನ್ನೂ ನಾನು ಹಿಂದೆ ಎಷ್ಟೋ ಸಲ ಕೇಳಿದ್ದೆನು. ಇಷ್ಟೇ ಅಲ್ಲದೆ ಯಶವಂತಸಿಂಹನ ಸೈನ್ಯದಲ್ಲಿ ನಾನು ನಿನ್ನನ್ನು ನೋಡಿದಂತೆ ಜ್ಞಾಪಕರು ವುದು, ನನ್ನ ಸ್ನೇಹಿತನಾದ ಯಶವಂತಸಿಂಹನೆಡಸಿ ಹೊರಟು ಅನೇಕ ಯುದ್ಧಗಳಲ್ಲಿ ಜಯಶಾಲಿಯಾಗಿ ನನಗೆ ಕೀರ್ತಿಯನ್ನೂ ತಂದಿರುವೆ. ನಿನ್ನ ರಾಜಭಕ್ತಿಯನ್ನೂ ನೋಡಿ ನಾನು ಬಹು ಸಂತೋಷಪಟ್ಟೆನು. ೮೦ದಿ ನಿಂದಲೂ ನೀನು ನನ್ನ ಸಮ್ಮುಖದಲ್ಲಿ ಸುಖದಿಂದಿರಬಹುದು, ನಿನಗೆ ಎಷ್ಟು ಮಾತ್ರವೂ ಕೊರತೆಯಿಲ್ಲದಂತೆ “ ಪಂಚ ಹಜಾರ ಮುನ್ಸಿ ಬೌದಾರ್‌ ” ಪದ ಸಿಯನ್ನು ಕೊಡುವೆನು” ಎಂದು ಹೇಳಲು, ದುರ್ಗಾದಾಸನು ಗಂಭೀರಭಾವ ದಿಂದ “ ಕ್ಷಮಿಸಬೇಕು, ಯಶವಂತಸಿಂಹನು ಗತಿಸಿದ ಮೇಲೆ ನಾನು ಇತ ರರನ್ನು ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಿರುವೆನು. ಯಶವಂತಸಿಂ ಹನೊಡನೆ ದುರ್ಗಾಸಿಂಹನ ಪ್ರಾಣವು ಕೂಡ ಹೋಗಿರುವುದೆಂದು ತಿಳಿದು ಮನ್ನಿ ಸಬೇಕು.” ಎಂದು ಉತ್ತರವಿತ್ತನು. ಅದಕ್ಕೆ ಬಾದಶಹನು ನಗುತ್ತ ಸರಿಯೆ, ಅವಸರವೇನೂ ಇಲ್ಲ, ನೀನೂ ನಿನ್ನ ತಂಗಿಯೂ ಸೇರಿ ಈ ವಿ ಷಯದಲ್ಲಿ ಚೆನ್ನಾಗಿ ಆಲೋಚಿಸಿರಿ. ಯುಕ್ತಾಯುಕ್ತಗಳನ್ನು ಆಲೋ ಚಿಸಿ, ಆಬಳಿಕ ನಿಮ್ಮ ಅಭಿಪ್ರಾಯಗಳನ್ನು ನನಗೆ ತಿಳಿಸಿರಿ. ” ಎಂದು