ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಮಲಾದೇವಿ ೩೩೩ ಒಂದು ದಿನ ಒಬ್ಬ ಫಕೀರನು ಕೋಟೆಯೊಳಗೆ ಪ್ರವೇಶಿಸಿ ಜನಾನಾಕ್ಕೆ ಹೋಗುತ್ತಿದ್ದನು. ರಾಣೀವಾಸವನ್ನು ಪ್ರವೇಶಿಸಲು ಸರ್ವರಿಗೂ ಅನುಮ ತಿಯಿಲ್ಲ ವಾದರೂ ಸ್ವಮತಪ್ರಸಾರಕನಾದ ಔರಂಗಜೇಬನು ಪಕೀರರನ್ನು ಮಾತ್ರ ಒಳಗೆ ಬಿಡಬಹುದೆಂದು ಆಜ್ಞೆ ಮಾಡಿದ್ದನು. ಈ ಕಾರಣದಿಂದ ಪಟ್ಟಣದಲ್ಲಿದ್ದ ಫಕೀರರು ನಿರಾತಂಕವಾಗಿ ಅಂತಃಪುರಕ್ಕೆ ಹೋಗಿ ಬರುತ್ತಿ ದೃರು. ಹಾಗೆಯೇ ನಮ್ಮ ಫಕೀರನು ದ್ವಾರಪಾಲಕರ ಅಪ್ಪಣೆಯಿಲ್ಲದೆ ಸ್ನೇಕೆ ಯಾಗಿ ಒಳಹೊಕ್ಕು ಜನಾನೆಯಲ್ಲಿ ತಿರುಗಾಡುತ್ತಿದ್ದನು. ಕಾಷಾ ಯಾಂಬರಧಾರಿಯಾಗಿ ಹಲವು ಬಣ್ಣದ ಹರಳುಗಳುಳ್ಳ ಹಾರವನ್ನು ಕಂಠದಲ್ಲಿ ಧುಸಿ ಸದಾ ಅಲ್ಲಾಧ್ಯಾನಪರನಾಗಿರುವಂತೆ ನಟಿಸುತ್ತಿದ್ದ ಆ ನಮ್ಮ ಫಕೀರ ನನ್ನು ನೋಡಿ ಅಲ್ಲಿದ್ದ ಮಹಮ್ಮದೀಯರು ಪ್ರತಿದಿನವೂ ಸ್ವಲ್ಪ ಅಕ್ಕಿ ಯನ್ನೂ ಕೆಲವು ಕಾಸುಗಳನ್ನೂ ಕೊಡುತ್ತಿದ್ದರು. ಆತನು ಆಗಾಗ ಅರಬ್ಬಿ ಫಾರಸೀ ಪದ್ಯಗಳನ್ನು ಹೇಳುತ್ತ, ವೇಹಮ್ಮದೀಯರೆಲ್ಲರೂ ಪ್ರತಿ ದಿನವೂ ಕುರಾನನ್ನೋದಬೇಕೆಂದೂ ಸಾಯಂಕಾಲ ಅಲ್ಲಾ .ಪ್ರಾರ್ಥನೆ ಮಾ ಡಬೇಕೆಂದೂ ಒಂದ ಫಕೀರರೆಲ್ಲರನ್ನೂ ಆದರಿಸಬೇಕೆಂದೂ ಉಪದೇಶಿಸುತ್ತಿ ಧ್ವನು, ಈತನ ಉಪದೇಶವನ್ನು ಕೇಳಿದ ಮಹಮ್ಮದೀಯರೆಲ್ಲರೂ ಈತನು ಇತರ ಫಕೀರರಂತಲ್ಲದೆ ದಿವ್ಯಜ್ಞಾನವುಳ್ಳವನೆಂದು ತಿಳಿದು ಅತ್ಯಂತ ಗೌರವ ವನ್ನು ತೋರಿಸುತ್ತಿದ್ದರು. ಫಕೀರನು ಸ್ವಲ್ಪ ಹೊತ್ತು ಅತ್ತಿತ್ತ ತಿರುಗಾಡಿ ಕ್ರಮಕ್ರಮವಾಗಿ ಉದಯಪುರಿಯ ಜನಾನಾವನ್ನು ಸಮೀಪಿಸಿ ಅರಬ್ಬಿ, ಪಾರಸಿ ಪದ್ಯಗಳನ್ನು ಹಾಡತೊಡಗಿದನು. ಉಪ್ಪರಿಗೆಯಲ್ಲಿದ್ದ ಉದಯಪು ರಿಯು ಇಂದಿರೆಯೊಡನೆ ಇಳಿದು ಬರುತ್ತ ಪಕೀರನ ಹಾಡುಗಳಿಗೂ ಪದ್ಧ ಳಿಗೂ ಸಂತೋಷ ಪಟ್ಟು, ಇಂದಿರೆಯ ಕೈಗೆ ಒಂದು ಮೊಸರಿಯನ್ನು ಕೊಟ್ಟು ಫಕೀರನಿಗೆ ಕೊಡುವಂತೆ ಕಳುಹಿದಳು. ಇಂದಿರೆಯು ಕೂಡಲೆ ಫಕೀರನ ಬಳಿಗೆ ಬಂದು--"ಫಕೀರಚೇ, ನಮ್ಮ ಉದಯಷರಿ ಮಹಾರಾಣಿಯವರು ನಿಮಗೆ ಈ ಬಹುಮಾನವನ್ನು ಕೊಟ್ಟು ಬಾರೆಂದು ಕಳುಹಿರುವರು. ತೆಗೆಯು ಕೊಳ್ಳಿ” ಎಂದು ಹೇಳಿ ಆ ಮೊಹರಿಯನ್ನು ಆತನಿಗೆ ಕೊಟ್ಟಳು. ಫಕೀ