ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪ ಕರ್ಣಾಟಕ ನಂದಿನಿ ರನು ಅತ್ಯಂತ ಸಂತೋಷದಿಂದ ಇಂದಿರೆಯು ಕೊಟ್ಟ ಬಹುಮಾನವನ್ನು ಸ್ವೀಕರಿಸಿ ಒಂದುಸಲ ಅವಳ ಮುಖಕಮಲವನ್ನು ನೋಡಿದನು, ಈ ವರೆಗೂ ಪರಬ್ರಹ್ಮನನ್ನು ತಿಳಿಯಬೇಕೆಂದಿದ್ದ ಆತನ ಅಂತರ್ದೃಷ್ಟಿಯು ಇಂದಿರೆಯನ್ನು ನೋಡಿದೊಡನೆಯೇ ವಿಕಾಸಹೊಂದಿತು. ಆತನು ಸ್ವಲ್ಪ ಹೊತ್ತು ಯೋಚಿಸಿ ಕಡೆಗೆ “ ಶುಭಾಂಗಿ, ನೀನು ಯಾರು!” ಎಂದು ಸಾಹಸದಿಂದ ಕೇಳಿದನು. ಇಂದಿರಾ :- ನಾನು ಉದಯಪುರಿಬೇಗಮರವರ ದಾಸಿ ಫಕೀರ :- ನೀನು ಮುಸಲ್ಮಾನಬಾಲೆಯೊ ! ಹಿಂದೂ ಬಾಲೆಯೊ ? ಇಂದಿರಾ:- ನಾನು ಹಿಂದೂಬಾಲೆಯೇ ಫಕೀರ:-ಹಾಗಾದರೆ ನೀನು ಇಲ್ಲಿಗೆ ಬರಲು ಕಾರಣ ? ಇಂದಿರಾ:- ನನ್ನ ಗ್ರಹಚಾರವು ನನ್ನ ಸ್ನಲ್ಲಿಗೆ ಕರೆತಂದಿರುವುದು. ಫಕೀರನು ಇನ್ನೂ ಸ್ವಲ್ಪ ಹೊತ್ತು ಅವಳೊಡನೆ ಮಾತನಾಡಬೇಕೆಂದ್ರ ಪ್ರಯತ್ನ ಪಡುತ್ತಿದ್ದಂತೆಯೇ ಇಂದಿರೆಯು ಅಲ್ಲಿ ನಿಲ್ಲದೆ ಹೊರಟು ಹೋದಳು. ಫಕೀರನು ಅವಳ ಕಡೆಯೆ: ದೃಷ್ಟಿಯಿಟ್ಟನು. ನೋಡುನೋಡುತ್ತಿದ್ದಂ ತೆಯೇ ಆತನ ಮುಖವು ಯೋಚನೆಗೆ ಗುರಿಯಾದಂತೆ ತೋರುತ್ತ ಒಂದಿತು. ಫಕೀರನು ಸ್ವಲ್ಪ ಹೊತ್ತು ಅಲ್ಲಿದ್ದು ಆ ಬಳಿಕ ಅಲ್ಲಿಂದ ಹೊರಟು ಹೋಗಿ ಅಂದಿನಿಂದ ದಿನವೂ ತಪ್ಪದೆ ಉದಯಪುರಿಯ ಜನಾನಾವನ್ನು ಸಮಿಾಪಿಸಿ ಭಿಕ್ಷಾಟನೆಯನ್ನು ಮಾಡುತ್ತಿದ್ದನು. ಅಲ್ಲಿದ್ದ ಸೇವಕರೂ ದ್ವಾರಪಾಲ ಕರೂ ಫಕೀರನಲ್ಲಿ ಅತ್ಯಂತ ಭಕ್ತಿಶ್ವಾಸಗಳುಳ್ಳವರಾಗಿದ್ದರು. ಆದುದ ರಿಂದ ಫಕೀರನು ಆಗಾಗ ತನ್ನ ವಾಕ್ಷಾತುರ್ಯದಿಂದ ಇಂದಿರೆಯ ಪ್ರಸ್ತಾ ಪವನ್ನೆತ್ತಿ ಅವರಿಗೆ ಯಾವವಿಧವಾದ ಅನುಮಾನವೂ ಉಂಟಾಗದರೀತಿ ಉಪಾಯದಿಂದ ಅವಳ ಆಚಾರ, ವಿಚಾರಗಳನ್ನೂ ದಾಸೀವೃತ್ತಿಯಲ್ಲಿದ್ದರೂ ಅವಳ ಸ್ವಮತಾಭಿಮಾನ, ಗೌರವಬುದ್ದಿ, ಧರ್ಮಚಿಂತನೆ, ಧೈರ್ಯ, ಸ್ಟೈ ರ್ಯಾದಿ ಸೌಶೀಲ್ಯಗಳನ್ನೂ ಕೇಳಿ ಅತ್ಯಂತ ಸಂತೋಷಪಟ್ಟನು. ಹಾಗೆಯೇ ದುರ್ಗಾದಾಸನ ವಿಚಾರವನ್ನೂ ತಿಳಿದನು. ... ಇಂದಿರಾ ದುರ್ಗಾದಾಸರನ್ನು