ವಿಷಯಕ್ಕೆ ಹೋಗು

ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ಅAಳಿ ನ್ನುಂಟುಮಾಡಲಿ ? ನಾನು ಯಾವಾಗಲೂ ಸುಳ್ಳು ಹೇಳುವುದಿಲ್ಲ, ಎಷ್ಟು ಬೇಕಾದರೂ ಪರೀಕ್ಷಿಸಬಹುದು. ಫಕೀರ°:.ಹಾಗಾದರೆ, ನನ್ನ ಪ್ರಶ್ನೆಗಳಿಗೆ ನಿಜವಾದ ಉತ್ತರಗ ಭನ್ನು ಕೊಡು. ಆ ಬಳಿಕ ವಿಚಾರಮಾಡುವೆನು, ಆ ದಿನ ನಿಮ್ಮ ಬೇಗಂ ರವರ ಚಂದ್ರಹಾರವನ್ನು ನೀನೇನು ಮಾಡದೆಯೋ ಹೇಳು ? ಫರುಕ್:-(ತನ್ನ ಕಳ್ಳತನವನ್ನು ಈತನು ಹೇಗೆ ತಿಳಿದನೆಂದು ವಿಸ್ಮಿ ತನಗಿ) ಸ್ವಾಮೀ ! ಅದು ಚಂದ್ರಹಾರವಲ್ಲ, ಸೂರ್ಯಹಾರ ; ಅದನ್ನು ಒಬ್ಬ ವರ್ತಕನಿಗೆ ಮಾರಿದೆನು. ಫಕೀರ್:-ಶಹಬಾಸ್ ! ನಿಜವನ್ನು ಹೇಳಿದೆ. ನನಗೆ ತಿಳಿದಿದ್ದರೂ ನಿನ್ನನ್ನು ಪರೀಕ್ಷಿಸಲು ಹಾಗೆ ಕೇಳಿದೆ. ಆಗಲಿ, ನಿಮ್ಮ ಬೇಗಂ ಎಷ್ಟು ಮಂದಿಯನ್ನು ಸೆರೆಯಲ್ಲಿಟ್ಟಿರುವಳೋ ಹೇಳು ? ಫರುಕ್:- ಇಪ್ಪತ್ತು ಮೂರು ಜನರು ಸರೆಯಲ್ಲಿರುತ್ತಾರೆ. - ಫಕೀರನು ತನ್ನ ಬೇಬಿನಲ್ಲಿದ್ದ ಕಾಗದವನ್ನು ಹೊರಗೆ ತೆಗೆದು ಅದರ ಇದ್ದ ಉಳಿದ ಸಾಲುಗಳನ್ನು ಮುಚ್ಚಿ ಫರುಕ್ ಪೈರನು ಹೇಳಿದ ಸಂಖ್ಯೆ ಯನ್ನು ಮಾತ್ರ ತೋರಿಸಿ, ತನಗೆ ಎಲ್ಲವೂ ತಿಳಿದಿರುವುದೆಂಬುದಕ್ಕೆ ಇದೇ ನಿದರ್ಶನವೆಂದನು. ಫರುಕ್ ಪೈರನು ಮತ್ತೂ ಒಸ್ಮಿತನಾಗಿ ಫಕೀರನನ್ನೇ ನೋಡುತ್ತ ನಿಂತನು. ಫಕೀರ:-ಫರುಕ್‌ ಫೈರ್‌ ! ನಿನ್ನಿನ ರಾತ್ರಿ ನಿನ್ನ ಬೇಗಮಿನ ಅಪ್ಪ ಣೆಯಂತೆ ನೀನೇನು ಮಾಡಿರುವೆಯೋ ಹೇಳು. ಹಿಂತೆಗೆಯುತ್ತಿರುವೆಯೇಕೆ ? ನಾನೆಲ್ಲವನ್ನೂ ದಿವ್ಯದೃಷ್ಟಿಯಿಂದ ತಿಳಿದಿರುವೆನು, ನಿನ್ನ ಸತ್ಯಸಂಧತೆಯ ಪರೀಕ್ಷಾರ್ಥವಾಗಿ ಕೇಳಿರುವೆನು. ನಿಜವನ್ನು ಹೇಳು.