ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೦ ರ್ಕಟಕ ನಂದಿಸಿ - ಫರುಕ್‌ಪೈರ್: ಫಕೀರಜೀ ! ನನ್ನಲ್ಲಿ ನೀವು ಇನ್ನಾ ದರೂ ನಂಬಿ ಕೆಯುಳ್ಳವರಾಗಬೇಕು, ನಮ್ಮ ಬೇಗಮರು ಉದಯಪರಿಬೇಗಮರ ದಾಸಿ ಯಾದ ಹಿಂಗೂಬಾಲೆಯೊಬ್ಬಳನ್ನು ಕೊಲ್ಲಿಸಬೇಕೆಂದು ಯೋಚಿಸಿ, ಅವ ಳನ್ನು ಹಿಡಿದು ತರಬೇಕೆಂದು ನನಗಾಜ್ಞಾಪಿಸಿದರು. ೨.೩ ದಿನಗಳಿಂದಲೂ ಆಕೆಯನ್ನು ಹಿಡಿಯಲು ಪ್ರಯತ್ನಿಸಿದರೂ ಸಮಯವು ಸಾಧಿಸಲಿಲ್ಲ, ನಿನ್ನಿನ ರಾತ್ರಿ ಹಿಡಿದುಕೊಂಡು ಒಂದು ಕಾರಾಗೃಹದಲ್ಲಿಟ್ಟೆನು. ಯಾರೊಡನೆಯೂ ಹೇಳಕೂಡದೆಂದು ನಮ್ಮ ಬೇಗಮರ ಅಪ್ಪಣೆಯಾಗಿರುವುದರಿಂದ ಹೇಳಲು ಹಿಂದೆಗೆದೆನು. ಫಕೀರ: ಸಂತೋಷವಾಯಿತು, ಫರುಕ್ಪೈರ್ ! ನಿನಗೆ ಯಜ ಮಾನಿಯಲ್ಲಿರುವ ಭಕ್ತಿ ಸು ತ್ಯವಾದುದೇಸರಿ, ಕಾಫರರು ಅತಿದುರ್ಮಾ ರ್ಗರು, ಅವರನ್ನೇ ನುಮಾಡಿದರೂ ತೀರದು. ಇನ್ನು ನಿನ್ನಲ್ಲಿ ಸಂಶಯ ಪಡುವುದಿಲ್ಲ, ನಿನ್ನ ಅದೃಷ್ಟವು ಚನ್ನಾಗಿರುವುದರಿಂದ ಹಿಂದೆ ಎಷ್ಟೋ ಜನರು ಪ್ರಾರ್ಥಿಸಿದರೂ ಅಲಭ್ಯವಾದ ಉಂಗುರವು ಈಗ ನಿನಗೆ ಲಭಿಸಿರು ವುದು. ಇದುಂದ ನಿನ್ನ ಕೋರಿಕೆಯನ್ನು ನೆರವೇರಿಸಿಕೊಳ್ಳಬಹುದು. ಹೀಗೆ ಹೇಳಿ ತನ್ನ ಚೀಲದಲ್ಲಿದ್ದ ಉಂಗುರವೊಂದನ್ನು ತೆಗೆದು ಆತನ ಕೈಬೆರಳಿಗೆ ತಾನೇ ಹಾಕಿ -“ಅಯ್ಯಾ, ಫರುಕ್‌ಪೈರ್‌ ! ಹೀಗೆಯೇ ನಿಜವನ್ನು ಹೇಳುತ್ತಿರಬೇಕು ; ಎಚ್ಚರಿಕೆಯಿರಲಿ !” ಎಂದು ಎಚ್ಚರಿಸಿ ದನು. ವ್ಯಾಘ್ರನಖದಿಂದ ಮಾಡಲ್ಪಟ್ಟ ಉಂಗುರಗಳು ಸಾಮಾನ್ಯ ವಾಗಿ ಫಕೀರರಲ್ಲಿರುವುವು. ಫಕೀರರು ಆ ಉಂಗುರಗಳನ್ನು ತಮ್ಮ ಕೈಯಿಂ ದಲೇ ತೆಗೆದು ಕೊಟ್ಟರೆ ಅವು ಅತ್ಯಂತ ಮಹತ್ವವುಳ್ಳು ಎಂದು ಮಹಮ್ಮ ದೀ ಯರ ನಂಬಿಕೆ. ಇದಲ್ಲದೆ ಅವರಿಗೆ ಜ್ಯೋತಿಷದಲ್ಲಿಯೂ ನಂಬಿಕೆಯಿರು ವುದು, ಈ ಕಾರಣದಿಂದ ಫರುಕ ಪೈರನು ಫಕೀರನೆ ಮಾತಿನಲ್ಲಿ ಪೂರ್ಣ ವಿಶ್ವಾಸವಿಟ್ಟು ಆತನನ್ನು ಕುರಿತು ನವ್ರಭಾವದಿಂದ_ ಫಕೀರಜೀ, ಇನ್ನು ನನಗೆ ಅಪ್ಪಣೆಯಾಗಬೇಕು, ನಮ್ಮ ಬೇಗಮರು ಉದಯಕ್ಕೆ ಸರಿಯಾಗಿ