ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ, ೨೪೧ ಬರಹೇಳಿದ್ದರು ಇಷ್ಟು ಹೊತ್ತಾಯಿತು. ಇನ್ನು ಹೋದರೆ....... ಯಾವ ಶಿಕ್ಷೆ ಯಾದೀತೋ ತಿಳಿಯದು. ” ಎಂದು ಹೇಳಿದನು. ಅದಕ್ಕೆ ಫಕಿ ರನು ನಿನಗಿಷ್ಟು ಭಯಕ್ಕೆ ಕಾರಣವಿಲ್ಲ. ನಿನ್ನ ಉಂಗುರದ ಮಹಿಮೆ ಯನ್ನು ಪರೀಕ್ಷಿ ಸಲು ನೀನು ಒಂದುಸಲ ನಿಮ್ಮ ಬೇಗಮಿನ ಬಳಿಗೆ ಹೋಗಿ ಬಾ, ನೀನು ಬರುವವರೆಗೂ ನಾನಿಲ್ಲಿಯೇ ಇರುವೆನು, ಉಳಿದ ಮಾತು ಆಮೇಲಾಗಲಿ ” ಎಂದನು. ಕೂಡಲೆ ಫರಕ ಪೈರನು ರೋಷನಾರೆ ಯನ್ನು ಕಾಣಲು ಹೊರಟನು. ರೋಷನಾರಿಯು ತನ್ನ ಅಂತಃಪುರದಲ್ಲಿ ಒಬ್ಬಳೇ ಕುಳಿತು ಇಂದಿರೆ ಯನ್ನು ಕೊಂದು ತನ್ನ ಇಪ್ಪವನ್ನು ಈಡೇರಿಸಿಕೊಳ್ಳುವ ಆಲೋಚನೆಯ ಲ್ಲಿಯ ಅದಕ್ಕೆ ಕಾರಣಭೂತನಾದ ಫರುಕಪೈರನನ್ನು ಇನ್ನೂ ಹೆಚ್ಚಾಗಿ ಮನ್ನಿಸಿ ಉಬ್ಬಿ ಸಬೇಕೆಂಬ ಆಲೋಚನೆಯಲ್ಲಿಯ ಇದ್ದಳು, ಅದೇ ಸಮು ಯದಲ್ಲಿಯೇ ಫರುಕ್‌ಪೈರನು ಅವಳ ಮುಂದೆ ಬಂದು ನಿಲ್ಲಲು, ಅವಳು ಸಂತೋಷದಿಂದ_“ಶಾಬಾಸ! ಫರುಕಪೈರ್! ನಿನ್ನ ಚಾತುರ್ಯಕ್ಕೂ ಸ್ವಾಮಿಭಕ್ತಿಗೂ ಮೆಟ್ಟಿದೆ. ನಿನ್ನ ಸಾಹಸಕ್ಕೆ ಸಂತೋಷಪಟ್ಟು ಈ ಕಾಸಿನಸರವನ್ನು ಬಹುಮಾನವಾಗಿ ಕೊಡುವೆನು ತೆಗೆದುಕೊ, ಇನ್ನು ಮುಂದೆ ನಿನಗಾವ ಕೊರತೆಯೂ ಉಂಟಾಗದಂತೆ ನೋಡಿಕೊಳ್ಳುವೆನು. ಧೈರ್ಯವಾಗಿರು ; ನಿನ್ನಿಷ್ಟ್ಯವು ನೆರವೇರುವುದು ” ಎಂದು ಹೇಳಿದಳು. ರೋಷನಾರೆಯ ಸ್ತುತಿವಚನವನ್ನು ಕೇಳಿ ಫರುಕಪೈರನು ಇದೆ ಲ್ಲವೊ ತನ್ನ ಬೆರಳಿನಲ್ಲಿರುವ ಉಂಗುರದ ಪ್ರಭಾವವೆಂದೆಣಿಸಿ ಮನಸ್ಸಿನಲ್ಲಿ ಹಿಗ್ಗುತ್ತಿದ್ದನು, : ರೆಡನಾರೆಯು ಸ್ವಲ್ಪ ಹೊತ್ತು ಅವನೊಡನೆ ಆಲೋ ಚಿಸಿ, ಇಂದಿರೆಯನ್ನು ಕೊಲ್ಲುವ ವಿಷಯದಲ್ಲಿ ಸೂಚನೆಗಳನ್ನು ಕೊಟ್ಟು ಕಳುಹಿದನು. .ಫರುಕ'ಪೈರನು ಅವಳ ಅಪ್ಪಣೆಯನ್ನು ಹೊಂದಿ ಅಲ್ಲಿಂದ ಹೊರಟ್ಟು ತನಗಾಗಿ ಕಾದಿದ್ದ ಫಕೀರನ ಬಳಿಗೆ ಬಂದು ಕೈಜೋಡಿಸಿ ಕೊಂಡು ನಿಂತನು. 31