ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೨ ಕರ್ಣಾಟಕನಂದಿನಿ. ಫಕೀರನು ದೂರದಿಂದಲೇ ಅವನ ಕೊರಳಲ್ಲಿದ್ದ ಕಾಸಿನಸರವನ್ನೂ ಅವನ ಮುಖದಲ್ಲಿ ತೋರುತ್ತಿದ್ದ ಉತ್ಸಾಹವನ್ನೂ ನೋಡಿ ಬಳಿಗೆ ಬಂದ ಬಳಿಕ' ನೋಡಿದಿಯಾ ಫರುಕಪೈರ್? ಉಂಗುರದ ಮಹಿಮೆ ಈಗ ಗೊತ್ತಾಯಿತೆ? ನಿನ್ನನ್ನು ನಿನ್ನ ಯಜಮಾನಿ ಎಷ್ಟು ಉಪಚರಿಸಿದಳು? ಈ ಕಾಸಿನಸರದಿಂದ ನೀನು ಹೊಸವದವಣಿಗನಂತೆಯೇ ಕಾಣುತ್ತಿರುವೆ. ನಿನ್ನ ಅದೃಷ್ಟವು ಚನ್ನಾಗಿದೆಯೆಂದು ನಂಬು ” ಎಂದನು. ಫರುಕಪೈರನು ತಾನು ಹೇಳದೆಯೇ ಫಕೀರನು ಎಲ್ಲವನ್ನೂ ತಿಳಿದವನಂತೆ ಆಡುತ್ತಿರುವು ದನ್ನು ಕೇಳಿ ಆಶ್ಚರ್ಯದಿಂದ ಸುಮ್ಮನೆ ನಿಂತನು. ಫಕೀರ:-ಎಕೆ; ಮಾತನಾಡುವುದಿಲ್ಲ ? ಆಶ್ಚರ್ಯವೇಕೆ? ಅವಳು ನಿನ್ನಲ್ಲಿ ಕೆಲವು ರಹಸ್ಯಗಳನ್ನು ಕೂಡ ಹೇಳಿಲ್ಲವೆ ? ನನಗೆ ಅದು ಕೂಡ ಗೊತ್ತಾಗಿದೆ. ಫರುಕ್:-ಫಕಿರ್ಜಿ! ಅನುಗ್ರಹಿಸಬೇಕು, ನೀವು ಸಾಕ್ಷಾತ್ ಅಲ್ಲಾ ಅವತಾರವೇ ಆಗಿರುವಿರಿ, ನಿಮ್ಮ ಉಂಗುರವು ನನಗೆ ಬಹಳ ಸಹಾಯ ಮಾಡಿತು, ನಮ್ಮ ಬೇಗನರು ನನ್ನನ್ನು ನೋಡಿದೊಡಯೆ ಈ ಕಾಸಿನಸರವನ್ನು ಕೊಟ್ಟರು. ಫಕೀರ:-ಅಷ್ಟೇ ಅಲ್ಲ; ಈ ಉಂಗುರದ ಪ್ರಭಾವವು ನಿನ್ನ ಶರೀ ರದಲ್ಲಿ ವ್ಯಾಪಿಸಿತೆಂದರೆ ನಿಮ್ಮ ಬೇಗವಳು ನಿನ್ನನ್ನು ನಿಜವಾಗಿಯೂ ಪ್ರೇಮಭರದಿಂದ ಆಲಿಂಗಿಸಿಕೊಳ್ಳುವಳು. ಫರುಕ್:-ಫಕಿರ್ಜಿ! ಅಷ್ಟಾದರೆ ನನ್ನ ಭಾಗ್ಯಕ್ಕೆ ಎಣೆಯೇ ಇಲ್ಲ! ಫಕೀ‌:-ಇರಲಿ, ನಿನ್ನನ್ನು ಇನ್ನೂ ಕೆಲವು ದಿನಗಳ ವರೆಗೆ ಪರೀಕ್ಷೆ ಸಬೇಕೆಂದಿರುವೆನು. ಇದಕ್ಕಿಂತಲೂ ಉತ್ತಮವೂ ಅಧಿಕ ಮಹ ತ್ವವುಳ್ಳವೂ ಆಗಿರುವ ಉಂಗುರಗಳು ನನ್ನಲ್ಲಿರುವುವು, ಅವನ್ನು ಧರಿ ಸುವುದರಿಂದ ಸಮ್ರಾಟನ ಅರ್ಧಾಸನದಲ್ಲಿ ಕುಳಿತುಕೊಳ್ಳುವಷ್ಟು ಸನ್ಮಾ ನವನ್ನೂ ಜಗನ್ನೋಹಕ ಸ್ವರೂಪವನ್ನೂ ಹೊಂದಬಹುದು. ಆದರೆ,