ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೪ ಕರ್ಣಾಟಕನಂದಿನಿ. m > - ಫರುಕ್:-ಫಕಿರ್ಜಿ ! ತಿಳಿದೂ ಹೀಗೆ ಕೇಳುವುದನ್ನು ನೋಡಿ ದರೆ ಇನ್ನೂ ನನ್ನ ಮೇಲೆ ನಂಬಿಕೆಯಾಗಿಲ್ಲವೆಂದು ಊಹಿಸಬೇಕಾಗಿದೆ. ರಾತ್ರಿ ಎರಡು ಚಾವವಾದರೆ ಎಲ್ಲರೂ ನಿದ್ರೆಯಲ್ಲಿರುವರು ; ಯಾರಿಗೂ ತಿಳಿಯುವುದಿಲ್ಲ. ಅದಲ್ಲದೆ ದಕ್ಷಿ ಣಬುರುಜು ಒಂದು ಮಲೆಯಲ್ಲಿದೆ. ಅಲ್ಲಿ ವಿಶೇಷ ಜನಸಂಚಾರವೂ ಇಲ್ಲ. ಅದೆಲ್ಲವೂ ಹಾಗಿರಲಿ ? ಫಕೀರ:- ಅದೇನು, ಹೇಳು_ಅನುಮಾನವೇಕೆ ? ಫರುಕ್:-ನಾನು ಈ ಕರ ಕಾರ್ಯವನ್ನು ಮಾಡುವೆನಲ್ಲಾ, ಇದರಿಂದ ನನಗೆ ಪಾಪಸಂಘಟನೆಯಾಗುವುದಿಲ್ಲವೆ ? ಫಕೀರ:-ನಿನಗೇಕೆ ಪಾಪವಾಗುವುದು ? ಸ್ವಾಮಿವಾಕ್ಯವನ್ನು ಮಾರಿದರೆ ಮಾತ್ರ ಪಾಪಕ್ಕೆ ಗುರಿಯಾಗಬೇಕಾದೀತು! ಸ್ವಾಮಿನಾ ಕ್ಯದಂತೆ ಎಂತಹ ಕಾರ್ಯವನ್ನು ಮಾಡಿದರೂ ಪ್ರಣ್ಯವೇ ಬರುವುದೆಂದು ಖುರಾನದ ಲ್ಲಿದೆ. ನಮ್ಮ ಪೈಗಂಬರರ ಹೀಗೆಯೇ ಹೇಳಿರುವರು. ಇದಲ್ಲದೆ, ಅತ್ಯಂತ ಮಹತ್ವವುಳ್ಳ ಉಂಗುರವು ನಿನ್ನ ಕೈಯಲ್ಲಿರುವವರೆಗೂ ನಿನಗೆ ಪಾಪಭೀತಿ ಯು ಬರುವುದಿಲ್ಲ, ನಿರ್ಭಯವಾಗಿ ನಿಮ್ಮ ಬೇಗನಳ ಮಾತನ್ನು ನಡೆಯಿಸು. ಫರುಕ್:ಇನ್ನು ಅಪ್ಪಣೆಯಾಗಲಿ, ನಾನು ಈ ರಾತ್ರಿಯೇ ಬೇಗ ಮರ ಆಜ್ಞೆಯನ್ನು ನಡೆಸಬೇಕಾಗಿದೆ, ಫಕೀರನು ಫರುಕಪೈರ್‌ನಿಂದ ರಹಸ್ಯವನ್ನೆಲ್ಲ ತಿಳಿದು ಅವನನ್ನು ಉಬ್ಬಿಸಿ, ಮತ್ತೆ ನಾಳೆ ತನ್ನನ್ನು ನೋಡುವಂತೆ ಹೇಳಿ ಅವನನ್ನು ಕಳುಹಿ ತಾನೂ ತನ್ನ ದಾರಿಯನ್ನು ಹಿಡಿದನು.