ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ. ೨೪೫ ಇಪ್ಪತ್ತೊಂಭತ್ತನೆಯ ಪ್ರಕರಣ. (ಅಬೂಪರ್ವತದ ಮೇಲೆ) ವಿಮಲೆಯ ವಿಜ್ಞಾಪನ ಪತ್ರಿಕೆಯನ್ನು ನೋಡಿದುದು ಮೊದಲು ರಾಜಸಿಂಹನು ಅವಳ ಸಂರಕ್ಷಣೋಪಾಯ ಚಿಂತನದಲ್ಲಿಯೆ ನಿರತನಾಗಿ, ವಿಮಲೆಗೆ ಅಭಯ (ವಾಗ್ದಾನ) ಪತ್ರಿಕೆಯನ್ನು ಬರೆದು ತನ್ನ ಸೇವಕನೆ ಬೃನ ಮೂಲಕ ಕೊಟ್ಟು ಕಳುಹಿದನು, ಶಿವ ಸಿಂಗನು ಶ್ಯಾಮಲಪಂಡಿತ ನೊಡನೆ ಪ್ರಯಾಣಮಾಡುತ್ತಿರುವಾಗ ಆತನನ್ನು ಪ್ರತಿಭಟಿಸಿದ ಭಟರಲ್ಲಿ ಇಬ್ಬರು ತಲೆತಪ್ಪಿಸಿಕೊಂಡು ಹೋಗಿ ಪುನಃ ಆತನೇ ಹಿಂತಿರುಗಿ ಬರಬಹು ದೆಂಬ ನಿರೀಕ್ಷೆಯಿಂದ ದಾರಿಯಲ್ಲಿ ಹೊಂಚಿ ಕಾದಿದ್ದವರು, ರಾಜಸಿಂಹ ನಿಂದ ಪತ್ರವನ್ನು ತೆಗೆದುಕೊಂಡು ಬರುತ್ತಿದ್ದವನನ್ನು ಹಿಡಿದು ಅವನಿಂದ ಪತ್ರವನ್ನು ತೆಗೆದು ಕೊಂಡು ಸಾದತಖಾನನಿಗೆ ಒಪ್ಪಿಸಿದರು, ಸದತ್‌ಖಾ ನನು ಅವರ ಅಭಿಪ್ರಾಯವನ್ನು ಗ್ರಹಿಸಿ, ರಾಜಸಿಂಹನೇ ವಿಜಯ ಸಿಂಹ ನಿಗೆ ಸಹಾಯಕನಾಗಿ ಬರುವುದರಿಂದ ತನ್ನ ಸಹಾಯಕ್ಕೆ ಅಧಿಕ ಸೈನ್ಯ ವನ್ನು ಕಳುಹಬೇಕೆಂದು ಬಾದಷಹನಿಗೆ ಬರೆದುಕೊಂಡಿದ್ದನು, ರಾಜಸಿಂ ಹನ ಸೈನ್ಯವು ಯಾವ ಕ್ಷಣದಲ್ಲಿ ಮೇಲೆ ಬೀಳುವುದೋ ಎಂಬ ಭೀತಿ ಯಿಂದ ಅತ್ಯಂತ ಜಾಗರೂ ಕನಾಗಿ ಸೈನ್ಯವನ್ನು ರಹಸ್ಯವಾಗಿರಿಸಿದ್ದನು. ಇy ಉದಯಪುರದಲ್ಲಿಯವ ಸಮರಸನ್ನಾ ಹವು ನಡೆಯುತ್ತಿದ್ದಿತು. ರಾಜಸಿಂಹನು ಕ್ಷಾತ್ರತೇಜಸ್ಸಿಸಿ೦ದಲೂ ಧರ್ಮದಮೇಲಿನ ಅಭಿಮಾನದಿಂ ದಲೂ ಅಬಲೆಯ ಮಾನಸಂ ರಕ್ಷ ಣೆಯನ್ನು ಮಾಡಬೇಕಾದ ಅವಶ್ಯ ಕರ್ತವ್ಯ ಪ್ರೇರಣೆಯಿಂದಲೂ ಮದೋನ್ಮತ್ತನೂ ಕೂರಿಯಆದ ಔರಂಗೆ ಜೇಬನ ಗರ್ವವನ್ನು ಮುರಿದು ಲೋಕಹಿತವನ್ನು ಸಾಧಿಸಬೇಕೆಂಬ ಭಾವ ನೆಯಿಂದಲೂ ಸಮಯದಲ್ಲಿ ಸಹಾಯ ಮಾಡಬೇಕಾದೀತೆಂದು ಸಕಲ ರಾಜ